ನಿತೀಶ್ ಕುಮಾರ್ ನಂತ್ರ ಮುಂದಿನ CM ಯಾರು? ಬಿಹಾರ ಸಿಂಹಾಸನಕ್ಕೆ ಐವರ ನಡುವೆ ಮಹಾ ಪೈಪೋಟಿ
ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿಎಂ ಸ್ಥಾನಕ್ಕಾಗಿ ಪಕ್ಷದ ಐವರು ಪ್ರಬಲ ನಾಯಕರಾದ ಐವರ ಹೆಸರುಗಳು ರೇಸ್‌ನಲ್ಲಿವೆ.

ನಿತೀಶ್ ಕುಮಾರ್ ಬಳಿಕ ಯಾರು?
ಬಿಹಾರ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ನಿರ್ಣಾಯಕ ಹಂತಕ್ಕೆ ಬದಲಾಗುತ್ತಿವೆ. ಎರಡು ದಶಕಗಳ ಕಾಲ ಬಿಹಾರ ಸಿಎಂ ಆಗಿದ್ದ ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಪ್ರಿಲ್ 14ರ ಸಭೆ ಬಳಿಕ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಸೇರಿದಂತೆ ಬಿಹಾರ ರಾಜಕೀಯಕ್ಕೆ ಕುರಿತ ಎಲ್ಲಾ ಗೊಂದಲಗಳಿಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
CM ರೇಸ್‌ನಲ್ಲಿ ಐವರ ಹೆಸರು
ವರದಿಗಳ ಪ್ರಕಾರ, ರಾಜೀನಾಮೆ ಬಳಿಕ ಕ್ಷಿಪ್ರ ವೇಗದಲ್ಲಿ ಹೊಸ ಸರ್ಕಾರದ ರಚನೆಯ ಕೆಲಸಗಳು ನಡೆಯಲಿವೆ. ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮೊದಲ ಬಾರಿಗೆ ಸಿಎಂ ಸ್ಥಾನಕ್ಕೇರುವ ತವಕದಲ್ಲಿದೆ. ಸುಮಾರು 20 ವರ್ಷಗಳ ನಂತ್ರ ಬಿಹಾರದಲ್ಲಿ ಹೊಸ ಸರ್ಕಾರವೊಂದು ರಚನೆಯಾಗುತ್ತಿದೆ. ಸದ್ಯ ಬಿಜೆಪಿಯ ಐವರ ಹೆಸರುಗಳು ಸಿಎಂ ಸ್ಥಾನದ ರೇಸ್‌ನಲ್ಲಿವೆ. ಆ ಐವರು ಯಾರು ಎಂಬುದರ ಮಾಹಿತಿ ಇಲ್ಲಿದೆ.
ಸಾಮ್ರಾಟ್ ಚೌಧರಿ
ಸಿಎಂ ರೇಸ್‌ನಲ್ಲಿ ಡಿಸಿಎಂ ಸಾಮ್ರಾಟ್ ಚೌಧರಿ ಹೆಸರು ಬರುತ್ತದೆ. ಕುಶ್ವಾಹ ಸಮುದಾಯದಿಂದ ಬಂದಿರುವ ಸಾಮ್ರಾಟ್ ಚೌಧರಿ ಪಕ್ಷದ ಪ್ರಬಲ ಒಬಿಸಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಬಿಹಾರ ರಾಜಕೀಯದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ.
ನಿತ್ಯಾನಂದ್ ರಾಯ್
ಬಿಹಾರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾಗಿರುವ ದಿಲೀಪ್ ಜೈಸ್ವಾಲ್ ಸಹ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸಂಘಟನೆ ಮತ್ತು ಆಡಳಿತ ಎರಡಲ್ಲೂ ನಿತ್ಯಾನಂದ್ ರಾಯ್ ಅನುಭವಿ ನಾಯಕರಾಗಿದ್ದಾರೆ.
ದಿಲೀಪ್ ಜೈಸ್ವಾಲ್
ಮೂರು ಬಾರಿ ಎಂಎಲ್‌ಸಿಯಾಗಿರುವ ದಿಲೀಪ್ ಜೈಸ್ವಾನ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ದಿಲೀಪ್ ಅವರು ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಾಯಕರಾಗಿದ್ದಾರೆ.
ಶ್ರೇಯಸಿ ಸಿಂಗ್
ಯುವ ಶಾಸಕಿಯಾಗಿರುವ ಶ್ರೇಯಸಿ ಸಿಂಗ್ ಕ್ರೀಡೆಯಿಂದ ರಾಜಕೀಯಕ್ಕೆ ಬಂದ ನಾಯಕಿ. ಕಠಿಣ ಪರಿಶ್ರಮದಿಂದ ಬಿಹಾರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕಿಯಾಗಿರುವ ಶ್ರೇಯಸಿ ಸದ್ಯ ಕ್ರೀಡಾ ಸಚಿವೆಯಾಗಿದ್ದಾರೆ. ಇವರು ಸಿಎಂ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ಪುರುಷರಿಗೂ ನಿಷೇಧವಿರುವ ದೇಗುಲಗಳಿವೆ: ಶಬರಿಮಲೆ ವಿಚಾರಣೆಯಲ್ಲಿ ಸುಪ್ರೀಂಗೆ ಕೇಂದ್ರದ ಮಾಹಿತಿ
ಸಂಜಯ್ ಜೈಸ್ವಾಲ್
2009ರಿಂದ ಪಶ್ಚಿಮ ಚಂಪಾರನ್ ಸಂಸದರಾಗಿರುವ ಸಂಜಯ್ ಸಿಂಗ್ ಬಿಹಾರ ಬಿಜೆಪಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಬಿಹಾರ ಬಿಜೆಪಿಯ ಮಾಜಿ ಅಧ್ಯಕ್ಷರಾಗಿರುವ ಸಂಜಯ್ ಜೈಸ್ವಾಲ್, ಸಂಯಮ ಮತ್ತು ಸ್ಟ್ರಾಂಗ್ ಲೀಡರ್ ಎಂದು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಜಿಹಾದ್ ನಡೆಸುತ್ತಿದ್ದ ಐಸಿಸ್ ನಂಟಿನ ಉಗ್ರಜಾಲ ಬಯಲು; ವಿದೇಶದಲ್ಲಿನ ಹ್ಯಾಂಡ್ಲರ್‌ಗಳ ಜತೆ ಸಂಪರ್ಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

