ಹವ್ಯಾಸವೇ ಪ್ರೇರಣೆಯಾದಾಗ: ಸರ್ಕಾರಿ ಶಾಲೆ ಸ್ವರೂಪವನ್ನೇ ಬದಲಾಯಿಸಿದ ಐವರು ಫ್ರೆಂಡ್ಸ್!
ಐವರು ಸ್ನೇಹಿತರ ಪೇಂಟಿಂಗ್ ಹವ್ಯಾಸದಿಂದ ಪಾಳು ಬಿದ್ದ ಕಟ್ಟಡದಂತಾಗಿದ್ದ ಸರ್ಕಾರಿ ಶಾಲೆಯೊಂದರ ಸ್ವರೂಪವನ್ನೇ ಬದಲಾಯಿಸಿದೆ. ಲಾಕ್‌ಡೌನ್ ನಡುವೆ ತಮ್ಮ ಪರಿಶ್ರಮದಿಂದ ಈ ಐವರು ಸ್ನೇಹಿತರು ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆ ರೇಂಜಿಗೆ ಬದಲಾಯಿಸಿದ್ದಾರೆ. ಇದನ್ನು ಕಂಡ ಜಿಲ್ಲಾಡಳಿತ ಶಿಕ್ಷಣ ಇಲಾಖೆಯಿಂದ ಅವರಿಗೆ ಪ್ರೋತ್ಸಾಹಿಸಿದ್ದು, ಖುಷಿಯಾದ ಇವರು ಮತ್ತಷ್ಟು ಶಾಲೆಗಳ ಸ್ವರೂಪ ಬದಲಾಯಿಸಲು ಮುಂದಾಗಿದ್ದಾರೆ. ಸದ್ಯ ಈ ಐವರು ಸೇರಿ ವಲಸೆ ಕಾರ್ಮಿಕರ ಸಹಾಯದಿಂದ ಗಯಾದ ಮೂರು ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಿದ್ದಾರೆ. ಸದ್ಯ ಇದನ್ನು ಕಂಡವರೆಲ್ಲಾ ಈ ಮಕ್ಕಳ ಶ್ರಮ ಹಾಗೂ ಸಾಧನೆಗೆ ಸಲಾಂ ಎಂದಿದ್ದಾರೆ. ಅಲ್ಲದೇ ಅತ್ತ ಶಿಕ್ಷಣ ಇಲಾಖೆ ಕೂಡಾ ಕೊರೋನಾತಂಕ ಕಡಿಮೆಯಾಗಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಾಗ ಈ ಐವರು ಮಕ್ಕಳ ಸಹಾಯವನ್ನು ಪಡೆದು ವಿದ್ಯಾರ್ಥಿಗಳಿಗೂ ಈ ಕಲೆ ಕಲಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದೆ.

ಈವರೆಗೂ ಈ ಮೂವರು ಸೇರಿ ಜಿಲ್ಲೆಯ ಮೂರು ಶಾಲೆಗಳನ್ನು ಹೀಗೆ ಸುಂದರವಾಗಿಸಿದ್ದಾರೆ.

ರೋಶನಿ ಟಾಂಕ್, ಶ್ರೇಯಾ ಜೈನ್, ರಾಧಾ ಕುಮಾರಿ, ಖುಷ್ಬೂ ಕುಮಾರಿ ಹಾಗೂ ವಿವೇಕ್ ಟಾಂಕ್ ಈ ಐವರು ಗೆಳೆಯರೇ ತಮ್ಮ ಹವ್ಯಾಸವನ್ನು ಉತ್ಸಾಹವನ್ನಾಗಿಸಿದ್ದಾರೆ. ಇವರೆಲ್ಲಾ ಸೇರಿ ಶಾಲೆಯ ಗೋಡೆಗಳನ್ನು ವಿಭಿನ್ನ ಬಣ್ಣ ಹಾಗೂ ಆಕೃತಿಗಳಿಂದ ಸಿಂಗರಿಸಿದ್ದಾರೆ.

ಈವರೆಗೂ ಈ ಐವರು ಸೇರಿ ಮೂರು ಶಾಲೆಗಳ ಸ್ವರೂಪ ಬದಲಾಯಿಸಿದ್ದು, ಈ ಅಭಿಯಾನವನ್ನು ಮುಂದುವರೆಸಲಿದ್ದಾರೆ. ಇವರಿಗೆ ಚಿತ್ರಕಲೆಯಲ್ಲಿ ಭಾರೀ ಆಸಕ್ತಿ ಇದ್ದು, ತಮ್ಮ ಹವ್ಯಾಸದಿಂದ ಶಾಲೆ ರೂಪವನ್ನೇ ಬದಲಾಯಿಸಿದ್ದಾರೆ.

ಇನ್ನು ಈ ಕೆಲಸ ಮಾಡಲು ಆರಂಭದಲ್ಲಿ ಬಹಳ ಸಮಸ್ಯೆಗಳು ಎದುರಾದವು. ಕಡಿಮೆ ವಯಸ್ಸು ಹಾಗೂ ಕಡಿಮೆ ಅನುಭವ ಇರುವುದರಿಂದ ಈ ತೊಡಕುಗಳು ಎದುರಾದವು ಎಂಬುವುದು ರೋಶನಿ ಮಾತು. ಹಗಿದ್ದರೂ ಸತತ ಪರಿಶ್ರಮದಿಂದ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ ತಮಗೆ ಈ ಕೆಲಸ ಮಾಡಲು ಆದೇಶ ಸಿಕ್ಕಿದ್ದು, ಈ ಆದೇಶದನ್ವಯ ತಮ್ಮ ಹವ್ಯಾಸವನ್ನು ಉಪಯೋಗಿಸಿಕೊಂಡಿದ್ದಾರೆ. ಪೇಂಟಿಂಗ್ ಹವ್ಯಾಸದಿಂದಲೇ ಅವರು ಈ ಕೆಲಸ ಪೂರ್ಣಗೊಳಿಸಿದ್ದಾರೆ.

ಇನ್ನು ಶಿಕ್ಷಣ ಇಲಾಖೆ ಈ ಮಕ್ಕಳಿಗೆ ಪ್ರೋತ್ಸಾಹ ಧನವನ್ನೂ ನೀಡಿದೆ. ಆದರೆ ಹಣ ಸಂಪಾದನೆ ನಮ್ಮ ಉದ್ದೇಶವಲ್ಲ ಎಂಬುವುದು ಈ ಐವರ ಮಾತಾಗಿದೆ. ತಮ್ಮ ಕಾರ್ಯದ ಮೂಲಕ ಜನರಲ್ಲಿ ಸರ್ಕಾರಿ ಶಾಲೆ ಬಗ್ಗೆ ಇರುವ ಅಸಡ್ಡೆ ದೂರವಾಗಿಸುವುದೇ ನಮ್ಮ ಉದ್ದೇಶ. ಅಲ್ಲದೇ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಾಗ ಬದಲಾವಣೆ ಕಂಡು ಬರಲಿ ಎಂದು ಹೀಗೆ ಮಾಡಿದ್ದೇವೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ