- Home
- News
- India News
- Modi in Denmark ಭಾರತೀಯರ ಭಾಷೆ, ಆಹಾರ ಬದಲಾಗುತ್ತೆ, ಒಂದಂತು ಬದಲಾಗಲ್ಲ, ಡೆನ್ಮಾರ್ಕ್ ಭಾರತೀಯರನ್ನುದ್ದೇಶಿ ಮೋದಿ ಭಾಷಣ!
Modi in Denmark ಭಾರತೀಯರ ಭಾಷೆ, ಆಹಾರ ಬದಲಾಗುತ್ತೆ, ಒಂದಂತು ಬದಲಾಗಲ್ಲ, ಡೆನ್ಮಾರ್ಕ್ ಭಾರತೀಯರನ್ನುದ್ದೇಶಿ ಮೋದಿ ಭಾಷಣ!
ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಗಟ್ಟಿಯಾಗಿದೆ ಈ ಶಕ್ತಿ ನಮ್ಮೆಲ್ಲರನ್ನು ಪ್ರತಿಕ್ಷಣ ಜೀವಂತವಾಗಿಸುತ್ತದೆ ಎಂದ ಮೋದಿ ಭಾರತೀಯ ಸಮುದಾಯನ್ನುದ್ದೇಶಿ ಮೋದಿ ಭಾಷಣ, ಡೆನ್ಮಾರ್ಕ್ ಪ್ರಧಾನಿ ಭಾಗಿ

ಕನ್ನಡ, ಮರಾಠಿ, ತಮಿಳು, ತೆಲೆಗು. ಭಾಷೆ ಯಾವುದೇ ಇರಲಿ ಭಾವ ಒಂದೆ. ಆದರೆ ನಮ್ಮ ಸಂಸ್ಕೃತಿ ಭಾರತೀಯತೆ. ನಮ್ಮ ಆಹಾರ, ರುಚಿ, ಭಾಷೆ ಎಲ್ಲವೂ ಬದಲಾಗುತ್ತದೆ. ಆದರೆ ಪ್ರೀತಿಯಿಂದ ಪದೇ ಪದೇ ಮನವಿ ಮಾಡುವ ಭಾರತೀಯ ವಿಧಾನ ಎಂದೂ ಬದಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂದು ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡಿದ ಮೋದಿ ಹಲವು ಮಹತ್ವದ ಚರ್ಚಿತ ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ವೇಳೆ ಭಾರತದಲ್ಲಿನ ಭಾಷಾ ಗುದ್ದಾಟಕ್ಕೂ ಉತ್ತರ ನೀಡಿದ್ದಾರೆ.
ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಗಟ್ಟಿಯಾಗಿದೆ. ಇದೇ ಶಕ್ತಿ ನಮ್ಮೆಲ್ಲರನ್ನು ಪ್ರತಿ ಕ್ಷಣವೂ ಜೀವಂತವಾಗಿಸುತ್ತದೆ. ಸಾವಿರಾರು ವರ್ಷಗಳ ಭಾರತೀಯರ ಮೌಲ್ಯಗಳು ನಮ್ಮ ಶ್ರೇಷ್ಠತೆ ಹಿಡಿದ ಕನ್ನಡಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಕೆಲವರಿಗೆ ಉಪ್ಪಿಗೂ ಮನವಿ ಮಾಡುತ್ತಾರೆ. ಇದು ನಮ್ಮ ಪ್ರೀತಿ, ಆತ್ಮೀಯತೆ, ನೆರೆಹೊರೆಯವರಲ್ಲಿನ ಆತ್ಮೀಯತೆ ವಿಧಾನ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಭಾಷಣದ ನಡುವೆ ಮೋದಿ ಮೋದಿ ಘೋಷಣೆಗಳು, ವಿ ಲವ್ ಯೂ, ಮೋದಿ ಹೈ ತೋ ಮುಮ್ಕಿನ್ ಹೇ ಅನ್ನೋ ಘೋಷಣಗಳು ಮೊಳಗಿತು.
ಭಾರತೀಯ ಸಮುದಾಯದ ಜೊತೆಗಿನ ಮೋದಿ ಕಾರ್ಯಕ್ರಮದಲ್ಲಿ ಡೆನ್ಮಾರ್ಕ್ ಪ್ರಧಾನಿ ಫ್ರೆಡ್ರಿಕ್ಸೆನ್ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಂಪೂರ್ಣ ಕಾರ್ಯಕ್ರಮದಲ್ಲಿ ಹಾಜರಿದ್ದ ಫ್ರೆಡ್ರಿಕ್ಸೆನ್ ಮೋದಿ ಮಾತಿಗೆ ತಲೆದೂಗಿದರು.
ಭಾಷಣದ ಆರಂಭದಲ್ಲೇ ಮೋದಿ, ನನ್ನ ಭಾಷಣ ಕೆಲವೊಮ್ಮೆ ದೀರ್ಘವಾಗಲಿದೆ. ಇದರ ನಡುವೆ ಎದ್ದು ಹೋಗಬೇಕು ಎಂದೆನಿಸಿದರೆ ಸಂಕೋಚ ಪಡಬೇಡಿ ಎಂದು ಡೆನ್ಮಾರ್ಕ್ ಪ್ರಧಾನಿ ಫ್ರೆಡ್ರಿಕ್ಸೆನ್‌ಗೆ ಹೇಳಿದರು. ಈ ವೇಳೆ ಇಡೀ ಸಂಭಾಗಣವೇ ನಗೆಗಡಲಲ್ಲಿ ತೇಲಿತು.
ಸಬ್ ಕಾ ಸಾಥ್ ಎಂದು ಮೋದಿ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ನೆರೆದಿದ್ದ ಭಾರತೀಯ ಸಮುದಾಯ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಹಾಗೂ ಸಬ್ ಕಾ ಪ್ರಯಾಸ್ ಎಂದು ಹೇಳಿದರು. ಈ ವೇಳೆ ಮೋದಿ ನೋಡಿ ಮನೆ ಮನೆಗೆ ಈ ವಾಕ್ಯಗಳು ತಲುಪಿದೆ. ಡೆನ್ಮಾರ್ಕ್‌ನಲ್ಲೂ ಜನಪ್ರಿಯವಾಗಿದೆ ಎಂದರು.
ಭಾರತ ಔಷಧಿಗಳನ್ನು, ಲಸಿಕಗಳನ್ನು ರಫ್ತು ಮಾಡುವ ಮೂಲಕ ಹಲವು ದೇಶಗಳಿಗೆ ನೆರವಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಎದುರಾದಾಗ ಔಷಧಿಸ ಲಸಿಕೆಗಳ ಬೇಡಿಕೆ ಅತೀಯಾಗಿತ್ತು. ಭಾರತ ಔಷಧಿ, ಲಸಿಕೆಗಳ ಉತ್ಪಾದನೆ ಮಾಡದೇ ಇದ್ದಿದ್ದರೆ, ಹಲವು ದೇಶಗಳ ಪರಿಸ್ಥಿತಿ ಏನಾಗುತ್ತಿತ್ತು ಅನ್ನೋದು ಊಹಿಸಲು ಅಸಾಧ್ಯವಾಗಿದೆ ಎಂದು ಮೋದಿ ಹೇಳಿದರು.