ಭಾರತಕ್ಕೆ ಚೀನಾ ಬ್ರಹ್ಮಪುತ್ರ ನೀರು ನಿಲ್ಲಿಸಿದ್ರೆ ಏನಾಗುತ್ತೆ?
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಸ್ಥಗಿತಗೊಳಿಸಿದ ಭಾರತದ ಕ್ರಮಕ್ಕೆ ಪ್ರತಿಯಾಗಿ, ಪಾಕಿಸ್ತಾನ ಚೀನಾವು ಬ್ರಹ್ಮಪುತ್ರ ನದಿಯ ನೀರನ್ನು ತಡೆಯಬಹುದೆಂದು ಬೆದರಿಕೆ ಹಾಕಿದೆ.

ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಸ್ಥಗಿತ ಉಭಯ ದೇಶಗಳ ನಡುವೆ ಕಲಹಕ್ಕೆ ಕಾರಣವಾಗಿರುವ ನಡುವೆಯೇ ಪಾಕ್ ಇದೀಗ ಬ್ರಹ್ಮಪುತ್ರ ನದಿ ವಿಚಾರದಲ್ಲಿ ಭಾರತದ ತಂಟೆಗೆ ಬಂದಿದ್ದು ‘ ಚೀನಾ ಭಾರತಕ್ಕೆ ಬ್ರಹ್ಮಪುತ್ರ ನದಿ ನಿಲ್ಲಿಸಿದರೆ ಏನಾಗಬಹುದು?’ ಎಂದು ಬೆದರಿಕೆಯೊಡ್ಡಿದೆ.
ಈ ಗೊಡ್ಡು ಬೆದರಿಕೆಗೆ ತಿರುಗೇಟು ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ನೀರು ಸಲ್ಲಿಸಿದರೆ ಅಸ್ಸಾಂನಲ್ಲಿ ಪ್ರವಾಹ ಕಾಣಿಸಿಕೊಳ್ಳುವುದು ನಿಲ್ಲುತ್ತದೆ ಎಂದಿದ್ದಾರೆ. ಭಾರತ ಸಿಂಧೂ ನದಿ ನೀರು ನಿಲ್ಲಿಸಿದ್ರೆ, ಚೀನಾಗೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸುವಂತೆ ಪಾಕ್ ಮನವಿ ಮಾಡಿಕೊಂಡಿತ್ತು ಎಂದು ವರದಿಯಾಗಿತ್ತು.
ಭಾರತ ಸಿಂಧೂ ನದಿ ಒಪ್ಪಂದ ಸ್ಥಗಿತಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಷ್‌ರ ವಿಶೇಷ ಸಹಾಯಕ ‘ ಭಾರತವು ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ಸ್ಥಗಿತಗೊಳಿಸಿದೆ. ಇದೇ ರೀತಿ ಚೀನಾ ಬ್ರಹ್ಮಪುತ್ರ ನದಿ ವಿಚಾರದಲ್ಲಿ ಇದೇ ರೀತಿ ಭಾರತಕ್ಕೆ ಮಾಡಬಹುದು’ ಎಂದು ಬೆದರಿಕೆ ಹಾಕಿದ್ದಾರೆ.
ಇದರ ಬೆನ್ನಲ್ಲೇ ಚೀನಾದ ಹಿರಿಯ ನೀತಿ ಸಲಹೆಗಾರ ವಿಕ್ಟರ್ ಝಿಕಾಯ್ ಗಾವೊ ‘ನಿಮಗೆ ಇತರರು ಏನು ಮಾಡಬಾರದು ಎಂದು ನೀವು ಬಯಸುತ್ತೀರೋ, ಅದನ್ನು ನೀವು ಇತರರಿಗೆ ಮಾಡಬೇಡಿ’ ಎಂದು ಪರೋಕ್ಷವಾಗಿ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಸಿಂಧೂ ನೀರು ನಿಲ್ಲಿಸಿದ ಭಾರತವನ್ನು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಪಾಲಿಗೆ ಇಂಡಸ್ ಅಥವಾ ಸಿಂಧೂ ಕೇವಲ ನದಿಯಲ್ಲ. ಜೀವನದಿ. ಸಿಂಧೂ ನದಿ ಇಲ್ಲದೆ ಪಾಕಿಸ್ತಾನದ ಜನಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.1960ರ ಸೆಪ್ಟೆಂಬರ್ 19 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಈ ಒಪ್ಪಂದ ನಡೆದಿತ್ತು. ಪಹಲ್ಗಾಮ್ ದಾಳಿ ಬಳಿಕ ಸಿಂಧೂ ನೀರು ನಿಲ್ಲಿಸುವ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಂಡಿದೆ.