MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ, ಜೊತೆಗಿದ್ದ ಯುವತಿ ಯಾರು? ಸದ್ದು ಮಾಡುತ್ತಿದೆ ಚೀನಾ ಸುಂದರಿಯ ಹೆಸರು!

ಪಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ, ಜೊತೆಗಿದ್ದ ಯುವತಿ ಯಾರು? ಸದ್ದು ಮಾಡುತ್ತಿದೆ ಚೀನಾ ಸುಂದರಿಯ ಹೆಸರು!

ನೇಪಾಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಪ್ರವಾಸದಲ್ಲಿದದು, ಸದ್ಯ ಇದಕ್ಕೂ 'ರಾಜಕೀಯ ಗ್ರಹಣ' ಬಡಿದಿದೆ. ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಭಾರತದ ರಾಜಕೀಯದಲ್ಲೂ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ರಾಹುಲ್ ಗಾಂಧಿ ಅವರೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆ ನೇಪಾಳದಲ್ಲಿ ಚೀನಾದ ರಾಯಭಾರಿ ಹೌ ಯಾಂಕಿ ಎಂದು ಹೇಳಲಾಗುತ್ತಿದೆ. Hou Yanqi ಅವರು ಚೀನಾದ ರಾಯಭಾರಿಯಾಗಿದ್ದು, 2018 ರಿಂದ ನೇಪಾಳದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೌ ಯಾಂಕೀ ಅವರನ್ನು 'ಕೆಟ್ಟ ಮಹಿಳೆ' ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಹನಿ ಟ್ರ್ಯಾಪ್ ಲೇಡಿ ಎಂದೂ ಕರೆಯುತ್ತಾರೆ. ಕಳೆದ ಕೆಲವು ವರ್ಷಗಳಿಂದ ನೇಪಾಳ ಮತ್ತು ಭಾರತ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ನೇಪಾಳದಲ್ಲಿ ಚೀನಾದ ಹೆಚ್ಚುತ್ತಿರುವ ರಾಜಕೀಯ ಪ್ರಭಾವದ ಪರಿಣಾಮ ಇದು ಎಂದು ತಜ್ಞರು ಹೇಳುತ್ತಾರೆ. ಪ್ರವಾಸೋದ್ಯಮ, ಭೂಕಂಪದ ನಂತರದ ಪುನರ್ನಿರ್ಮಾಣ, ವ್ಯಾಪಾರ ಮತ್ತು ಇಂಧನವನ್ನು ಗುರಿಯಾಗಿಸಿಕೊಂಡು ನೇಪಾಳದಲ್ಲಿ ಹೂಡಿಕೆ ಮಾಡುವ ಮೂಲಕ ಚೀನಾ ಈ ಉತ್ತಮ ಯೋಜಿತ ಸಂಚು ರೂಪಿಸಿದೆ. ನೇಪಾಳದಲ್ಲಿ ಯಾಂಕೀ ಈ ‘ರಾಜಕೀಯ’ ನಡೆಸುತ್ತಾ ಬಂದಿದ್ದಾರೆ. ನೇಪಾಳದ ಆಗಿನ ಪ್ರಧಾನಿ (ಈಗ ಮಾಜಿ) ಕೆಪಿ ಶರ್ಮಾ ಒಲಿ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದಾರೆ ಎಂಬ ಆರೋಪ ಹೌ ಯಾಂಕೀ ವಿರುದ್ಧ ಕೇಳಿ ಬಂದಿತ್ತು. ಹೌವಿನ ಪ್ರೀತಿಯ ಬಲೆಯಲ್ಲಿ ಓಲಿಯೇ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತದೆ. 

2 Min read
Author : Suvarna News
| Updated : May 03 2022, 03:54 PM IST
Share this Photo Gallery
  • FB
  • TW
  • Linkdin
  • Whatsapp
16

ಒಂದು ಸಮಯದಲ್ಲಿ ನೇಪಾಳವು ಭಾರತವನ್ನು ತನ್ನ ಹಿರಿಯ ಸಹೋದರ ಎಂದು ಪರಿಗಣಿಸಿಸುತ್ತಿತ್ತು. ಆದರೆ ಅವರು ಚೀನಾದ ಒಡ್ಡಿದ ಆಮಿಷಕ್ಕೆ ಸಿಲುಕಿಕೊಂಡರು, ಅದು ಸಂಬಂಧವನ್ನು ಹಾಳುಮಾಡಿತು. ಈಗ ಅವರೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ದೇಶಗಳ ನಡುವೆ ಬಿರುಕು ಮೂಡಿಸುವಲ್ಲಿ ಹೌ ಯಾಂಕಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಹೌ ಯಾಂಕಿಯ ಪ್ರಚೋದನೆಯ ಮೇರೆಗೆ ನೇಪಾಳ ತನ್ನ ನಕ್ಷೆಯಲ್ಲಿ ಲಿಂಪುಯಾಧಾರ, ಕಾಲಾಪಾನಿ ಮತ್ತು ಲಿಪುಲೇಖ್ ಅನ್ನು ತೋರಿಸಿದೆ ಎಂಬುವುದು ಉ;ಲ್ಲೇಖನೀಯ. ಹೌ ಅವರನ್ನು ಬುದ್ಧಿವಂತ ರಾಯಭಾರಿ ಎಂದು ಪರಿಗಣಿಸಲಾಗಿದೆ, ಅವರು ಮೊದಲು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು.
 

26

ಹೌ ಯಾಂಕೀ ತನ್ನ ಫ್ಯಾಷನ್ ಶೈಲಿ ಮತ್ತು ರಣತ<ತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ದಕ್ಷಿಣ ಏಷ್ಯಾ ವ್ಯವಹಾರಗಳ ಉಪ ಮಹಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಲಾಸ್ ಏಂಜಲೀಸ್‌ನಲ್ಲಿ ಚೀನಾದ ಕಾನ್ಸುಲೇಟ್ ಜನರಲ್ ಆಗಿದ್ದಾರೆ.

36

ಮಾರ್ಚ್ 1970 ರಲ್ಲಿ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಜನಿಸಿದ ಹೌ ಯಾಂಕಿ ಮಾಸ್ಟರ್ ಆಫ್ ಆರ್ಟ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಹೌ ಅವರು 1996 ರಿಂದ ಚೀನಾದ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
 

46

2018 ರಲ್ಲಿ ಹೌ ಯಾಂಕಿ ಅವರನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಯಭಾರಿ ಅಸಾಧಾರಣ ಮತ್ತು ಪ್ಲೆನಿಪೊಟೆನ್ಷಿಯರಿಯಾಗಿ ನೇಮಿಸಲಾಯಿತು. ಅವರು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸ್ಥಳೀಯ ಜನರಲ್ಲಿ ಆಳವಾಗಿ ಆವರಿಸಿಕೊಂಡಿದ್ದಾರೆ ಎನ್ನಲಾಗಿದೆ.
 

56

ಡಿಸೆಂಬರ್, 2020 ರಲ್ಲಿ, ನೇಪಾಳದ ರಾಜಕೀಯ ಕ್ರಾಂತಿಯ ನಡುವೆ, ಚೀನಾದ ರಾಯಭಾರಿ ಹೌ ಯಾಂಕಿ ಅವರ ಪ್ರೇಮ ಪ್ರಕರಣದಲ್ಲಿ ಸಿಲುಕಿದ ಕೆಪಿ ಶರ್ಮಾ ಒಲಿ ಸರ್ಕಾರವನ್ನು ಉಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಆದಾಗ್ಯೂ ಅವರು ವಿಫಲರಾದರು.

66

ಸದ್ಯ ರಾಹುಲ್ ಗಾಂಧಿ ಅವರು ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ. ಸುಮಾನಿಮಾ ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯ ಮಗಳು. ಆದರೆ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿರುವ ಮಹಿಳೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಮಹಿಳೆಯನ್ನು ಹೌ ಯಾಂಕಿ ಎಂದು ಕರೆಯಲಾಗುತ್ತಿದೆ. ಈ ಪ್ರಕರಣ ರಾಜಕೀಯ ಸಂಚಲನ ಸೃಷ್ಟಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
ರಾಹುಲ್ ಗಾಂಧಿ
ನೇಪಾಳ
ಕಾಂಗ್ರೆಸ್

Latest Videos
Recommended Stories
Recommended image1
10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ
Recommended image2
ಸೊಬಗರಂತೆ ಬಂದು 10,000 ಮೌಲ್ಯದ ಒಳ ಉಡುಪು ಕದ್ದೊಯ್ದ ಮೂವರು ಮಹಿಳೆಯರು: ಸಿಸಿಟಿವಿ ದೃಶ್ಯ ವೈರಲ್
Recommended image3
ಆತ ನನ್ನವನಲ್ಲ, ಮನಸ್ಸು ಕೇಳುತ್ತಿಲ್ಲ, ದುರಂತ ಸಾವುಕಂಡ ಯೂಟ್ಯೂಬರ್ ಡೆತ್‌ನೋಟ್‌ಗೆ ಹಲವರು ಭಾವುಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved