MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • Teacher Love: ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ!

Teacher Love: ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ!

ಶಾಲೆಯಲ್ಲಿ ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟದಿಂದ ಶಿಕ್ಷಕಿ ಶಾಲೆಯನ್ನೇ ಬಿಟ್ಟು, ಬೇರೆ ಶಾಲೆಗೆ ಸೇರಿಕೊಂಡಿದ್ದರು. ಆದರೂ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದನು. ಈಗ ಶಿಕ್ಷಕಿಯನ್ನು ಹಿಂಬಾಲಿಸಿದ ವಿದ್ಯಾರ್ಥಿ ಶಿಕ್ಷಕಿ ತುಟಿಗಳನ್ನು ಕಚ್ಚಿ ತುಂಡರಿಸಿದ್ದಾನೆ.

1 Min read
Author : Sathish Kumar KH
Published : Feb 05 2026, 12:52 PM IST
Share this Photo Gallery
  • FB
  • TW
  • Linkdin
  • Whatsapp
14
ಲವ್ ಮಾಡಲೊಪ್ಪದ ಶಿಕ್ಷಕಿ ತುಟಿ ಕಚ್ಚಿದ ವಿದ್ಯಾರ್ಥಿ
Image Credit : Asianet News

ಲವ್ ಮಾಡಲೊಪ್ಪದ ಶಿಕ್ಷಕಿ ತುಟಿ ಕಚ್ಚಿದ ವಿದ್ಯಾರ್ಥಿ

ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ನಡೆದಿದೆ. ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಶಿಕ್ಷಕಿ ಶಾಲೆಯನ್ನೇ ಬಿಟ್ಟಿದ್ದರೂ, ಆಕೆಯನ್ನ ಬೆನ್ನಟ್ಟಿದ ಕಾಮುಕ ವಿದ್ಯಾರ್ಥಿ ದಾರಿಯಲ್ಲಿ ತಡೆದು ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ.

24
ಟ್ಯೂಷನ್‌ಗೆ ಹೋಗುವಾಗ ಹಿಂಬಾಲಿಸಿ ಕಚ್ಚಿದ
Image Credit : Asianet News

ಟ್ಯೂಷನ್‌ಗೆ ಹೋಗುವಾಗ ಹಿಂಬಾಲಿಸಿ ಕಚ್ಚಿದ

ಈ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಸದರ್ ಕೊತ್ವಾಲಿ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಶಿಕ್ಷಕಿ ಎಂದಿನಂತೆ ಖಾಸಗಿ ಟ್ಯೂಷನ್ ನೀಡಲು ತೆರಳುತ್ತಿದ್ದಾಗ, ಅದೇ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ದಾರಿಯಲ್ಲಿ ಅಡ್ಡಗಟ್ಟಿದ್ದಾನೆ. ಮೊದಲು ವಾಗ್ವಾದಕ್ಕಿಳಿದ ವಿದ್ಯಾರ್ಥಿ, ನಂತರ ಏಕಾಏಕಿ ಶಿಕ್ಷಕಿಯ ಕುತ್ತಿಗೆಗೆ ಕೈಹಾಕಿ ಎಳೆದಾಡಿದ್ದಾನೆ. ಶಿಕ್ಷಕಿ ಪ್ರತಿರೋಧ ವ್ಯಕ್ತಪಡಿಸಿದಾಗ ರೊಚ್ಚಿಗೆದ್ದ ಆತ, ಆಕೆಯ ಮುಖಕ್ಕೆ ಮುಖವನ್ನು ಸೇರಿಸಿ ತುಟಿಗೆ ಮುತ್ತಿಡಲು ಮುಂದಾಗಿದ್ದಾನೆ. ಇದರಿಂದ ಗಲಿಬಿಲಿಗೊಂಡು ಕೊಸರಾಡಿದಾಗ ಹಲ್ಲುಗಳಿಂದ ಎರಡೂ ತುಟಿಗಳನ್ನು ಗಟ್ಟಿಯಾಗಿ ಕಚ್ಚಿ ತುಟಿಗಳನ್ನು ತುಂಡರಿಸಿದ್ದಾರೆ.

Related Articles

Related image1
ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!
Related image2
ಹಂಪಿ ಪ್ರವಾಸಕ್ಕೆ ಬರುತ್ತಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ; ಶಿಕ್ಷಕಿ, ಮಕ್ಕಳು ಸೇರಿ ನಾಲ್ವರಿಗೆ ಗಾಯ
34
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Image Credit : Asianet News

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ವಿದ್ಯಾರ್ಥಿ ಕಳೆದ ಹಲವು ದಿನಗಳಿಂದ ಶಿಕ್ಷಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಶಾಲೆಯ ಆವರಣದಲ್ಲೂ ಚೇಷ್ಟೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶಿಕ್ಷಕಿಯ ಕುಟುಂಬದವರು ವಿದ್ಯಾರ್ಥಿಯ ಪೋಷಕರಿಗೆ ದೂರು ನೀಡಿದ್ದರು. ಕೆಲ ದಿನ ಸುಮ್ಮನಿದ್ದ ವಿದ್ಯಾರ್ಥಿ ಮತ್ತೆ ತನ್ನ ವಿಕೃತಿಯನ್ನು ಮುಂದುವರಿಸಿದ್ದ. ಈ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆ ಶಾಲೆಯ ಕೆಲಸವನ್ನೇ ಬಿಟ್ಟು ಬೇರೆಡೆ ಸೇರಿಕೊಂಡಿದ್ದರು. ಆದರೆ, ಅಲ್ಲಿಯೂ ಬೆನ್ನಟ್ಟಿದ ವಿದ್ಯಾರ್ಥಿ ಈ ಭೀಕರ ಕೃತ್ಯ ಎಸಗಿದ್ದಾನೆ. ಈ ಅಮಾನವೀಯ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

44
ಪೊಲೀಸ್ ಕ್ರಮ
Image Credit : Asianet News

ಪೊಲೀಸ್ ಕ್ರಮ

ವಿದ್ಯಾರ್ಥಿಯು ಶಿಕ್ಷಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಮತ್ತು ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿದೆ. ತೀವ್ರವಾಗಿ ಗಾಯಗೊಂಡ ಶಿಕ್ಷಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾಕ್ಕೆ ರವಾನಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ಮೈನ್‌ಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿದ್ಯಾರ್ಥಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ಶಿಕ್ಷಕರು
ವಿದ್ಯಾರ್ಥಿ

Latest Videos
Recommended Stories
Recommended image1
ದುಬೈನಲ್ಲಿ ಜನರಿಗೆ ಟ್ಯಾಕ್ಸ್ ಹೇಗಿದೆ? ಭಾರತದ ತೆರಿಗೆ ಬಗ್ಗೆ ಚರ್ಚೆಗೆ ಕಾರಣವಾಯ್ತು ಯುವಕನ ಪೋಸ್ಟ್
Recommended image2
ವಾಷಿಂಗ್ಟನ್‌ ಪೋಸ್ಟ್‌ನಿಂದ 300 ಪತ್ರಕರ್ತರ ವಜಾ, ಕೆಲಸ ಕಳೆದುಕೊಂಡ ಶಶಿ ತರೂರ್‌ ಪುತ್ರ ಇಶಾನ್‌!
Recommended image3
'ಘೂಸ್‌ಖೋರ್ ಪಂಡತ್' ಶೀರ್ಷಿಕೆಗೆ ದೆಹಲಿ ಹೈಕೋರ್ಟ್‌ನಲ್ಲಿ ಬ್ರೇಕ್? ಮನೋಜ್ ಬಾಜಪೇಯಿ ಹೊಸ ಚಿತ್ರಕ್ಕೆ ಸಂಕಷ್ಟ!
Related Stories
Recommended image1
ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!
Recommended image2
ಹಂಪಿ ಪ್ರವಾಸಕ್ಕೆ ಬರುತ್ತಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ; ಶಿಕ್ಷಕಿ, ಮಕ್ಕಳು ಸೇರಿ ನಾಲ್ವರಿಗೆ ಗಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved