- Home
- News
- India News
- ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್‌ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್
ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್‌ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್
ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲದೆ ನಟ ವಿಜಯ್ ಅವರ ಟಿವಿಕೆ ಪಕ್ಷ ಹೆಣಗಾಡುತ್ತಿರುವಾಗ, ಎಎಂಎಂಕೆ ಶಾಸಕರ ಬೆಂಬಲ ಪತ್ರ ನಕಲಿ ಎಂದು ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಟಿವಿಕೆ ವಿಡಿಯೋ ಬಿಡುಗಡೆ ಮಾಡಿದೆ.

ಮಧ್ಯರಾತ್ರಿ ರಾಜಭವನಕ್ಕೆ ದೌಡಾಯಿಸಿದ TTV ದಿನಕರನ್!

ವಿಜಯ್‌ಗೆ ಸರ್ಕಾರ ರಚನೆಯ ಹಾದಿಯಲ್ಲಿ ಬಿಕ್ಕಟ್ಟು
ರಾತ್ರಿ ರಾಜ್ಯಪಾಲರನ್ನು ಭೇಟಿಯಾದ ಟಿಟಿವಿ ದಿನಕರ್
ನಕಲಿ ಪತ್ರ ನೀಡಿರುವ ಆರೋಪ
ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಎಎಂಎಂಕೆ ಶಾಸಕ ಎಸ್. ಕಾಮರಾಜ್ ರಾಜಭವನಕ್ಕೆ ಬಂದರು. ಇದಾದ ನಂತರ ಟಿಟಿವಿ ದಿನಕರನ್ ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದರು. ನಂತರ ಮಾತನಾಡಿದ ಅವರು, 'ರಾಜ್ಯಪಾಲರಿಗೆ ನೀಡಿದ ಪತ್ರಕ್ಕೂ ಕಾಮರಾಜ್‌ಗೂ ಸಂಬಂಧವಿಲ್ಲ, ಅದು ನಕಲಿ ಪತ್ರ. ನಮ್ಮ ನಾಯಕರ ಹೆಸರಲ್ಲಿ ಟಿವಿಕೆ ನಕಲಿ ಪತ್ರ ನೀಡಿದೆ. ಇದು ಶುದ್ಧ ಶಕ್ತಿ ಮಾಡುವ ಕೆಲಸವೇ? ಟಿವಿಕೆ ಶುದ್ಧ ಶಕ್ತಿಯಲ್ಲ, ಮೋಸದ ಶಕ್ತಿ' ಎಂದು ಆರೋಪಿಸಿದರು.
ಈ ಸಂಬಂಧ ದಿನಕರನ್ ಗಿಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ನಾನು ಎಐಎಡಿಎಂಕೆಯನ್ನು ಬೆಂಬಲಿಸುತ್ತೇನೆ, ಪತ್ರದಲ್ಲಿರುವುದು ನನ್ನ ಸಹಿ ಅಲ್ಲ' ಎಂದು ಕಾಮರಾಜ್ ಕೂಡಾ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸಾಕ್ಷ್ಯ ಬಿಡುಗಡೆಗೊಳಿಸಿದ ಟಿವಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

