ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಮಹತ್ವದ ಎಚ್ಚರಿಕೆ ನೀಡಿದೆ. ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಭಕ್ತರಿಂದ ಹಣ ವಸೂಲಿ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಟಿಟಿಡಿ ಅಲರ್ಟ್ ನೀಡಿದೆ.
ತಿರುಮಲ(ಜು.18) ತಿರುಪತಿ ದೇವಸ್ಥಾನದ ಭಕ್ತರಿಗೆ ಆಡಳಿತ ಮಂಡಳಿ (ಟಿಟಿಡಿ) ಮಹತ್ವದ ಎಚ್ಚರಿಕ ನೀಡಿದೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಅಧಿಕಾರಿ ಹೆಸರಿನಲ್ಲ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಭಕ್ತರಿಂ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಭಕ್ತರು ನಕಲಿ ಖಾತೆಗಳ ಸಂದೇಗಳಿಗೆ, ಮನವಿಗಳಿಗೆ ಸ್ಪಂದಿಸದಂತೆ ಸೂಚಿಸಿದೆ. ಇದೇ ವೇಳೆ ಭಕ್ತರು ಮೋಸ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ನಕಲಿ ಖಾತೆ ಬಗ್ಗೆ ಇರಲಿ ಎಚ್ಚರ
ಟಿಟಿಡಿ ಎಕ್ಸಿಕ್ಯೂಟೀವ್ ಆಫೀಸರ್ ಶ್ಯಾಮಲ ರಾವ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಕಾತೆ ಸೃಷ್ಟಿಸಿ ಹಣ ವಸೂಲಿ ದಂಧೆ ನಡೆಸಲಾಗುತ್ತಿದೆ. ನಕಲಿ ಖಾತೆ ಮೂಲಕ ಭಕ್ತರಿಗೆ ಸಂದೇಶ ಕಳುಹಿಸಲಾಗುತ್ತಿದೆ. ಈ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಂತ ಸಂದೇಶಗಳಿಗೆ, ಮನವಿಗಳಿಗೆ ಕಿವಿಗೊಡದಂತೆ ಟಿಟಿಡಿ ಸೂಚಿಸಿದೆ. ಇಷ್ಟೇ ಅಲ್ಲ ಈ ರೀತಿ ನಕಲಿ ಖಾತೆಗಳಿಂದ ಯಾವುದೇ ಸಂದೇಶ ಅಥವಾ ಮನವಿಗಳು ಬಂದರೆ ತಕ್ಷಣವೇ ಟಿಟಿಡಿ ವಿಜಿಲೆನ್ಸ್ ಅಥವಾ ಸಹಾಯವಾಣಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಭಕ್ತರ ಟಾರ್ಗೆಟ್
ದಂಧೆಕೋರರು ಇದೀಗ ಸೋಶಿಯಲ್ ಮೀಡಿಯಾ ಮೂಲಕ ಭಕ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರಮುಖವಾಗಿ ಫೇಸ್‌ಬುಕ್ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ ಈ ರೀತಿ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾ ಮೂಲಕ ಅತೀವ ಎಚ್ಚರಿಕೆ ಹೆಜ್ಜೆ ಇಡಬೇಕಾಗಿ ಪೊಲೀಸರು ತಿಳಿಸಿದ್ದಾರೆ. ಹಲವು ರಾಜ್ಯಗಳಲ್ಲಿನ ತಿರುಪತಿ ಭಕ್ತರನ್ನು ಟಾರ್ಗೆಟ್ ಮಾಡಿ ಮೋಸ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮನವಿ, ಸಂದೇಶ, ಅನುಮಾನಸ್ವದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಂತೆ ಸೂಚಿಸಲಾಗಿದೆ.
ತಿರುಪತಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ತೆರಳಿ ದರ್ಶನ ಪಡೆಯುತ್ತಾರೆ. ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ತಿರುಪತಿ ದೇವಸ್ಥಾನ ಪ್ರವೇಶ ಸೇರಿದಂತೆ ಹಲವು ವಿಚಾರಗಳಿಗೆ ಭಕ್ತರು ಆನ್‌ಲೈನ್ ಮೂಲಕ ಅಧಿಕೃತ ಟಿಟಿಡಿ ವೆಬ್‌ಸೈಟ್ ಮೂಲಕ ಬುಂಕಿಂಗ್ ಮಾಡುತ್ತಾರೆ. ಹೀಗಾಗಿ ಮೋಸಗಾರರು ಸೋಶಿಯಲ್ ಮೀಡಿಯಾ ಮೂಲಕ ಭಕ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
