ಈ ಕೆಲಸ ಮಾಡಿದ್ರೆ, ಟೋಲ್ ಪ್ಲಾಜಾದಲ್ಲಿ ಹಣ ಕಟ್ಟದೆ ಎಷ್ಟು ಬಾರಿ ಬೇಕಾದ್ರೂ ತಿರುಗಾಡಬಹುದು!
ದೂರ ಪ್ರಯಾಣ ಮಾಡುವ ವೇಳೆ ಹಲವು ಟೋಲ್ ಪ್ಲಾಜಾಗಳನ್ನು ದಾಟಬೇಕಾಗುತ್ತದೆ. ಪ್ರತಿ ಟೋಲ್ ಪ್ಲಾಜಾದಲ್ಲೂ ನೂರಾರು ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ, ನೀವು ಈ ವರ್ಗಕ್ಕೆ ಸೇರಿದವರಾಗಿದ್ದರೆ, ಟೋಲ್ ಪ್ಲಾಜಾವನ್ನು ಎಷ್ಟು ಬಾರಿ ಬೇಕಾದರೂ ದಾಟಬಹುದು. ಇದಕ್ಕಾಗಿ ತೀರಾ ಸಣ್ಣ ಪ್ರಮಾಣದ ಹಣ ಪಾವತಿ ಮಾಡಬೇಕಿರುತ್ತದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಕೆಲವು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಿ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹಿಸುತ್ತದೆ. ಈ ರಸ್ತೆಗಳಲ್ಲಿ ಪ್ರಯಾಣಿಸುವ ವಾಹನಗಳು ಟೋಲ್ ತೆರಿಗೆ ಪಾವತಿಸಬೇಕು. ಈ ಟೋಲ್ ತೆರಿಗೆಗಳು ವಾಹನದ ಪ್ರಕಾರ ಬದಲಾಗುತ್ತವೆ.
ಟೋಲ್ ಪ್ಲಾಜಾಗಳಿಂದ ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತದೆ. ಈ ಬೃಹತ್ ಮೊತ್ತದ ಆಧಾರದ ಮೇಲೆ ಕೇಂದ್ರ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ನಿಮ್ಮ ಮನೆಯ ಹತ್ತಿರ ಟೋಲ್ ಪ್ಲಾಜಾ ಇದೆಯೇ? ಪ್ರತಿ ಕೆಲಸಕ್ಕೂ ಟೋಲ್ ಪ್ಲಾಜಾ ದಾಟಬೇಕಾಗುತ್ತದೆಯೇ? ಹೀಗೆ ಹೋದಾಗಲೆಲ್ಲಾ ನಿಮ್ಮ ವಾಹನದಿಂದ ಟೋಲ್ ಶುಲ್ಕ ಕಡಿತವಾಗುತ್ತಿದೆಯೇ?
ಟೋಲ್ ಪ್ಲಾಜಾದಿಂದ ನೀವು ಉಚಿತವಾಗಿ ಪ್ರಯಾಣಿಸಬೇಕೆಂದರೆ, ಮೊದಲು ನಿಮ್ಮ ಮನೆಗೆ 20 ಕಿ.ಮೀ. ದೂರದಲ್ಲಿರುವ ಟೋಲ್ ಪ್ಲಾಜಾಗೆ ಭೇಟಿ ನೀಡಿ ನಿಮ್ಮ ಸ್ಥಳೀಯ ವಿಳಾಸದ ಪುರಾವೆಯನ್ನು ತೋರಿಸಬೇಕು.
ಸ್ಥಳೀಯ ಟ್ಯಾಗ್ ಅಥವಾ ಲೋಕಲ್ ಟ್ಯಾಗ್ ಪಡೆಯಲು ನೀವು ಪ್ರತಿ ತಿಂಗಳು ಸುಮಾರು 250 ರಿಂದ 400 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಟೋಲ್ ಪ್ಲಾಜಾವನ್ನು ಅವಲಂಬಿಸಿ ಈ ಮೊತ್ತ ಬದಲಾಗುತ್ತದೆ.