MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮೂರೇ ತಿಂಗಳಿಗೆ ಶಾಕ್ ಕೊಟ್ಟ ನಟಿ ಕೋಯಲ್, ದಿಢೀರ್ ರಾಜೀನಾಮೆ ನೀಡಿ ಹೊರಬಂದಿದ್ದೇಕೆ?

ಮೂರೇ ತಿಂಗಳಿಗೆ ಶಾಕ್ ಕೊಟ್ಟ ನಟಿ ಕೋಯಲ್, ದಿಢೀರ್ ರಾಜೀನಾಮೆ ನೀಡಿ ಹೊರಬಂದಿದ್ದೇಕೆ?

ನಟಿ ಕೋಯಲ್ ಮಲಿಕ್ ದಿಢೀರ್ ಶಾಕ್ ನೀಡಿದ್ದಾರೆ. ರಾಜ್ಯಸಭೆಗೆ ನೇಮಕಗೊಂಡ ಮೂರೇ ತಿಂಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಷ್ಟಕ್ಕೂ ನಟಿ ಕೋಯಲ್ ಮಲಿಕ್ ದಿಢೀರ್ ನಿರ್ಧಾರಕ್ಕೆ ಕಾರಣವೇನು?

2 Min read
Author : Chethan Kumar
Published : Jul 16 2026, 03:24 PM IST
Share this Photo Gallery
  • FB
  • TW
  • Linkdin
  • Whatsapp
16
ಮೂರೇ ತಿಂಗಳಿಗೆ ಕೋಯಲ್ ಮಲಿಕ್ ರಾಜೀನಾಮೆ
Image Credit : actress Koyal

ಮೂರೇ ತಿಂಗಳಿಗೆ ಕೋಯಲ್ ಮಲಿಕ್ ರಾಜೀನಾಮೆ

ನಟಿ ಕೊಯೆಲ್ ಮಲಿಕ್ ಕೊಟ್ಟ ಶಾಕ್‌ಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಕಂಗಾಲಾಗಿದ್ದಾರೆ. ಕಾರಣ ಈಗಾಗಲೇ ಟಿಎಂಸಿ ಇಬ್ಬಾಗವಾಗಿದೆ. ಬಂಡಾಯ ಬಣದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬರ ಹಿಂದೊಬ್ಬರು ಟಿಎಂಸಿಯಿಂದ ದೂರ ಸರಿಯುತ್ತಿದ್ದಾರೆ. ಇದರ ನಡುವೆ ನಟಿ ಕೋಯಲ್ ಮಲಿಕ್ ಮೂರೇ ತಿಂಗಳಿಗೆ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಮತಾ ಬ್ಯಾನರ್ಜಿ ಕಂಗಾಲು
Image Credit : actress Koyal

ಮಮತಾ ಬ್ಯಾನರ್ಜಿ ಕಂಗಾಲು

ಮಮತಾ ಬ್ಯಾನರ್ಜಿ ಪಕ್ಷಕ್ಕೆ ಗ್ಲಾಮರ್ ಟಚ್ ಕೊಟ್ಟು ಜನರ ಮತಗಳಿಸಲು ನಡೆಸಿದ ಎಲ್ಲಾ ಕಸರತ್ತುಗಳು ಹಳ್ಳ ಹಿಡಿಯುತ್ತಿದೆ.ಎಪ್ರಿಲ್ 6 ರಂದು ನಟಿ ಕೋಯಲ್ ಮಲಿಕ್ ರಾಜ್ಯಸಭಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಮಮತಾ ಬ್ಯಾನರ್ಜಿ ನಡೆಗೆ ಟಿಎಂಸಿ ನಾಯಕರು ಚಪ್ಪಾಳೆ ಹೊಡೆದಿದ್ದರು. ಆದರೆ ಮೂರೇ ತಿಂಗಳಲ್ಲಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ಕೊಯೆಲ್ ಮಲಿಕ್ ರಾಜೀನಾಮೆ ನೀಡಿದ್ದಾರೆ.

Related Articles

Related image1
KPSC: ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಸುಳ್ಳು ಪತ್ರ ಕೇಸ್ ಈಗ ರಾಜ್ಯಪಾಲರ ಅಂಗಳದಲ್ಲಿ! ರಾಜೀನಾಮೆ ನೀಡ್ತಾರಾ ಸಾಹುಕಾರ್‌?
Related image2
ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ
36
ಸಿನಿಮಾ ಮೂಲಕ ಜನಪ್ರಿಯತೆ
Image Credit : actress Koyal

ಸಿನಿಮಾ ಮೂಲಕ ಜನಪ್ರಿಯತೆ

ಬಂಗಾಳಿ ಸಿನಿಮಾ ಮೂಲಕ ಭಾರಿ ಜನಪ್ರಿಯರಾಗಿರುವ ನಟಿ ಕೋಯೆಲ್ ಮಲಿಕ್ ತಮ್ಮ ನಟನೆಗೆ ಹಲವು ಪುರಸ್ಕಾರ ಪಡೆದಿದ್ದಾರೆ. ಬಂಗಾಳ ಫಿಲ್ಮ್ ಫೇರ್ ಅವಾರ್ಡ್, ಆನಂದಲೋಕ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರ ನೀಡುವ ಮಹಾನಾಯಕ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೇ ಜನಪ್ರಿಯತೆಯನ್ನು ಮಮತಾ ಬ್ಯಾನರ್ಜಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದೀಗ ರಾಜೀನಾಮೆ ಮೂಲಕ ಭಾರಿ ಹಿನ್ನಡೆಯಾಗಿದೆ.

46
ಕೊಯೆಲ್ ರಾಜೀನಾಮೆ ಸ್ವೀಕೃತ
Image Credit : our own

ಕೊಯೆಲ್ ರಾಜೀನಾಮೆ ಸ್ವೀಕೃತ

ಫೆಬ್ರವರಿ 27, 2026ರಂದು ಟಿಎಂಸಿ ಪಕ್ಷ ಕೋಯೆಲ್ ಮಲಿಕ್ ತನ್ನ ರಾಜ್ಯಸಭಾ ಅಭ್ಯರ್ಥಿ ಎಂದು ಘೋಷಿಸಿತ್ತು. 16ನೇ ಮಾರ್ಚ್‌ರಂದು ಚುನಾವಣೆ ನಡೆದಿತ್ತು. ಎಪ್ರಿಲ್ 16ರಂದು ಕೋಯೆಲ್ ಮಲಿಕ್ ರಾಜ್ಯಸಭಾ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಜೂನ್ 11 ರಂದು ರಾಜೀನಾಮೆ ಪತ್ರ ರವಾನಿಸಿದರೆ, ಇದೀಗ ಸ್ವೀಕೃತಗೊಂಡಿದೆ.

56
ಮದನ್ ಮಿತ್ರಾ ಬೆನ್ನಲ್ಲೇ ಕೊಯೆಲ್ ಔಟ್
Image Credit : our own

ಮದನ್ ಮಿತ್ರಾ ಬೆನ್ನಲ್ಲೇ ಕೊಯೆಲ್ ಔಟ್

ಟಿಎಂಸಿ ನಾಯಕ ಮದನ್ ಮಿತ್ರಾ ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದರು. ಬಳಿಕ ರಿತಬ್ರತಾ ಬ್ಯಾನರ್ಜಿ ಮುಂದಾಳತ್ವದಲ್ಲಿರುವ ಟಿಎಂಸಿ ಬಂಡಾಯ ಪಡೆ ಸೇರಿಕೊಂಡಿದ್ದಾರೆ. ಮದನ್ ಮಿತ್ರಾ ಬೆನ್ನಲ್ಲೇ ಇದೀಗ ಕೋಯೆಲ್ ಮಲಿಕ್ ರಾಜ್ಯಸಭಾ ಸಂಸದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಂಡಾಯ ಪಡೆ ಸೇರಿಕೊಳ್ಳುತ್ತಾರೋ ಅನ್ನೋ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

66
ಪಶ್ಚಿಮ ಬಂಗಾಳದಲ್ಲಿ ಕೋಲಾಹಲ
Image Credit : our own

ಪಶ್ಚಿಮ ಬಂಗಾಳದಲ್ಲಿ ಕೋಲಾಹಲ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿ ಒಡೆದು ಹೋಳಾಗಿದೆ. ಮಮತಾ ಬ್ಯಾನರ್ಜಿ ವಿರುದ್ಧವೇ ಬಂಡಾಯ ಎದ್ದಿದೆ. ಪಕ್ಷದಿಂದ ಒಬ್ಬರ ಹಿಂದೆ ಒಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾರೆ. 20 ಲೋಕಸಭಾ ಸಂಸದರು ಈಗಾಗಲೇ ಟಿಎಂಸಿಯಿಂದ ಹೊರಬಂದು ನ್ಯಾಷನಲ್ ಸಿಟಿಜನ್ ಪಾರ್ಟಿ ಸೇರಿಕೊಂಡಿದ್ದಾರೆ.ಇದೀಗ ಕೋಯಲ್ ಕೂಡ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನಟಿ
ಪಶ್ಚಿಮ ಬಂಗಾಳ
ಭಾರತ ಸುದ್ದಿ

Latest Videos
Recommended Stories
Recommended image1
ಭಾರತೀಯ ಸೇನೆ ನೇಮಕಾತಿ 2026: 350 ತಾಂತ್ರಿಕ ಹುದ್ದೆಗಳಿಗೆ ಇಂಜಿನಿಯರ್‌ಗಳಿಗೆ ಬಂಪರ್ ಅವಕಾಶ
Recommended image2
Lift Trapped: ಲಿಫ್ಟ್‌ನಲ್ಲಿ 30 ನಿಮಿಷ ಸಿಲುಕಿದ ನಾಲ್ವರು ಹುಡುಗಿಯರಿಗೆ ಧೈರ್ಯ ತುಂಬಿದ್ದು ಹನುಮಾನ್ ಚಾಲೀಸಾ!
Recommended image3
Hyderbad School Row: ಎರಡನೇ ತರಗತಿ ಮಗುವಿಗೆ 'ಕಲ್ಮಾ' ಪಠಿಸುವಂತೆ ಹೋಮ್ ವರ್ಕ್ ಕೊಟ್ಟ ಶಿಕ್ಷಕಿ!
Related Stories
Recommended image1
KPSC: ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಸುಳ್ಳು ಪತ್ರ ಕೇಸ್ ಈಗ ರಾಜ್ಯಪಾಲರ ಅಂಗಳದಲ್ಲಿ! ರಾಜೀನಾಮೆ ನೀಡ್ತಾರಾ ಸಾಹುಕಾರ್‌?
Recommended image2
ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved