2000ರ ನಂತರ ನಡೆದ ದಾಳಿಗಳು: ಉಗ್ರರ ಅಟ್ಟಹಾಸದ ರಕ್ತಸಿಕ್ತ ಹೆಜ್ಜೆಗಳು
2000 ರಿಂದ 2025 ರವರೆಗೆ, ಕಾಶ್ಮೀರವು ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ, ಇದು ಗಮನಾರ್ಹ ಸಾವುನೋವುಗಳಿಗೆ ಕಾರಣವಾಗಿದೆ. ಈ ಲೇಖನವು ಈ ಅವಧಿಯಲ್ಲಿ ನಡೆದ 10 ಪ್ರಮುಖ ದಾಳಿಗಳನ್ನು ಪಟ್ಟಿ ಮಾಡುತ್ತದೆ, ಇದರಲ್ಲಿ ಚಟ್ಟಿಸಿಂಗ್‌ಪೋರಾ ಹತ್ಯಾಕಾಂಡ ಮತ್ತು ಅಮರನಾಥ ಯಾತ್ರಾ ದಾಳಿಗಳು ಸೇರಿವೆ.

ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ.2000-2025ರ ತನಕ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ 10 ಪ್ರಮುಖ ಭಯೋತ್ಪಾದಕ ದಾಳಿಗಳು ಇಂತಿವೆ
ಮಾರ್ಚ್ 21, 2000: ಅನಂತ್‌ನಾಗ್ ಜಿಲ್ಲೆಯ ಚಟ್ಟಿಸಿಂಗ್‌ಪೋರಾ ಗ್ರಾಮದಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿ ಉಗ್ರರ ದಾಳಿ: 36 ಮಂದಿ ಸಾವು
ಆಗಸ್ಟ್ 2020: ನುನ್ವಾನ್ ಬೇಸ್ ಕ್ಯಾಂಪ್‌ನಲ್ಲಿ ದಾಳಿ: 24 ಅಮರನಾಥ ಯಾತ್ರಿಕರು ಸೇರಿ 32 ಮಂದಿ ಸಾವು
ಜುಲೈ 2001: ಶೇಷನಾಗ್ ಬೇಸ್ ಕ್ಯಾಂಪ್‌ನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ದಾಳಿ: 13 ಮಂದಿ ಬಲಿ
ಅಕ್ಟೋಬರ್ 1, 2001: ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಶಾಸಕಾಂಗ ಸಂಕೀರ್ಣದ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 36 ಮಂದಿ ಸಾವು
2002: ಚಂದನ್ವಾರಿ ಬೇಸ್ ಕ್ಯಾಂಪ್ ಮೇಲೆ ದಾಳಿ: 11 ಅಮರನಾಥ ಯಾತ್ರಿಕರು ಸಾವನ್ನಪ್ಪಿದ್ದರು.
ನವೆಂಬರ್ 23, 2002: ಜಮ್ಮು - ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಇಡಿ ಸ್ಫೋಟ: 9 ಭದ್ರತಾ ಪಡೆ ಸಿಬ್ಬಂದಿ, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿ 19 ಮಂದಿ ಸಾವು
ಮಾರ್ಚ್ 23, 2003: ಪುಲ್ವಾಮ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ ದಾಳಿ: 11 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರ ಸಾವು
Pahalgam terror attack
ಜೂನ್ 13, 2005: ಪುಲ್ವಾಮಾದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಸ್ಫೋಟಕಗಳು ತುಂಬಿದ್ದ ಕಾರು ಸ್ಫೋಟ: 13 ಮಂದಿ ಸಾವು, 100ಕ್ಕೂ ಹೆಚ್ಚು ನಾಗರಿಕರಿಗೆ ಗಾಯ
ಜೂನ್ 12, 2006: ಕುಲ್ಟಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ: 9 ನೇಪಾಳಿ ಮತ್ತು ಬಿಹಾರಿ ಕಾರ್ಮಿಕರು ಸಾವು
ಜೂನ್ 10, 2017: ಕುಲಾಮ್‌ನಲ್ಲಿ ಅಮರನಾಥ ಯಾತ್ರೆಯ ಯಾತ್ರಿಕರಿದ್ದ ಬಸ್ ಮೇಲೆ ಅಟ್ಟಹಾಸ: 8 ಮಂದಿ ಬಲಿ