ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ!
ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದು 'ಹೊಸ ಆಂದೋಲನ' ಆರಂಭಿಸಲಿದ್ದಾರೆ ಎಂಬ ವರದಿಗಳು ಸಂಚಲನ ಸೃಷ್ಟಿಸಿವೆ. ಈಗಾಗಲೇ 'ನಾವು ನಾಯಕರು' ಎಂಬ ಸಂಘಟನೆ ಹೊಂದಿರುವ ಅವರು, ತಮ್ಮದೇ ಆದ ರಾಜಕೀಯ ಹಾದಿ ಹಿಡಿಯುವ ಸಾಧ್ಯತೆಗಳಿವೆ.

ಹೊಸ ಆಂದೋಲನ
ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದು ರಾಜ್ಯದಲ್ಲಿ ‘ಹೊಸ ಆಂದೋಲನ’ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟೀವಿ ವರದಿ ಮಾಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಬಳಿಕ ಈ ಸುದ್ದಿ ಸಂಚಲನ ಸೃಷ್ಟಿಸಿದೆ.
ಲಾಭರಹಿತ ‘ನಾವು ನಾಯಕರು’ ಎಂಬ ಸಂಘಟನೆ
ಅಣ್ಣಾಮಲೈ ಈಗಾಗಲೇ ಲಾಭರಹಿತ ‘ನಾವು ನಾಯಕರು’ ಎಂಬ ಸಂಘಟನೆಯನ್ನು ಹೊಂದಿದ್ದಾರೆ. ಮುಂದಿನ 6 ತಿಂಗಳವರೆಗೆ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಯಾವುದೇ ಯೋಜನೆ ಇಲ್ಲ. ಆದರೆ ಸಮಾನ ಮನಸ್ಕ ಜನರನ್ನು ಸೇರಿಸಿಕೊಳ್ಳುವುದು, ಬಲವಾದ ಸ್ವಯಂಸೇವಕ ನೆಲೆಯನ್ನು ನಿರ್ಮಿಸುವುದು ಮತ್ತು ಅವರನ್ನು ರಾಜಕೀಯವಾಗಿ ಬೆಳೆಸುವುದು ಅವರ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ, ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅಣ್ಣಾಮಲೈ ಅವರಿಗೆ ಸ್ಫೂರ್ತಿಯಾಗಿ ಮುಂದುವರೆದಿದ್ದಾರೆ ಎಂದು ಅವು ತಿಳಿಸಿವೆ.
ರ ಮುಂದಿನ ನಿಲುವು ಏನು?
ಇತ್ತೀಚೆಗೆ ಸಿಬಿಎಸ್‌ಇ ತ್ರಿಭಾಷಾ ನೀತಿ ಸೇರಿ ಕೇಂದ್ರ ಸರ್ಕಾರದ ನಿಲುವನ್ನು ಅಣ್ಣಾಮಲೈ ವಿರೋಧಿಸಿದ್ದರು. ಅಲ್ಲದೆ, ತಮಿಳ್ನಾಡು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಆಗಿಂದಲೇ ಅವರ ಮುಂದಿನ ನಿಲುವು ಏನು ಎಂಬ ಪ್ರಶ್ನೆ ಉದ್ಭವಿಸಿದ್ದವು. ಬಿಜೆಪಿಯಲ್ಲಿ ಅಣ್ಣಾಮಲೈ ಅವರನ್ನು ಕಡಗಣನೆ ಮಾಡಲಾಗ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಮಿಳುನಾಡು ರಾಜಕೀಯ
ಈಗ ತಮ್ಮ ಹೊಸ ಆಂದೋಲನದ ಮೂಲಕ ಬಿಜೆಪಿಗೆ ಶಾಕ್ ಕೊಡಲು ಅಣ್ಣಾಮಲೈ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನ ಸಿಎಂ ವಿಜಯ್, ಎರಡು ವರ್ಷದ ಹಿಂದೆಯಷ್ಟೇ ಹೊಸ ಪಕ್ಷ ರಚನೆ ಮಾಡಿದ್ದರು. ಎರಡು ವರ್ಷ ಪ್ರಚಾರ ನಡೆಸಿ ಸರ್ಕಾರ ರಚನೆ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಇದೀಗ ಅದೇ ರೀತಿ ಅಣ್ಣಾಮಲೈ ಮುಂದಾದ್ರಾ ಎಂಬ ಚರ್ಚೆಗಳು ತಮಿಳುನಾಡು ರಾಜಕೀಯ ವಲಯದಲ್ಲಿ ಶುರುವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

