MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ವಿಜಯ್ ಪರ 'ಕೈ ಎತ್ತಿದ' 25 ಶಾಸಕರನ್ನು 'ಕೈಬಿಟ್ಟ' ಎಐಎಡಿಎಂಕೆ; ಜಯಲಲಿತಾ ಶಿಷ್ಯ ಪಳನಿಸ್ವಾಮಿಯಿಂದ ವಜಾ ಆದೇಶ!

ವಿಜಯ್ ಪರ 'ಕೈ ಎತ್ತಿದ' 25 ಶಾಸಕರನ್ನು 'ಕೈಬಿಟ್ಟ' ಎಐಎಡಿಎಂಕೆ; ಜಯಲಲಿತಾ ಶಿಷ್ಯ ಪಳನಿಸ್ವಾಮಿಯಿಂದ ವಜಾ ಆದೇಶ!

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಸರ್ಕಾರ ವಿಶ್ವಾಸಮತ ಗೆದ್ದ ನಂತರ, ಅಣ್ಣಾ ಡಿಎಂಕೆ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ ಕಾರಣ, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು ತಮ್ಮದೇ ಪಕ್ಷದ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.

2 Min read
Author : Sathish Kumar KH
Published : May 13 2026, 08:41 PM IST
Share this Photo Gallery
  • FB
  • TW
  • Linkdin
  • Whatsapp
16
 ಅಣ್ಣಾ ಡಿಎಂಕೆ ಪಕ್ಷದ 25 ಶಾಸಕರ ವಜಾ
Image Credit : ChatGPT AI

ಅಣ್ಣಾ ಡಿಎಂಕೆ ಪಕ್ಷದ 25 ಶಾಸಕರ ವಜಾ

ದಕ್ಷಿಣ ಭಾರತದ ರಾಜಕೀಯದ ದೈತ್ಯ ಶಕ್ತಿ ತಮಿಳುನಾಡಿನಲ್ಲಿ ಈಗ ದೊಡ್ಡ ಮಟ್ಟದ ರಾಜಕೀಯ ಹೈಡ್ರಾಮಾ ಶುರುವಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ, ಪ್ರಮುಖ ವಿರೋಧ ಪಕ್ಷವಾದ ಅಣ್ಣಾ ಡಿಎಂಕೆ (AIADMK) ನಡುಕಕ್ಕೀಡಾಗಿದೆ. ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ ತನ್ನದೇ ಪಕ್ಷದ 25 ಬಂಡಾಯ ಶಾಸಕರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿ ಎಡಪ್ಪಾಡಿ ಪಳನಿಸ್ವಾಮಿ (EPS) ಕಠಿಣ ಆದೇಶ ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred
26
ಇಪಿಎಸ್ ಗುಡುಗು: ಹಿರಿಯ ನಾಯಕರಿಗೂ ಇಲ್ಲ ವಿನಾಯಿತಿ
Image Credit : ADMK

ಇಪಿಎಸ್ ಗುಡುಗು: ಹಿರಿಯ ನಾಯಕರಿಗೂ ಇಲ್ಲ ವಿನಾಯಿತಿ

ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದ ಶಾಸಕರ ವಿರುದ್ಧ ಚಾಟಿ ಬೀಸಿದ್ದಾರೆ. ಹಿರಿಯ ನಾಯಕರಾದ ಎಸ್‌ಪಿ ವೇಲುಮಣಿ ಮತ್ತು ಸಿವಿ ಶಣ್ಮುಗಂ ಸೇರಿದಂತೆ ಒಟ್ಟು 25 ಶಾಸಕರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಕಿತ್ತೆಸೆಯಲಾಗಿದೆ. ಈ ಶಾಸಕರು ವಿಜಯ್ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂಬುದು ಇಪಿಎಸ್ ಕೋಪಕ್ಕೆ ಪ್ರಮುಖ ಕಾರಣವಾಗಿದೆ.

Related Articles

Related image1
ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ
Related image2
ಮೊದಲ ಅಗ್ನಿಪರೀಕ್ಷೆಯಲ್ಲಿ ವಿಜಯ್ ಸರ್ಕಾರ ಪಾಸ್, ಬಹುಮತ ಸಾಬೀತುಪಡಿಸಿದ ಟಿವಿಕೆ ಸರ್ಕಾರ
36
ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ದಿಗ್ವಿಜಯ
Image Credit : X

ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ದಿಗ್ವಿಜಯ

ವಿಧಾನಸಭೆಯಲ್ಲಿ ನಡೆದ ಹೈವೋಲ್ಟೇಜ್ ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ಸರ್ಕಾರ ಭರ್ಜರಿ ಜಯ ಸಾಧಿಸಿದೆ. ಸರ್ಕಾರ ಉಳಿಸಿಕೊಳ್ಳಲು 117 ಮತಗಳ ಅಗತ್ಯವಿತ್ತು. ಆದರೆ, ವಿಜಯ್ ಪರವಾಗಿ ಒಟ್ಟು 144 ಮತಗಳು ಚಲಾವಣೆಯಾದವು. ಟಿಿವಿಕೆಯ ಸ್ವಂತ 107 ಶಾಸಕರ ಬಲದ ಜೊತೆಗೆ, ಕಾಂಗ್ರೆಸ್‌ನ 5, ಎಐಎಡಿಎಂಕೆಯ 25 ಬಂಡಾಯಗಾರರು ಹಾಗೂ ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಎಎಂಎಂಕೆ ಪಕ್ಷಗಳ ಬೆಂಬಲದೊಂದಿಗೆ ವಿಜಯ್‌ ಅಧಿಪತ್ಯ ಸ್ಥಾಪಿಸಿದ್ದಾರೆ.

46
ಪಳನಿಸ್ವಾಮಿ ವಿರುದ್ಧ ಬಂಡಾಯವೇಕೆ?
Image Credit : X

ಪಳನಿಸ್ವಾಮಿ ವಿರುದ್ಧ ಬಂಡಾಯವೇಕೆ?

ಬಂಡಾಯ ಎದ್ದಿರುವ ಶಾಸಕರು ಇಪಿಎಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಐಎಡಿಎಂಕೆಯ ಮೂಲ ತತ್ವವಾದ ಡಿಎಂಕೆ ವಿರೋಧಿ ನಿಲುವನ್ನು ಪಳನಿಸ್ವಾಮಿ ಅವರು ದುರ್ಬಲಗೊಳಿಸುತ್ತಿದ್ದಾರೆ. ವಿಜಯ್ ಅವರ ಟಿಿವಿಕೆ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಭರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬುದು ಬಂಡಾಯ ಶಾಸಕರ ವಾದ. ಇದೇ ಕಾರಣಕ್ಕೆ ಅವರು ವಿಶ್ವಾಸಮತದಲ್ಲಿ ವಿಜಯ್ ಪರ ನಿಲುವು ತಾಳಿದ್ದಾರೆ ಎಂದು ಹೇಳಲಾಗುತ್ತಿದೆ.

56
ದೂರ ಉಳಿದ ಡಿಎಂಕೆ, ತಟಸ್ಥ ಬಿಜೆಪಿ-ಪಿಎಂಕೆ
Image Credit : X

ದೂರ ಉಳಿದ ಡಿಎಂಕೆ, ತಟಸ್ಥ ಬಿಜೆಪಿ-ಪಿಎಂಕೆ

ಇನ್ನು ರಾಜ್ಯದ ಪ್ರಮುಖ ಪಕ್ಷವಾದ ಡಿಎಂಕೆ ಈ ವಿಶ್ವಾಸಮತ ಪ್ರಕ್ರಿಯೆಯಿಂದ ದೂರ ಉಳಿದು ಅಚ್ಚರಿ ಮೂಡಿಸಿದೆ. ಬಿಜೆಪಿಯ ಏಕೈಕ ಶಾಸಕ ಹಾಗೂ ಪಿಎಂಕೆಯ ನಾಲ್ವರು ಶಾಸಕರು ಸಹ ಮತದಾನದಲ್ಲಿ ಭಾಗವಹಿಸದೆ ತಟಸ್ಥ ನಿಲುವು ತಳೆದಿದ್ದಾರೆ. ಎಐಎಡಿಎಂಕೆಯ 22 ಶಾಸಕರು ಮಾತ್ರ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ.

66
ಕುದುರೆ ವ್ಯಾಪಾರದ ಆರೋಪ: ವಿಜಯ್ ಸ್ಪಷ್ಟನೆ
Image Credit : ANI

ಕುದುರೆ ವ್ಯಾಪಾರದ ಆರೋಪ: ವಿಜಯ್ ಸ್ಪಷ್ಟನೆ

ಈ ಅನಿರೀಕ್ಷಿತ ಬೆಂಬಲದ ಬೆನ್ನಲ್ಲೇ ಟಿವಿಕೆ ಪಕ್ಷವು 'ಕುದುರೆ ವ್ಯಾಪಾರ' ನಡೆಸಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದಿವೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ನಟ ವಿಜಯ್, 'ಯಾವುದೇ ಅಡ್ಡದಾರಿ ಹಿಡಿದು ಬೆಂಬಲ ಪಡೆದಿಲ್ಲ. ಬದಲಾವಣೆಯನ್ನು ಬಯಸಿರುವ ಶಾಸಕರು ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ, ವಿಜಯ್ ಸರ್ಕಾರದ ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆಯಂತಹ ಸಾಂಪ್ರದಾಯಿಕ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿದೆ. ಮುಂದಿನ ದಿನಗಳಲ್ಲಿ ಈ 25 ಶಾಸಕರ ಭವಿಷ್ಯವೇನು ಹಾಗೂ ಎಐಎಡಿಎಂಕೆ ಈ ಹೊಡೆತದಿಂದ ಹೇಗೆ ಚೇತರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಳಪತಿ ವಿಜಯ್
ತಮಿಳುನಾಡು

Latest Videos
Recommended Stories
Recommended image1
ಶಾರ್ಟ್ ಬಟ್ಟೆ ಹಾಕಿ ಸೊಸೆ ಮಾಡುತ್ತಿದ್ದ ರೀಲ್ಸ್‌ಗೆ ಬೇಸರ, ದುರಂತ ಅಂತ್ಯ ಕಂಡ ಅತ್ತೆ ಮಾವ
Recommended image2
ಅಖಿಲೇಶ್ ಯಾದವ್ ಸಹೋದರ ಪ್ರತೀಕ್ ನಿಗೂಢ ಸಾವಿನ ಬೆನ್ನಲ್ಲೇ ಕೈ ಮೇಲಿನ ಹಾವಿನ ಟ್ಯಾಟೂ ಬಗ್ಗೆ ಶುರುವಾಯ್ತು ಚರ್ಚೆ
Recommended image3
'ಕನ್ನಡ ಮರೆತಿಲ್ಲ, ಟಚ್ ಬಿಟ್ಟುಹೋಗಿದೆ ಅಷ್ಟೇ' ಎಂದ ರಜನಿಕಾಂತ್; ರವಿಶಂಕರ್ ಗುರೂಜಿ ಸತ್ಸಂಗದಲ್ಲಿ 'ತಲೈವಾ' ಮತ್ತೇನು ಹೇಳಿದ್ರು?
Related Stories
Recommended image1
ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ
Recommended image2
ಮೊದಲ ಅಗ್ನಿಪರೀಕ್ಷೆಯಲ್ಲಿ ವಿಜಯ್ ಸರ್ಕಾರ ಪಾಸ್, ಬಹುಮತ ಸಾಬೀತುಪಡಿಸಿದ ಟಿವಿಕೆ ಸರ್ಕಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved