TamilNadu New CM: ಪ್ರಮಾಣವಚನ ಸ್ವೀಕರಿಸಿ ಎರಡು ಪ್ರಮುಖ ಘೋಷಣೆ ಮಾಡಿದ ಸಿಎಂ ವಿಜಯ್
ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅವರು 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಎರಡು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ.

ಎರಡು ಪ್ರಮುಖ ಘೋಷಣೆ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಟ ವಿಜಯ್ ಎರಡು ಪ್ರಮುಖ ಘೋಷಣೆಗಳನ್ನು ಪ್ರಕಟಿಸಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳ ಪೈಕಿ ಈ ಎರಡು ಘೋಷಣೆಗಳು ಸೇರಿಕೊಂಡಿವೆ.

ಎರಡು ಯೋಜನೆಗೆ ಆದೇಶ
ಉಚಿತ 200 ಯುನಿಟ್ ನೀಡುವ ಯೋಜನೆ ಮತ್ತು ಮಾದಕ ವಸ್ತುಗಳ ವಿರುದ್ಧ ಕ್ರಮ ಮತ್ತು ಮಹಿಳೆಯರ ಸುರಕ್ಷತೆಯನ್ನು ಒಳಗೊಂಡ ಫೈಲ್‌ಗೆ ಮುಖ್ಯಮಂತ್ರಿ ವಿಜಯ್ ಸಹಿ ಹಾಕಿದ್ದಾರೆ. ಪ್ರಮಾಣ ವಚನಕ್ಕೂ ಮುನ್ನ ಎನ್ ನೆಂಜಿಲ್ ಕುಡಿಯಿರುಕ್ಕುಮ್ (ನನ್ನ ಹೃದಯದಲ್ಲಿ ವಾಸಿಸುವವರು) ಎಂಬ ಸಾಲಿನಿಂದ ವಿಜಯ್ ಹೇಳಿದರು. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್ ಹಲವು ಬಾರಿ ಎನ್ ನೆಂಜಿಲ್ ಕುಡಿಯಿರುಕ್ಕುಮ್ ಎಂಬ ಪದ ಬಳಕೆ ಮಾಡುತ್ತಾರೆ.
ಸಿನಿಮಾ ಶೈಲಿಯಲ್ಲಿ ಡೈಲಾಗ್
ನಟ ವಿಜಯ್, ತಮಿಳುನಾಡು ಮುಖ್ಯಮಂತ್ರಿಯಾಗಿ ಸಿನಿಮಾ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. "ಸಿ. ಜೋಸೆಫ್ ವಿಜಯ್ ಎಂಬ ನಾನು..." ಅಂತ ಶುರು ಮಾಡಿದ ವಿಜಯ್, ಪೇಪರ್ ನೋಡದೆಯೇ ಪ್ರಮಾಣವಚನ ಹೇಳಿದರು. ದೇವರ ಮೇಲೆ ಆಣೆ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಸಿನಿಮಾದ ಪಂಚ್ ಡೈಲಾಗ್‌ಗಳಂತೆ, ನೆರೆದಿದ್ದ ಸಾವಿರಾರು ಜನರನ್ನು ಹುಚ್ಚೆಬ್ಬಿಸುವಂತಿತ್ತು ಅವರ ಮಾತುಗಳು. ಪ್ರಮಾಣ ವಚನದ ಎರಡನೇ ಭಾಗವನ್ನು ಮಾತ್ರ ಅವರು ಪೇಪರ್ ನೋಡಿ ಓದಿದರು.
ವಿಜಯ್ ಜೊತೆ 9 ಶಾಸಕರು ಪ್ರಮಾಣವಚನ
ಪ್ರಮಾಣವಚನ ಸಮಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು. ಬಹಳ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜಯ್ ಕುಟುಂಬಸ್ಥರು, ಟಿವಿಕೆ ಕಾರ್ಯಕರ್ತರು ಮತ್ತು ಸಿನಿಮಾ ತಾರೆಯರ ದೊಡ್ಡ ಬಳಗವೇ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಟಿವಿಕೆ ಪಕ್ಷವು 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ವಿಜಯ್ ಅವರೊಂದಿಗೆ ಒಟ್ಟು 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

