- Home
- News
- India News
- ಬೆಳ್ಳಂಬೆಳಗ್ಗೆ ರಾಮದೂತ ಹನುಮನ ಮೊರೆ ಹೋದ ಅಖಿಲೇಶ್ ಯಾದವ್; ಬಂಗಾಳ ರಿಸಲ್ಟ್ ಬೆನ್ನಲ್ಲೇ ಅಚ್ಚರಿ ನಡೆ
ಬೆಳ್ಳಂಬೆಳಗ್ಗೆ ರಾಮದೂತ ಹನುಮನ ಮೊರೆ ಹೋದ ಅಖಿಲೇಶ್ ಯಾದವ್; ಬಂಗಾಳ ರಿಸಲ್ಟ್ ಬೆನ್ನಲ್ಲೇ ಅಚ್ಚರಿ ನಡೆ
ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಆಂಜನೇಯನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಅವರ ಈ ನಡೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇದು ರಾಜಕೀಯ ಪ್ರೇರಿತವೇ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಅಖಿಲೇಶ್ ಯಾದವ್
ಮಾಜಿ ಸಿಎಂ ಅಖಿಲೇಶ್ ಯಾದವ್ ಇಂದು ಬೆಳ್ಳಂಬೆಳಗ್ಗೆ ರಾಮನ ಬಂಟ, ವಾಯುಪುತ್ರ ಆಂಜನೇಯನ ಮೊರೆ ಹೋಗಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಚುನಾವಣೆ ಸಮೀಪಿಸುತ್ತಿದ್ದಂತೆ ಆಂಜನೇಯನ ನೆನಪು ಬಂತಾ ಎಂದು ಕಮೆಂಟ್ ಮಾಡಿದ್ದಾರೆ.
ಪವನಪುತ್ರ ಮಾರುತಿಯ ಫೋಟೋ
ಇಂದು ಬೆಳಗ್ಗೆ ಎಕ್ಸ್ ಖಾತೆಯಲ್ಲಿ ಪವನಪುತ್ರ ಮಾರುತಿಯ ಫೋಟೋವನ್ನು ಅಖಿಲೇಶ್ ಯಾದವ್ ಹಂಚಿಕೊಂಡಿದ್ದಾರೆ. ಈ ಫೋಟೋ ಮೇಲೆ ನಿನ್ನಲ್ಲಿ ಆಶ್ರಯ ಪಡೆಯೋದರಿಂದ ಎಲ್ಲ ಸಂತೋಷಗಳು ಸಿಗುತ್ತವೆ. ನಿನ್ನ ರಕ್ಷಣೆಯಿದ್ರೆ ಯಾರಿಗೂ ಯಾವ ಭಯವಿರಲ್ಲ. ಬಜರಂಗಬಲಿಯೂ ಮನಸ್ಸಿನಲ್ಲಿರುವ ತೊಂದರೆಗಳನ್ನು ಮುಕ್ತಗೊಳಿಸಲಿದ್ದಾನೆ ಎಂಬ ಸಾಲುಗಳಿರೋದನ್ನು ಗಮನಿಸಬಹುದು.
ಆಂಜನೇಯ
ಆಂಜನೇಯನ ಬಳಿ ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡರೆ ಆತ ಎಲ್ಲವನ್ನು ಪರಿಹರಿಸುತ್ತಾನೆ ಎಂಬ ಅರ್ಥವುಳ್ಳ ಸಾಲುಗಳುಳ್ಳ ಫೋಟೋವನ್ನು ಅಖಿಲೇಶ್ ಯಾದವ್ ಶೇರ್ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯನ್ನು ಗೆದ್ದಿರೋ ಬಿಜೆಪಿ, ಈಗಾಗಲೇ ಉತ್ತರ ಪ್ರದೇಶದಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.
ಅಖಿಲೇಶ್ ಯಾದವ್ ಪೋಸ್ಟ್
ಅಖಿಲೇಶ್ ಯಾದವ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ದೀದಿ ಸೋತ ತಕ್ಷಣ, ಈಗ ಇವರಿಗೆ ದೇವರು ನೆನಪಿಗೆ ಬಂದಿದ್ದಾನೆ. ಇಂತಹ ಜನರ ಬಗ್ಗೆ ಏನು ಹೇಳೋಣ? ದುಃಖ ಅಥವಾ ಕಷ್ಟದಲ್ಲಿದ್ದಾಗಲೇ ಎಲ್ಲರೂ ದೇವರನ್ನು ನೆನಪಿಸಿಕೊಳ್ಳುತ್ತಾರೆ. ಖುಷಿಯಲ್ಲಿದ್ದಾಗ ಯಾರಿಗೂ ದೇವರು ನೆನಪಿಗೆ ಬರಲ್ಲ. ಸಂತೋಷದಲ್ಲಿದ್ದಾಗ ದೇವರು ನೆನಪಿಸಿಕೊಂಡರೆ ದುಃಖ ಏಕೆ ಬರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
— Akhilesh Yadav (@yadavakhilesh) May 5, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

