- Home
- News
- India News
- ಗುಂಡಿಯೆಲ್ಲಾ ಸರಿಯಾಗಿ ಮುಚ್ಬೇಕು.. ಮುಂಬೈ ಮೇಯರ್ BMC ಅಧಿಕಾರಿಗೆ ಹೇಳುವಾಗಲೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ!
ಗುಂಡಿಯೆಲ್ಲಾ ಸರಿಯಾಗಿ ಮುಚ್ಬೇಕು.. ಮುಂಬೈ ಮೇಯರ್ BMC ಅಧಿಕಾರಿಗೆ ಹೇಳುವಾಗಲೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ!
ಮುಂಬೈನಲ್ಲಿ ಮಳೆ ಬಂದರೆ ಜನರು ಛತ್ರಿ, ರೇನ್‌ಕೋಟ್ ತೆಗೆದುಕೊಂಡು ಹೊರಗೆ ಬರುತ್ತಾರೆ. ಆದರೆ ಈ ಬಾರಿ ಮೇಯರ್ ಮಳೆ ಪರಿಸ್ಥಿತಿ ನೋಡಲು ಬಂದಾಗ, ನಗರ ಆಡಳಿತವೇ ಅವರಿಗೆ ಒಂದು 'ಲೈವ್ ಪ್ರೆಸೆಂಟೇಶನ್' ಕೊಟ್ಟಂತಾಯಿತು!

ಮೇಯರ್‌ಗೆ ಅಧಿಕಾರಿಗೆ 'ಲೈವ್ ಡೆಮೋ'
ಮುಂಬೈನಲ್ಲಿ ಮಳೆ ಅವಾಂತರ ಪರಿಶೀಲನೆಗೆ ಬಂದಿದ್ದ ಮೇಯರ್‌ಗೆ ಅಧಿಕಾರಿಗಳ ವರದಿಗಿಂತ ದೊಡ್ಡ 'ಲೈವ್ ಡೆಮೋ' ಸಿಕ್ಕಿತು. ನೀರು ನಿಂತ ರಸ್ತೆಯನ್ನು ಪರಿಶೀಲಿಸುತ್ತಿದ್ದ ವೇಳೆ, ಬಿಎಂಸಿ ಸಿಬ್ಬಂದಿಯೊಬ್ಬರು ಏಕಾಏಕಿ ತೆರೆದಿದ್ದ ಮ್ಯಾನ್‌ಹೋಲ್‌ಗೆ ಜಾರಿ ಬಿದ್ದರು. ಈ ದೃಶ್ಯ ಮೇಯರ್ ಕಣ್ಣೆದುರೇ ನಡೆದಿದ್ದು, ಕೆಲ ಕ್ಷಣಗಳ ಕಾಲ ಅಲ್ಲಿದ್ದ ಅಧಿಕಾರಿಗಳು ಗಾಬರಿಗೊಂಡರು.
ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ
ಮುಂಬೈ ಮೇಯರ್ ರಿತು ತಾವ್ಡೆ ಅವರು ಮಳೆಯಿಂದ ಉಂಟಾದ ಪರಿಸ್ಥಿತಿಯನ್ನು ಪರಿಶೀಲಿಸಲು ದಾದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದೇ ವೇಳೆ ಬೃಹನ್‌ಮುಂಬೈ ಮಹಾನಗರ ಪಾಲಿಕೆಯ (BMC) ಸಿಬ್ಬಂದಿಯೊಬ್ಬರು ತೆರೆದಿದ್ದ ಮ್ಯಾನ್‌ಹೋಲ್‌ಗೆ ಏಕಾಏಕಿ ಜಾರಿ ಬಿದ್ದಿದ್ದಾರೆ. ಈ ದೃಶ್ಯ ಮೇಯರ್ ಎದುರೇ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್
ಘಟನೆಯ ಬಳಿಕ ಮೇಯರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. "ಯಾವ ವಾರ್ಡ್‌ನಲ್ಲಾದರೂ ತೆರೆದ ಮ್ಯಾನ್‌ಹೋಲ್ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಇದಾದ ಬಳಿಕ ಮೇಯರ್ ಕೊಟ್ಟ ಸ್ಪಷ್ಟನೆ ಮಾತ್ರ ಇನ್ನಷ್ಟು ವೈರಲ್ ಆಗಿದೆ. ಮ್ಯಾನ್‌ಹೋಲ್ ಸುತ್ತ ಎಚ್ಚರಿಕೆ ಫಲಕ ಮತ್ತು ಬ್ಯಾರಿಕೇಡ್ ಇತ್ತು. "ಅಲರ್ಟ್ ಬೋರ್ಡ್ ಓದಿದ್ದರೆ ಈ ಘಟನೆ ಆಗುತ್ತಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಬೇಡ, ಸಮಸ್ಯೆಯ ಲೈವ್ ಡೆಮೋ ಸಾಕು!
ಮುಂಬೈ ಮಳೆಯಲ್ಲಿ ರಸ್ತೆಯ ಕೆಳಗೂ ಒಂದು ಲೋಕ ಇದೆ ಅನ್ನೋದನ್ನು ಸಿಬ್ಬಂದಿಯೇ ತೋರಿಸಿದರು!
ಮೇಯರ್ ಭೇಟಿ ಕೊಟ್ಟರೆ ಸಮಸ್ಯೆಗಳು ಫೈಲ್‌ನಲ್ಲಿ ಅಲ್ಲ, ನೇರವಾಗಿ ಎದುರು ಬರುತ್ತವೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ