ಕೇಂದ್ರ ಸರ್ಕಾರದ ಈ ಯೋಜನೆಯಡಿ ಕೇವಲ 5% ಬಡ್ಡಿಗೆ ಸಿಗುತ್ತೆ 3 ಲಕ್ಷ ರೂ ಸಾಲ!
ಕೇಂದ್ರ ಸರ್ಕಾರದ ಹಲುವು ಯೋಜನೆಗಳ ಅತೀ ಕಡಿಮೆ ಬಡ್ಡಿದರ, ಕೆಲ ಯೋಜನೆಗಳಲ್ಲಿ ಸಬ್ಸಡಿ ಸೇರಿದಂತೆ ಹಲವು ಸೌಲಭ್ಯಗಳಿದೆ. ಇದೀಗ 3 ಲಕ್ಷ ರೂಪಾಯಿ ಸಾಲವನ್ನು ಕೇವಲ ಶೇಕಡಾ 5ರ ಬಡ್ಡಿದರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾರು ಅರ್ಹ, ಸಾಲ ಪಡೆಯುವುದು ಹೇಗೆ?
ವಿಶ್ವಕರ್ಮ ಯೋಜನೆ
ಕೇಂದ್ರ ಸರ್ಕಾರ ಪ್ರತಿ ಸಮುದಾಯ, ಪ್ರತಿ ಕಾರ್ಮಿಕರು, ಕುಶಕಲಕರ್ಮಿಗಳು, ಸಣ್ಣ ಉದ್ದಿಮೆದಾರರು, ಹೊಸದಾಗಿ ಉದ್ಯಮ ಆರಂಭಿಸು ಉತ್ಸಾಹಿಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರತ್ಯೇಕ ಯೋಜನೆ ರೂಪಿಸಿದೆ. ಈ ಯೋಜನೆ ಮೂಲಕ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೆಲ ಯೋಜನೆಗಳಲ್ಲಿ ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ. ಈ ಪೈಕಿ ಕೇಂದ್ರ ಸರ್ಕಾರ ಕುಶಲಕರ್ಮಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಈ ಯೋಜನೆಯಡಿ, ನೋಂದಾಯಿತ ಅರ್ಜಿದಾರರಿಗೆ 1 ಲಕ್ಷದಿಂದ 3 ಲಕ್ಷ ರೂ.ವರೆಗೆ ಕೇವಲ 5% ಬಡ್ಡಿದರದಲ್ಲಿ ಸಾಲ ಸಿಗಲಿದೆ.
ಯೋಜನೆಯ ವಿವರಗಳು
ಈ ಯೋಜನೆಯಡಿ, ಸರ್ಕಾರ ಆರಂಭದಲ್ಲಿ 1 ಲಕ್ಷ ರೂ. ಸಾಲ ನೀಡುತ್ತದೆ. 18 ತಿಂಗಳೊಳಗೆ ಈ ಸಾಲವನ್ನು ಮರುಪಾವತಿಸಿದ ನಂತರ, ಫಲಾನುಭವಿಗೆ ಹೆಚ್ಚುವರಿಯಾಗಿ 2 ಲಕ್ಷ ರೂಪೂಯಿ ಸಾಲ ಸಿಗುತ್ತದೆ. ಎರಡೂ ಹಂತಗಳಲ್ಲಿ ಬಡ್ಡಿದರ ಕೇವಲ 5% ಇರುತ್ತದೆ.
ಸಾಲ ವೋಚರ್
ಈ ಯೋಜನೆಯಡಿ ನೋಂದಾಯಿತ ಅರ್ಜಿದಾರರಿಗೆ ತಮ್ಮ ವೃತ್ತಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು 15,000 ರೂ. ವೋಚರ್ ಸಿಗುತ್ತದೆ. ಕುಶಲಕರ್ಮಿಗಳು ತಮ್ಮ ಉದ್ಯಮಕ್ಕೆ ಅಥವಾ ಸಣ್ಣ ಮಟ್ಟದಲ್ಲಿ ಕೆಲಸ ಆರಂಭಿಸಲು ಈ ಯೋಜನೆ ನೆರವಾಗುತ್ತದೆ. ಹಂತ ಹಂತವಾಗಿ ಈ ಉದ್ಯಮ ಅಥವಾ ಕೆಲಸವನ್ನು ವಿಸ್ತರಿಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.
ಸಾಲದ ಅರ್ಜಿ
ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಬಡಗಿ, ಚಿನ್ನದ ಕೆಲಸಗಾರ, ಕಮ್ಮಾರ, ಕಲ್ಲು ಕೆತ್ತನೆಗಾರ, ಕ್ಷೌರಿಕ ಮುಂತಾದ ವಿವಿಧ ವೃತ್ತಿಗಳಿಗೆ ತರಬೇತಿ ನೀಡಲಾಗುವುದು. ತಮ್ಮ ತಮ್ಮ ಆಸಕ್ತಿ ಹಾಗೂ ನಿಪುಣತೆ ಕ್ಷೇತ್ರದಲ್ಲಿ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಲು ಸಾಧ್ಯವಾಗುತ್ತದೆ. ಹಣಕಾಸಿನ ಸೌಲಭ್ಯವನ್ನು ಪ್ರಧಾನಿ ವಿಶ್ವಕರ್ಮ ಯೋಜನೆ ನೀಡಲಿದೆ.
ಯೋಜನೆಯ ಅಪ್ಡೇಟ್ಸ್
ಈ ಯೋಜನೆಯನ್ನು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಮಂಗಳವಾರದ ವರೆಗೆ 2.59 ಕೋಟಿ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಸುಮಾರು 23.97 ಲಕ್ಷ ಅರ್ಜಿದಾರರ ನೋಂದಣಿ ಪೂರ್ಣಗೊಂಡಿದೆ.