- Home
- News
- India News
- ರೈಲ್ವೇಯಲ್ಲಿ ಭರ್ಜರಿ ಉದ್ಯೋಗವಕಾಶ, 14,298 ಖಾಲಿ ಹುದ್ದೆ ನೇಮಕಾತಿಗೆ ಅ.16ರೊಳಗೆ ಅರ್ಜಿ ಸಲ್ಲಿಸಿ!
ರೈಲ್ವೇಯಲ್ಲಿ ಭರ್ಜರಿ ಉದ್ಯೋಗವಕಾಶ, 14,298 ಖಾಲಿ ಹುದ್ದೆ ನೇಮಕಾತಿಗೆ ಅ.16ರೊಳಗೆ ಅರ್ಜಿ ಸಲ್ಲಿಸಿ!
ದೇಶಾದ್ಯಂತ 14,928 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕ ಮಂಡಳಿ (ಆರ್‌ಆರ್‌ಬಿ) ಅಧಿಸೂಚನೆ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.19,900 ರಿಂದ ರೂ.29,200 ವರೆಗೆ ವೇತನ ನೀಡಲಾಗುವುದು. ಕನಿನಷ್ಠ 10ನೇ ತರಗತಿ ಪಾಸ್ ಆದವರೂ ಅರ್ಜಿ ಸಲ್ಲಿಸಬಹುದು.

ಆರ್‌ಆರ್‌ಬಿ ನೇಮಕಾತಿ ಅಧಿಸೂಚನೆ
ರೈಲ್ವೆ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಬಿದ್ದಿದೆ. ದೇಶಾದ್ಯಂತ ಒಟ್ಟು 14,928 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ರೈಲ್ವೇ ಇಲಾಖೆ ಹೇಳಿದೆ.
ರೈಲ್ವೆ ನೇಮಕಾತಿ
ಮೊದಲಿಗೆ 9144 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ 5154 ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಲು ರೈಲ್ವೆ ನೇಮಕ ಮಂಡಳಿ ನಿರ್ಧರಿಸಿತು. ಹೀಗಾಗಿ, ಅರ್ಜಿ ಸಲ್ಲಿಸಲು ಹೆಚ್ಚುವರಿ ಸಮಯ ನೀಡಲಾಗಿದೆ. ಆದರೆ, ಈ ಹಿಂದೆ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಹರು ಇದೀಗ ಅರ್ಜಿ ಸಲ್ಲಿಸಲು ಅಕ್ಟೋಬರ್ 16ರ ವರೆಗೆ ಅವಕಾಶ ನೀಡಿದೆ.
ಆರ್‌ಆರ್‌ಬಿ ಟೆಕ್ನಿಷಿಯನ್
Technician Grade - I (Signal)
ಟೆಕ್ನಿಷಿಯನ್ ಗ್ರೇಡ್ I (ಸಿಗ್ನಲ್) ಹುದ್ದೆಯಲ್ಲಿ 1092 ಹುದ್ದೆಗಳು ಖಾಲಿ ಇವೆ. B.Sc ಭೌತಶಾಸ್ತ್ರ/ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ ಪದವೀಧರರು ಅರ್ಜಿ ಸಲ್ಲಿಸಬಹುದು. ಈ ವಿಷಯಗಳಲ್ಲಿ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವಿ ಪಡೆದವರು ಸಹ ಅರ್ಜಿ ಸಲ್ಲಿಸಬಹುದು.
01.07.2024 ರಂದು 18 ರಿಂದ 36 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆದರೆ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.29,200 ವರೆಗೆ ವೇತನ ನೀಡಲಾಗುವುದು.
ಆರ್‌ಆರ್‌ಬಿ ನೇಮಕಾತಿ 2024
Technician Grade - III
ಟೆಕ್ನಿಷಿಯನ್ ಗ್ರೇಡ್ III ಹುದ್ದೆಯಲ್ಲಿ 13206 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಕಡ್ಡಾಯ.
01.07.2024 ರಂದು 18 ರಿಂದ 33 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆದರೆ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19,900 ವರೆಗೆ ವೇತನ ನೀಡಲಾಗುವುದು.
ರೈಲ್ವೆ ಉದ್ಯೋಗಗಳು
ಈ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ಇಲಾಖೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯನ್ನು ಪ್ರತಿ ಗ್ರೇಡ್‌ಗೆ ಪ್ರತ್ಯೇಕವಾಗಿ ನಡೆಸಲಾಗುವುದು. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, ದಾಖಲೆ ಪರಿಶೀಲನೆ ನಂತರ ಅಂತಿಮ ಆಯ್ಕೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು https://www.rrbchennai.gov.in/ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ರೂ. 500. ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.250 ಮಾತ್ರ ಅರ್ಜಿ ಶುಲ್ಕ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16.10.2024
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಕೃತ ಅಧಿಸೂಚನೆಯನ್ನು ನೋಡಿ.
https://www.rrbchennai.gov.in/downloads/cen-022024/Detailed_CEN_02_2024_English.pdf
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ