ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ
ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮೂರು ಅಮೃತ ಭಾರತ್ ರೈಲು ಹಾಗೂ ಮತ್ತೊಂದು ನೂತನ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಯಾವ ಮಾರ್ಗದಲ್ಲಿ ಸಂಚಾರ?

ಅಮೃತ ಭಾರತ್ ರೈಲು
ಭಾರತೀಯ ರೈಲು ಸೇವೆಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಮೂಲಭೂತ ಸೌಕರ್ಯಗಳು, ರೈಲು ನಿಲ್ದಾಣಗಳ ನವೀಕರಣ, ಸಂಪೂರ್ಣ ಎಲೆಕ್ಟ್ರಿಫಿಕೇಶನ್ ಸೇರಿದಂತೆ ಹಲವು ಸುಧಾರಣಗಳು ಆಗಿದೆ. ಇದರ ಜೊತೆಗೆ ವಂದೇ ಭಾರತ್ ರೈಲು, ನಮೋ ಭಾರತ್ ರೈಲು, ಅಮೃತ ಭಾರತ್ ರೈಲುಗಳು ಸೇರ್ಪಡೆಗೊಂಡಿದೆ. ಇದೀಗ ಮಂಗಳೂರಿಗೆ ಅಮೃತ್ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ.
ಮೂರು ಅಮೃತ ಭಾರತ್ ರೈಲಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಇಂದು ಮೂರು ಅಮೃತ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಕೇರಳದಲ್ಲಿಂದು ಮೂರು ಅಮೃತ ಭಾರತ್ ಹಾಗೂ ಮತ್ತೊಂದು ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ವಿಶೇಷ ಈ ಪೈಕಿ ಒಂದು ರೈಲು ಮಂಗಳೂರಿಗೆ ಸೇವೆ ನೀಡಲಿದೆ
ಹೊಸ ರೈಲುಗಳ ಮಾರ್ಗ
ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿರುವ ಮೂರು ಅಮೃತ ಭಾರತ್ ಹಾಗೂ ಸಾಮಾನ್ಯ ರೈಲುಗಳ ವಿವರ ಇಲ್ಲಿದೆ. ಮಂಗಳೂರು ನಾಗರಕೊಯಿಲ್ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ತಿರುವನಂತಪುರಂ ತಂಬರಂ ಅಮೃತ್ ಭಾರತ ರೈಲು, ತಿರುವನಂತಪುರಂ ಚಾರ್ಲಪಲ್ಲಿ ಅಮೃತ ಭಾರತ್ ಎಕ್ಸ್‌ಪ್ರೆಸ್ ಹಾಗೂ ತ್ರಿಶೂರ್ ಗುರುವಾಯೂರ್ ಪ್ಯಾಸೆಂಜರ್ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲು
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳ ಸ್ಲೀಪರ್ ರೈಲು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಭಾರತದ ರೈಲು ಸಂಪರ್ಕ ಸೇವೆಯನ್ನು ಪರಿಣಾಮಕಾರಿಯಾಗಿ ನೀಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ.
ದೇಶಾದ್ಯಂತ ವಂದೇ ಭಾರತ್ ರೈಲಿಗೆ ಬೇಡಿಕೆ
ದೇಶದ ಮೂಲೆ ಮೂಲೆಯಿಂದ ವಂದೇ ಭಾರತ್ ರೈಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಆರಾಮದಾಯಕ ಪ್ರಯಾಣ ಹಾಗೂ ಅತ್ಯುತ್ತಮ ದರ್ಜೆಯ ಪ್ರಯಾಣಕ್ಕೆ ಜನರು ಬೇಡಿಕೆ ಇಡುತ್ತಾರೆ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ಅವಧಿಯೂ ಕಡಿಮೆ. ಜೊತೆಗೆ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗಲಿದೆ.
ದೇಶಾದ್ಯಂತ ವಂದೇ ಭಾರತ್ ರೈಲಿಗೆ ಬೇಡಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

