- Home
- News
- India News
- ಅಪ್ಪಾ ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ, ಕೊನೆ ಕರೆ ಮಾಡಿ ಗುರತೇ ಸಿಗದಂತೆ ಸುಟ್ಟು ಕರಕಲಾದ ಪಿಂಕಿ
ಅಪ್ಪಾ ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ, ಕೊನೆ ಕರೆ ಮಾಡಿ ಗುರತೇ ಸಿಗದಂತೆ ಸುಟ್ಟು ಕರಕಲಾದ ಪಿಂಕಿ
ಅಪ್ಪಾ ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ, ಬಾರಮತಿ ವಿಮಾನ ಅಪಘಾತದಲ್ಲಿ ಐವರು ಸುಟ್ಟುಕರಲಾದ ಪೈಕಿ ಪಿಂಕಿ ಮಾಲಿಕ್ ಕೂಡ ಒಬ್ಬಳು. ಪ್ರಯಾಣಕ್ಕೂ ಮೊದಲು ತಂದೆಗೆ ಕೊನೆಯ ಕರೆ ಮಾಡಿದ್ದರು. ಕೊನೆಯದಾಗಿ ತಂದೆಗೆ ಹೇಳಿದ್ದೇನು?

ಬಾರಮತಿ ವಿಮಾನ ಅಪಘಾತ ದುರಂತ
ಬಾರಮತಿ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಐವರು ಮೃತಪಟ್ಟಿದ್ದಾರೆ. ಈ ದುರಂತಕ್ಕೆ ದೇಶವೇ ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯಲ್ಲಿ ಫ್ಲೈಟ್ ಅಟೆಡೆಂಟ್ ಪಿಂಕಿ ಮಾಲಿ ಕೂಡ ಸುಟ್ಟು ಕರಕಲಾಗಿದ್ದಾಳೆ.
ಅಪ್ಪನಿಗೆ ಕೊನೆಯ ಕರೆ ಮಾಡಿದ್ದ ಪಿಂಕಿ
ಮುಂಬೈ ವಿಮಾನ ನಿಲ್ದಾಣದಿಂದ ಬಾರಮತಿಗೆ ವಿಮಾನ ಟೇಕ್ ಆಫ್ ಆಗುವ ಮುನ್ನ ಪಿಂಕಿ ಮಾಲಿ ತನ್ನ ತಂದೆಗೆ ಕರೆ ಮಾಡಿದ್ದಾಳೆ. ಅಪ್ಪಾ, ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ ಮಾಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾಳೆ. ಅಜಿತ್ ಪವಾರ್ ಅವರನ್ನು ಬಾರಮತಿಯಲ್ಲಿ ಡ್ರಾಪ್ ಮಾಡಿ ಬಳಿಕ ನಾಂದೇಡ್ ಪ್ರಯಾಣ ಮಾಡುತ್ತೇನೆ. ಹೆಚ್ಚಿನ ವಿಶೇಷಗಳನ್ನು ನಾಳೆ ಹೇಳುತ್ತೇನೆ ಎಂದು ತಂದಗೆ ಪಿಂಕಿ ಮಾಲಿ ಕರೆ ಮಾಡಿ ತಿಳಿಸಿದ್ದಾಳೆ.
ಮತ್ತೆ ಬರಲಿಲ್ಲ ಕರೆ, ನೋವು ತೋಡಿಕೊಂಡ ಶಿವಕುಮಾರ್
ಪಿಂಕಿ ಮಾಲಿ ತಂದೆ ಶಿವಕುಮಾರ್ ನೋವು ತೋಡಿಕೊಂಡಿದ್ದಾರೆ. ಅಜಿತ್ ಪವಾರ್ ಜೊತೆಗಿನ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಳು. ಎನ್‌ಸಿಪಿ ಕಾರ್ಯಕರ್ಯತನಾಗಿ ನನಗೂ ಹೆಮ್ಮೆ ಅನಿಸಿತ್ತು. ಮಗಳ ಕರೆಯ ನಿರೀಕ್ಷೆಯಲ್ಲಿದ್ದ ನನಗೆ ಆಘಾತವಾಗಿದೆ. ನನ್ನ ಮಗಳು ಗುರುತೇ ಸಿಗದಂತೆ ಸುಟ್ಟು ಕರಕಲಾಗಿದ್ದಾಳೆ ಎಂದು ಶಿವಕುಮಾರ್ ಕಣ್ಮೀರಿಟ್ಟಿದ್ದಾರೆ.
ಮಗಳ ಅಂತಿಮ ಸಂಸ್ಕಾರಕ್ಕೆ ಮೃತದೇಹ ಕೊಡಿ
ಕರೆ ಮಾಡತ್ತೇನೆ ಎಂದು ಫೋನ್ ಕಟ್ ಮಾಡಿದ್ದ ಮಗಳು ಈಗ ಇಲ್ಲ. ನನಗೆ ಏನೂ ತೋಚುತ್ತಿಲ್ಲ. ನನ್ನ ಪ್ರೀತಿಯ ಮಗಳನ್ನು ಕಳೆದುಕೊಂಡಿದ್ದೇನೆ. ವಿಮಾನಕ್ಕೆ ಏನಾಯಿತೋ ಗೊತ್ತಿಲ್ಲ, ನನಗೆ ತಾಂತ್ರಿಕ ಜ್ಞಾನವಿಲ್ಲ. ನನ್ನ ಮಗಳ ಮೃತದೇಹ ನೀಡಿ.ಅಂತಿಮ ಸಂಸ್ಕಾರ ಮಾಡಲು ಮಗಳ ಮೃತದೇಹವೂ ಗೊತ್ತಾಗದ ಪರಿಸ್ಥಿತಿಯಲ್ಲಿದೆ ಎಂದು ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ವರ್ಲಿ ಮುಂಬೈನಲ್ಲಿ ನೆಲೆಸಿದ್ದ ಪಿಂಕಿ
ಪಿಂಕಿ ಮಾಲಿ ಮುಂಬೈನ ವರ್ಲಿಯಲ್ಲಿ ನೆಲೆಸಿದ್ದರು. ಕಳೆದ ಐದು ವರ್ಷಗಳಿಂದ ಫ್ಲೈಟ್ ಅಟೆಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ತನ್ನ ತಮ್ಮನನ್ನು ಪೈಲೆಟ್ ಮಾಡುವ ಕನಸು ಕಂಡಿದ್ದಳು. ತನಗೆ ಪೈಲೆಟ್ ಆಗಲು ಸಾಧ್ಯವಾಗಲಿಲ್ಲ. ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಆದರೆ ತಮ್ಮನನ್ನು ಪೈಲೆಟ್ ಮಾಡುತ್ತೇನೆ ಎಂದು ಆರ್ಥಿಕ ನೆರವು ನೀಡುತ್ತಿದ್ದಳು.
ಅಪಘಾತದಲ್ಲಿ ಐವರು ಮೃತ
ಬಾರಮತಿ ವಿಮಾನ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಅಜಿತ್ ಪವಾರ್, ಡಿಸಿಎಂ ಪವಾರ್ ಭದ್ರತಾ ಸಿಬ್ಬಂದಿ ವಿದಿಪ್ ಜಾಧವ್, ವಿಮಾನ ಸಿಬ್ಬಂದಿ ಪಿಂಕಿ ಮಾಲಿ, ಪೈಲೈಟ್ ಶಾಂಭವಿ ಪಾಠಕ್ ಹಾಗೂ ಸುಮಿತ್ ಕಪೂರ್ ಮೃತಪಟ್ಟಿದ್ದಾರೆ. ವಿಮಾನ ಅಫಘಾತದ ತನಿಖೆ ತೀವ್ರಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

