ಭಾರತದಲ್ಲಿ ಐಸ್ ಕ್ರೀಮ್ ಮಾರುತ್ತಿರುವ ಪಾಕಿಸ್ತಾನದ ಮಾಜಿ ಸಂಸದ... ಯಾಕೆ ಗೊತ್ತಾ?
ಪಾಕಿಸ್ತಾನದ ಮಾಜಿ ಸಂಸದರೊಬ್ಬರು ಭಾರತದಲ್ಲಿ ಐಸ್‌ಕ್ರೀಮ್ ಮಾರುತ್ತಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ, ಆಸ್ತಿಪಾಸ್ತಿ ಬಿಟ್ಟು ಭಾರತದಲ್ಲಿ ಏಕೆ ವಾಸಿಸುತ್ತಿದ್ದಾರೆ? ಅವರು ಐಸ್ ಕ್ರೀಮ್ ಮಾರುತ್ತಿರುವುದು ಏಕೆ? ಇಲ್ಲಿ ತಿಳಿದುಕೊಳ್ಳೋಣ.

25 ವರ್ಷಗಳಿಂದ ಭಾರತದಲ್ಲಿ ಪಾಕ್ ಮಾಜಿ ಸಂಸದ:
ಪಹಲ್ಗಾಂ ದಾಳಿಯ ನಂತರ ಭಾರತ-ಪಾಕ್ ಗಡಿ ಬಿಸಿಯೇರಿತ್ತು. ಆಪರೇಷನ್ ಸಿಂದೂರ್ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಪಾಕಿಸ್ತಾನಿಗಳು ದೇಶ ಬಿಡಬೇಕೆಂದು ಭಾರತ ಆದೇಶಿಸಿತ್ತು. ಆದರೆ ಪಾಕಿಸ್ತಾನದ ಮಾಜಿ ಸಂಸದ ಡಬಾಯಾ ರಾಮ್ ಭಾರತದಲ್ಲಿಯೇ ಉಳಿದು ಐಸ್‌ಕ್ರೀಮ್ ಮಾರುತ್ತಿದ್ದಾರೆ.
ಭಾರತಕ್ಕೆ ಪಾಕ್ ಮಾಜಿ ಸಂಸದ ಬಂದಿದ್ದೇಕೆ?
ಪಾಕಿಸ್ತಾನಿ ಡಬಾಯಾ ರಾಮ್ ಪಾಕಿಸ್ತಾನದ ಮಾಜಿ ಸಂಸದರು. 1989 ರಲ್ಲಿ ಬೆನಜೀರ್ ಭುಟ್ಟೋ ಪ್ರಧಾನಮಂತ್ರಿಯಾಗಿದ್ದ ಆಡಳಿತದ ಅವಧಿಯಲ್ಲಿ ಅವರು ಸಂಸದರಾಗಿ ಗೆದ್ದರು. ಆದರೆ, ಸಾರ್ವಜನಿಕ ಪ್ರತಿನಿಧಿಯಾಗಿದ್ದರೂ, ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ (ಹಿಂದೂ) ಸೇರಿದವರಾಗಿದ್ದರಿಂದ ಪಾಕಿಸ್ತಾನದಲ್ಲಿ ಅವರಿಗೆ ರಕ್ಷಣೆ ಇಲ್ಲದಂತಾಗಿತ್ತು. ಡಬಯಾ ರಾಮ್ ಸಂಸದರಾಗಿದ್ದಾಗ, ಅವರ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದರೂ, ಅವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಅವರ ರಾಜಕೀಯ ಪ್ರಭಾವ ಮತ್ತು ಸಂಪತ್ತಿನ ಹೊರತಾಗಿಯೂ, ಅವರು ತಮ್ಮ ಸ್ವಂತ ಕುಟುಂಬವನ್ನು ಪೋಷಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಅವರು 2000ರಲ್ಲಿ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ವಲಸೆ ಬಂದರು.
ದಬಯಾ ರಾಮ್ ತಮ್ಮ ಪತ್ನಿ ರಾಜೋ ರಾಣಿ, 8 ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದರು. ಹರಿಯಾಣದ ರೋಹ್ಟಕ್‌ನಿಂದ ಈ ಕುಟುಂಬವು 2008ರಲ್ಲಿ ಫತೇಹಾಬಾದ್‌ನ ರತನ್‌ಗಢಕ್ಕೆ ಸ್ಥಳಾಂತರಗೊಂಡಿತು. ಪಾಕಿಸ್ತಾನದ ಮಾಜಿ ಸಂಸದರ ಕುಟುಂಬವು ಕಳೆದ 25 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದೆ. ಪ್ರಸ್ತುತ, ಅವರ ಕುಟುಂಬದಲ್ಲಿ 30 ಸದಸ್ಯರಿದ್ದಾರೆ.
ಬಂಡಿಯಲ್ಲಿ ಐಸ್‌ಕ್ರೀಮ್ ಮಾರುತ್ತಿರುವ ಪಾಕ್ ಮಾಜಿ ಸಂಸದ:
ಪಾಕಿಸ್ತಾನದ ಮಾಜಿ ಸಂಸದ ಡಬಾಯ್ ರಾಮ್ ಐಸ್ ಕ್ರೀಮ್ ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಾರೆ. ಪಾಕಿಸ್ತಾನದಲ್ಲಿ ಒಳ್ಳೆಯ ಮನೆಗಳು ಮತ್ತು 25 ಎಕರೆ ತೋಟವಿದ್ದರೂ, ಅವರು ಅಲ್ಲಿಗೆ ಹಿಂತಿರುಗಿ ಹೋಗಲಿಲ್ಲ. ನಮ್ಮ ಕುಟುಂಬ ಭಾರತದಲ್ಲಿ ಸುರಕ್ಷಿತವಾಗಿರುವುದರಿಂದ ನಾವು ಇಲ್ಲಿಯೇ ಇರುತ್ತೇವೆ. ಈಗಾಗಲೇ ದಬಯಾ ರಾಮ್ ಅವರ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ 6 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಉಳಿದವರನ್ನು ಭಾರತೀಯರೆಂದು ಗುರುತಿಸಿ ಪೌರತ್ವ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಅದು ಪ್ರಕ್ರಿಯೆಯಲ್ಲಿದೆ ಎಂದು ಹೇಳುತ್ತಾರೆ.
ಭಾರತೀಯರು ದಯಾಳುಗಳು... ಪಾಕಿಸ್ತಾನದಿಂದ ಬಂದಿದ್ದರೂ ನಮಗೆ ಆಶ್ರಯ ಮತ್ತು ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಸ್ಥಳೀಯ ಆಡಳಿತಗಾರರು ಸಹ ತಮ್ಮ ಬೆಂಬಲಕ್ಕೆ ನಿಂತರು. ಅದಕ್ಕಾಗಿಯೇ ನಮ್ಮ ಕುಟುಂಬವು ಶಾಂತಿಯುತವಾಗಿ ಬದುಕಲು ಸಾಧ್ಯವಾಗಿದೆ. ಪಾಕಿಸ್ತಾನದಲ್ಲಿ ರಾಜಕೀಯ ಹಿನ್ನೆಲೆ ಮತ್ತು ಆಸ್ತಿಗಳಿದ್ದರೂ, ದಬಯಾ ರಾಮ್ ತನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ಆಗದೇ ಭಾರತಕ್ಕೆ ಬಂದು ಬಂಡಿಯಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದೇನೆ ಎಂದು ಹೇಳಿದರು.
ಭಾರತೀಯ ಪೌರತ್ವಕ್ಕಾಗಿ ಕಾಯುತ್ತಿರುವ ಕುಟುಂಬ:
ಭಾರತದಲ್ಲಿ ವಾಸಿಸುವ ನಮ್ಮ ಎಲ್ಲ ಕುಟುಂಬ ಸದಸ್ಯರು ಆಧಾರ್ ಕಾರ್ಡ್‌ಗಳು ಮತ್ತು ಇತರ ಗುರುತಿನ ದಾಖಲೆಗಳನ್ನು ಪಡೆದಿದ್ದಾರೆ. ನಾವೆಲ್ಲರೂ ಶೀಘ್ರದಲ್ಲೇ ಭಾರತೀಯ ಪೌರತ್ವವನ್ನು ಪಡೆಯಲು ಎದುರು ನೋಡುತ್ತಿದ್ದೇವೆ. ಇದಕ್ಕಾಗಿ ನಾವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಳಿಗೆ ಅಲೆದಾಡುತ್ತಿದ್ದೇವೆ. ಸಿಎಎ ಮೂಲಕ ಭಾರತೀಯ ಪೌರತ್ವ ದೊರೆಯುವ ವಿಶ್ವಾಸವಿದೆ ಎಂದು ದಬಯಾ ರಾಮ್ ಹೇಳಿದರು.
ಉಗ್ರವಾದ ವಿರುದ್ಧ ಹೋರಾಟಕ್ಕೆ ಪಾಕ್ ಮಾಜಿ ಸಂಸದನ ಬೆಂಬಲ:
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಇಸ್ಲಾಮಿಕ್ ಉಗ್ರರ ದಾಳಿ ಖಂಡಿಸಿರುವ ಡಬಾಯಾ ರಾಮ್, ಭಾರತದ ಆಪರೇಷನ್ ಸಿಂದೂರ್‌ಗೆ ಬೆಂಬಲ ಸೂಚಿಸಿದ್ದಾರೆ. ಉಗ್ರರನ್ನು ಅವರ ನೆಲೆಯಲ್ಲೇ ಮಟ್ಟಹಾಕಬೇಕು ಅಂತ ಹೇಳಿದ್ದಾರೆ.