Astrologer Kamalakar Bhat Case ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸುಚಿತ್ರಾ, ಕಮಲಾಕರ್‌ ಭಟ್‌ ಅವರ ಆಡಿಯೋ ಮಾತ್ರ ದೊಡ್ಡ ಸ್ಫೋಟ ಮಾಡಿದೆ. ಈಗ ಸುಚಿತ್ರಾ ಹೆಸರಿಗೆ 100 ಕೋಟಿ ರೂಪಾಯಿ ಆಸ್ತಿ ಮಾಡಿರೋ ವಿಷಯ ಕೂಡ ಬದಲಾಗಿದೆ. ನನ್ನ ಜೀವನ ಹಾಳಾದರೆ ತೊಂದರೆ ಇಲ್ಲ ಎಂದು ಕಮಲಾಕರ್‌ ಭಟ್‌ ಹೇಳಿದ್ದರು. 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿದ್ದು, ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್‌ಗೆ ( Kamalakar Bhat ) ಹನಿಟ್ರ್ಯಾಪ್‌ ಮಾಡಿ, ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಳು ಎಂಬ ಸಂಗತಿ ಬಯಲಿಗೆ ಬಂದಿದೆ. ಹೀಗಿರುವಾಗ ಜ್ಯೋತಿಷಿ ಆಸ್ತಿ ಬಗ್ಗೆ ಮಾಹಿತಿ ಕೊಡುವ ಆಡಿಯೋ ಕೂಡ ವೈರಲ್‌ ಆಗ್ತಿದೆ.

ಸುಚಿತ್ರಾ ಆಡಿಯೋ ಕೇಳೋಕೆ ಆಗೋದಿಲ್ಲ

ಈಗ ಕಮಲಾಕರ್‌ ಭಟ್‌ ಅವರ ಆಡಿಯೋ ವೈರಲ್‌ ಆಗಿದೆ. ಈ ಹಿಂದೆ ಕಮಲಾಕರ್‌ ಭಟ್‌ ಜೊತೆ ಲೈ*ಗಿಕ ಸಂಪರ್ಕ ಇರುವ ಬಗ್ಗೆ ಸುಚಿತ್ರಾ ಮಾತನಾಡಿದ್ದ ಅಶ್ಲೀಲ ಆಡಿಯೋವನ್ನು ಕೇಳಿಸಿಕೊಳ್ಳುವ ಹಾಗೆ ಕೂಡ ಇಲ್ಲ ಬಿಡಿ. ಅಂದಹಾಗೆ ಕಮಲಾಕರ್‌ ಭಟ್‌ ಕೂಡ ಮಾತನಾಡಿದ್ದ ಆಡಿಯೋ ಭಾಗ 1ರಲ್ಲಿ, “ನಾನು ಏನೇ ಆದರೂ ಅವಳನ್ನು ಬಿಡೋದಿಲ್ಲ, 4 ತಿಂಗಳ ಪರಿಶ್ರಮದಿಂದ ಅವಳನ್ನು ಪಡೆದುಕೊಂಡಿದ್ದೀನಿ, ಅವಳು ಚಿಟಿಕಿ ಹೊಡೆದರೆ ಜನರು ಕ್ಯೂ ನಿಲ್ಯಾರೆ” ಎಂಬ ಮಾತಿತ್ತು.

ಕೋಟಿ ಕೋಟಿ ಆಸ್ತಿ ಮಾಡಿರೋ ಕಮಲಾಕರ್‌ ಭಟ್

“ನಾನು ನಾಳೆ ಸತ್ತರೂ ಪರವಾಗಿಲ್ಲ, ಇಂದು ಸತ್ತರೂ ಕೂಡ ಪರವಾಗಿಲ್ಲ. ಸುಚಿತ್ರಾ ಲೈಫ್‌ ಸೆಟಲ್‌ ಆಗಲಿ ಎಂದು 50-100 ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ, ಮಗಳಿಗೆ 3 ಕೋಟಿ ರೂಪಾಯಿ ಮಾಡಿದ್ದೀನಿ. ನಾನು ನಿಷ್ಕಲ್ಮಷ ಮನಸ್ಸಿನಿಂದ ಇದನ್ನೆಲ್ಲ ಮಾಡಿದೀನಿ” ಎಂದು ಕಮಲಾಕರ್‌ ಭಟ್‌ ಆಡಿಯೋ ವೈರಲ್‌ ಆಗ್ತಿದೆ.

“ಏನೇನೋ ಮಾಡಿದ್ದಾಳೆ ಎಂದು ನೀನು ಹೇಳಿರಬಹುದು, ಸಾವಿರಾರು ಜನರು ಹೇಳಿದರೂ ಕೂಡ ನಾನು ಅವಳನ್ನು ಮರೆಯೋದಿಲ್ಲ. ಕಾನೂನು ಏನು ಹೇಳುವುದು ಎಂದು ನನಗೆ ಗೊತ್ತಿದೆ. ಅವಳ ಲೈಫ್‌, ಮಗಳ ಲೈಫ್‌ ಸೆಟಲ್‌ ಆಗಿದೆ. ನನ್ನ ಎಂಡ್‌ ಆದರೂ ಚಿಂತೆ ಇಲ್ಲ. ಏನೇ ಮಾತನಾಡಬೇಕಿದ್ದರೂ ಕೂಡ, ನೀನು ನನ್ನ ಜೊತೆ ಮಾತನಾಡಬೇಕು, ಅದನ್ನು ಬಿಟ್ಟು ಅವಳಿಗೆ ಆ ಪದಗಳನ್ನು ಬಳಸೋದು ಏನಿದೆ? ನಾನು ಅವಳನ್ನು ಮದುವೆ ಆಗಿದ್ದೀನಿ” ಎಂಬ ಆಡಿಯೋ ವೈರಲ್‌ ಆಗ್ತಿದೆ.

ಈಕೆಯ ಮೊದಲ ಹೆಸರು ಸುರೇಖಾ ಎಂದಾಗಿದ್ದು, ಮದುವೆ ಬಳಿಕ ಸುಚಿತ್ರಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಳು. ಸುರೇಖಾ ನನ್ನ ಅಕ್ಕ, ಆಕೆಯ ಮಕ್ಕಳನ್ನು ನಾನೇ ಸಾಕುತ್ತಿದ್ದೇನೆ. ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ, ಬೇರೆ, ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎಂಬ ಸಂಗತಿ ಬಯಲಾಗಿದೆ.