ಹೊಸ ಕೊರೋನಾ ಪತ್ತೆಗೆ ಕನಿಷ್ಠ 24 ಗಂಟೆ ಬೇಕು: ಭಾರತಕ್ಕಿದೆಯಾ ಪರೀಕ್ಷಾ ಕೇಂದ್ರದ ಕೊರತೆ?

First Published Dec 24, 2020, 8:39 PM IST

ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತಾರ ಕೊರೋನಾ ತಳಿ ವಿಶ್ವದ ಕೆಲ ರಾಷ್ಟ್ರಗಳಿಗೆ ಹರಡುತ್ತಿದೆ. ಹೀಗಾಗಿ ಭಾರತ ಅಲರ್ಟ್ ಆಗಿದೆ. ಮುಂದಾಗ್ರತ ಕ್ರಮ ಕೈಗೊಳ್ಳುತ್ತಿದೆ. ಬ್ರಿಟನ್ ಹಾಗೂ ಯೂರೋಪ್‌ನಿಂದ ಆಗಮಿಸಿದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಭಾರತಕ್ಕೆ ಸವಾಲಾಗಿರುವುದು ಹೊಸ ಕೊರೋನ ತಳಿ ಪತ್ತೆ ಪರೀಕ್ಷೆ. ಈ ಕುರಿತು CSIR ಮುಖ್ಯಸ್ಥ ಹಲವು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ವುಹಾನ್‌ನಲ್ಲಿ ಹುಟ್ಟಿದ ಕೊರೋನಾವೈರಸ್ ಆರ್ಭಟ ವಿಶ್ವದಲ್ಲಿ ಇನ್ನೂ ನಿಂತಿಲ್ಲ. ಇದರ ನಡುವೆ ಇದೀಗ ಬ್ರಿಟನ್‌ನಿಂದ ರೂಪಾಂತರ ಕೊರೋನಾ ವೈರಸ್ ಕಾಟ ಆರಂಭಗೊಂಡಿದೆ.

ಭಾರತದಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳುತ್ತಿದೆ. ಆದರೆ ಸದ್ಯ ಹೊಸ ಕೊರೋನಾ ತಳಿ ಪತ್ತೆ ಮಾಡಬಲ್ಲ ಪರೀಕ್ಷಾ ಕೇಂದ್ರಗಳ ಕುರಿತು ಪ್ರಶ್ನೆಗಳು ಎದ್ದಿದೆ.

ಹೊಸ ಕೊರೋನಾ ವೈರಸ್ ಪತ್ತೆ ಮಾಡಲು ಕನಿಷ್ಠ 24 ಗಂಟೆಗಳ ಸಮಯ ಬೇಕಿದೆ ಎಂದು ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮುಖ್ಯಸ್ಥ ಶೇಖರ್ ಮುಂಡೆ ಹೇಳಿದ್ದಾರೆ.

ಭಾರತದಲ್ಲಿ ಹೊಸ ರೂಪಾಂತರಗೊಂಡ ಕೊರೋನಾ ವೈರಸ್ ತಳಿ ಪತ್ತೆ ಮಾಡಬಲ್ಲ ಪರೀಕ್ಷಾ ಕೇಂದ್ರಗಳ ಸಂಖ್ಯೆ ಒಟ್ಟು 6 ಎಂದು ಶೇಖರ್ ಮುಂಡೆ ಹೇಳಿದ್ದಾರೆ.

ಸದ್ಯ ಭಾರತದ 5 ಪರೀಕ್ಷಾ ಲ್ಯಾಬ್‌ಗಳಿಗೆ ಸ್ಯಾಂಪಲ್ ಕಳುಹಿಸಲಾಗಿದೆ. ಒಂದು ಅಥವಾ ಗರಿಷ್ಠ 2 ದಿನದಲ್ಲಿ ವರದಿ ಹೊರಬರಲಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು CSIR ಹೇಳಿದೆ.

ಹೊಸ ಕೊರೋನಾ ತಳಿಗೆ ಲಸಿಕೆ ಅಭಿವೃದ್ಧಿ ಮಾಡಲಾಗುತ್ತಿದೆ. ಸದ್ಯ ಇರುವ ಕೊರೋನಾ ಲಸಿಕೆ ಕೂಡ ಪರಿಣಾಮಕಾರಿಯಾಗಿದೆ. ಆದರೆ ಮತ್ತೊಂದು ಹಂತದ ಲಸಿಕೆ ಅಭಿವೃದ್ಧಿ ಕಾರ್ಯ ಚುರುಕುಗೊಂಡಿದೆ ಎಂದು CSIR ಹೇಳಿದೆ.

ಬ್ರಿಟನ್ ಕೊರೋನಾ ವೈರಸ್ ಕ್ಷಿಪ್ರವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಾಮಾಜಿಕ ಅಂತರ ಮಾಸ್ಕ್ ಧಾರಣೆ ಹಾಗೂ ಶುಚಿತ್ವದ ಕಡೆ ಹೆಚ್ಚಿನ ಮಹತ್ವದ ಅಗತ್ಯ ಎಂದಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?