50 ರೂಪಾಯಿಗೆ 1 ಕೆಜಿ ಗೋಡಂಬಿ; ನಿಮಗೂ ಬೇಕಾದ್ರೆ ಈ ಹಳ್ಳಿಗೆ ಹೋಗಿ ಖರೀದಿಸಿ, ಯಾಕಿಷ್ಟು ಕಡಿಮೆ?
ದೇಶದ ಈ ಗ್ರಾಮದಲ್ಲಿ ಗೋಡಂಬಿಯನ್ನು ಕೆಜಿಗೆ ಕೇವಲ 50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಗೋಡಂಬಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆಯಾದರೂ, ಸಂಸ್ಕರಣಾ ಘಟಕ ಮತ್ತು ರಫ್ತು ಸೌಲಭ್ಯಗಳ ಕೊರತೆಯಿಂದಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

50 ರೂ.ಗೆ ಒಂದು ಕೆಜಿ ಗೋಡಂಬಿ
ಸಾಮಾನ್ಯವಾಗಿ ಗೋಡಂಬಿಯನ್ನು ಶ್ರೀಮಂತರ ಆಹಾರ ಎಂದು ಪರಿಗಣಿಸಲಾಗುತ್ತದೆ. ಕಾರಣ ಗೋಡಂಬಿ ಬೆಲೆ ಕೆಜಿಗೆ 800 ರೂ.ಗಳಿಂದ 1,000 ರೂ. ಆಗುತ್ತದೆ. ಗುಣಮಟ್ಟದ ಆಧಾರದ ಮೇಲೆ ಗೋಡಂಬಿಯನ್ನು ವಿಂಗಡನೆ ಮಾಡಿ ಮಾರಾಟ ಮಾಡಲಾಗುತ್ತದೆ. ಆದ್ರೆ ಈ ದುಬಾರಿ ಗೋಡಂಬಿ ಗ್ರಾಮವೊಂದರಲ್ಲಿ ಕೇವಲ 50 ರೂಪಾಯಿಗೆ ಒಂದು ಕೆಜಿ ಸಿಗುತ್ತದೆ.
ಎಲ್ಲಿದೆ ಈ ಗೋಡಂಬಿ ಗ್ರಾಮ?
ಈ ಗ್ರಾಮವನ್ನು ಗೋಡಂಬಿ ನಗರ ಎಂದು ಕರೆಯಲಾಗುತ್ತದೆ. ಜಾರ್ಖಂಡ್ ರಾಜ್ಯದ ಜಂತಾರಾ ಜಿಲ್ಲೆಯ ನಾಲಾ ಅಥವಾ ನಾಳ ಎಂಬ ಗ್ರಾಮದಲ್ಲಿ ರಸ್ತೆಬದಿ ಗೋಡಂಬಿ ಮಾರಾಟ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರದಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ನಿಮಗೆ ಉತ್ತಮ ಗುಣಮಟ್ಟದ ಗೋಡಂಬಿ ಅತಿ ಕಡಿಮೆ ಬೆಲೆಗೆ ಸಿಗುತ್ತದೆ.
ಯಾಕೆ ಇಷ್ಟು ಕಡಿಮೆ ದರ?
ಈ ಗ್ರಾಮದ ಜನರು ತರಕಾರಿಯಂತೆ ರಸ್ತೆಬದಿ ಗೋಡಂಬಿ ಮಾರಾಟ ಮಾಡುತ್ತಾರೆ. ಜಮತಾರಾ ಜಿಲ್ಲೆಯ ಜನರು ಗೋಡಂಬಿ ಖರೀದಿಗಾಗಿಯೇ ನಾಲಾ ಗ್ರಾಮಕ್ಕೆ ಬರುತ್ತಾರೆ. ತರಕಾರಿಯಂತೆ ಕಡಿಮೆ ಬೆಲೆಗೆ ಗೋಡಂಬಿ ಮಾರಾಟ ಮಾಡಲಾಗುತ್ತದೆ. ಈ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತದೆ. ದೂರದ ಪ್ರದೇಶಗಳಿಗೆ ತಮ್ಮ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲಾಗದೇ ರೈತರು ಸ್ಥಳೀಯ ಮಾರುಕಟ್ಟೆಗೆ ಗೋಡಂಬಿ ತೆಗೆದುಕೊಂಡು ಬರುತ್ತಾರೆ. ಇಲ್ಲಿಯ ಜನರಿಂದ ಕಡಿಮೆ ಬೆಲೆಗೆ ಖರೀದಿಸಿ ಹತ್ತುಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ.
ಮೂಲಬೆಲೆಯ ಕಾಲು ಬೆಲೆಗೆ ಗೋಡಂಬಿ ಮಾರಾಟ
2010ಕ್ಕಿಂತ ಯಾವ ಬೆಳೆ ಬೆಳೆಯಬೇಕು ಅನ್ನೋದು ಇಲ್ಲಿಯ ಜನರಿಗೆ ಗೊತ್ತಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕೃಷಿತಜ್ಞರು, ಇಲ್ಲಿಯ ಹವಾಮಾನ ಮತ್ತು ಮಣ್ಣು ಗೋಡಂಬಿಗೆ ಸೂಕ್ತವಾಗಿದೆ ಎಂದು ಹೇಳಿದರು. ನಂತರ ಇಲ್ಲಿಯ ರೈತರಿಗೆ ಗೋಡಂಬಿ ತೋಟಗಾರಿಕೆಯ ತರಬೇತಿ ನೀಡಿದರು. ಅಂದಿನಿಂದ ಇಲ್ಲಿಯ ರೈತರು ಗೋಡಂಬಿ ತೋಟಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಗೋಡಂಬಿ ಬೆಳೆಯುತ್ತಿದ್ದು, ರಸ್ತೆಬದಿಯಲ್ಲಿ ಮೂಲ ಬೆಲೆಯ ಕಾಲು ಭಾಗಕ್ಕೆ ಮಾರಾಟ ಮಾಡುತ್ತಾರೆ.
ರಫ್ತು, ಗೋಡಂಬಿ ಸಂಸ್ಕರಣಾ ಘಟಕದ ಕೊರತೆ
2010 ರಲ್ಲಿ, ಐಎಎಸ್ ಕೃಪಾನಂದರು ಜಂತರಾ ಜಿಲ್ಲೆಯ ಉಪ ಆಯುಕ್ತರಾಗಿದ್ದರು. ನಾಲಾ ಗ್ರಾಮದಲ್ಲಿನ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳು ಗೋಡಂಬಿ ಕೃಷಿಗೆ ಸೂಕ್ತವಾಗಿವೆ ಎಂದು ತಿಳಿದುಕೊಂಡು ಕೃಷಿ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಗೋಡಂಬಿ ಬೆಳೆಯಲು ಪ್ರೋತ್ಸಾಹಿಸಿದರು. ಆದ್ರೆ ಗೋಡಂಬಿ ಸಂಸ್ಕರಣಾ ಘಟಕದ ಕೊರತೆಯಿಂದಾಗಿ ರೈತರು ಕಡಿಮೆ ಬೆಲೆಗೆ ಮಾರುವಂತಾಗಿದೆ. ಸಂಸ್ಕರಣಾ ಘಟಕವಿದ್ದರೆ, ರೈತರಿಹೆ ಇಲ್ಲಿಂದ ರಫ್ತು ಮಾಡಲು ಅವಕಾಶವಿರುತ್ತದೆ. ಇದರಿಂದ ಸ್ಥಳೀಯವಾಗಿ ಉದ್ಯೋಗಗಳು ಹೆಚ್ಚಾಗುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

