ದೇಶದಲ್ಲಿ ಇಂಧನ ಸಂಗ್ರಹದ ಕೊರತೆ ಇದ್ಯಾ? ಕೇಂದ್ರ ಸಚಿವ ಪುರಿ ಸ್ಪಷ್ಟನೆ
ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಭಾರತದಲ್ಲಿ ಮುಂದಿನ ಕೆಲ ತಿಂಗಳಿಗೆ ಬೇಕಾದಷ್ಟು ಇಂಧನ ಸಂಗ್ರಹವಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
14

Image Credit : Asianet News
‘ಇರಾನ್-ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದರೂ ಭಾರತದಲ್ಲಿ ಮುಂದಿನ ಕೆಲ ತಿಂಗಳಿಗೆ ಬೇಕಾದಷ್ಟು ಇಂಧನ ಸಂಗ್ರಹ ಇದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
24
Image Credit : Gemini
ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಮತ್ತು ಇಂಧನ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಬಳಿಕ ಹೇಳಿಕೆ ನೀಡಿರುವ ಪುರಿ, ‘ಭಾರತದ ಇಂಧನ ಕ್ಷೇತ್ರವು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಇಂಧನ ಲಭ್ಯತೆ, ಕೈಗೆಟುಕುವಿಕೆ ಮತ್ತು ಸುಸ್ಥಿರತೆಯನ್ನು ಯಶಸ್ವಿಯಾಗಿ ರೂಪಿಸಿದೆ’ ಎಂದಿದ್ದಾರೆ.
34
Image Credit : Gemini
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ.
44
Image Credit : Gemini
ಇಸ್ರೇಲ್ ಮೇಲೆ ಇರಾನ್ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ 100 ಕ್ಷಿಪಣಿ ಬಳಸಿ ಭಾರಿ ದಾಳಿ ನಡೆಸಿದೆ. ಈ ವೇಳೆ ಇಸ್ರೇಲ್‌ನ 5 ಜನರು ಸಾವನ್ನಪ್ಪಿದ್ದು. ಡಜನ್‌ಗಟ್ಟಲೆ ಜನರಿಗೆ ಗಾಯಗಳಾಗಿವೆ.
Latest Videos