ಟ್ರಂಪ್, ಮೆಲೇನಿಯಾ ಜೊತೆ ಭಾರತಕ್ಕೆ ಬರುವ ಈ ಮಹಿಳೆ ಯಾರು?

First Published 22, Feb 2020, 2:33 PM

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ಎರಡು ದಿನಗಳ ಪ್ರವಾಸ ನಿಮಿತ್ತ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ ಜೊತೆ ಅವರ ಪತ್ನಿ ಮೆಲಾನಿಯಾ ಹಾಗೂ ಮಗಳು ಇವಾಂಕಾ, ಅಳಿಯ ಜೆರೆಡ್ ಕೂಡಾ ಬರುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಟ್ರಂಪ್ ತಮ್ಮೊಂದಿಗೆ 12 ಮಂದಿಯ ಪ್ರತಿನಿಧಿ ಮಂಡಲವನ್ನೂ ಕರೆ ತರುತ್ತಿದ್ದಾರೆ. ಇವರಲ್ಲಿ ಅಮೆರಿಕಾ ರಾಯಭಾರಿ ಕೆನೆಥ್ ಜಸ್ಟರ್, ವಾಣಿಜ್ಯ ವಿಭಾಗದ ಸಚಿವ ವಿಲ್ಬರ್ ರಾಸ್, ಇಂಧನ ಇಲಾಖೆ ಸಚಿವ ಡ್ಯಾನ್ ಬ್ರಾಯ್ಲೆಟ್ ಹಾಗೂ ಅಧ್ಯಕ್ಷರ ಸಹಾಯಕ ಮಿಕ್ ಮುಲ್ವೇನಿ ಕೂಡಾ ಆಗಮಿಸಲಿದ್ದಾರೆ. ಇವರೆಲ್ಲರನ್ನು ಹೊರತುಪಡಿಸಿ ಭಾರತಕ್ಕೆ ಬರಲಿರುವ ಅತಿಥಿಗಳ ಪಟ್ಟಿಯಲ್ಲಿ ಮತ್ತೊಬ್ಬ ವಿಶೇಷ ವ್ಯಕ್ತಿ ಹೆಸರಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಭಾರತದೊಂದಿಗೆ ಇವರಿಗಿರುವ ವಿಶೇಷ ಸಂಬಂಧವೇನು? ಇಲ್ಲಿದೆ ವಿವರ

ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಆಗಮಿಸುತ್ತಿರುವ ಆ ವಿಶೇಷ ವ್ಯಕ್ತಿ, ರೀತಾ ಬರ್ನ್ವಾಲ್. ಇವರು ಮೂಲತಃ ಉತ್ತರ ಪ್ರದೇಶದ ಬಸ್ತಿಯೊಂದರ ಬಹಾದುರ್ಪುರ್ ಹಳ್ಳಿಯವರು.

ರೀತಾ ಭಾರತಕ್ಕೆ ಆಗಮಿಸುತ್ತಿರುವ ವಿಚಾರ ಹಳ್ಳಿ ಜನರಿಗೆ ತಿಳಿಯುತ್ತಿದ್ದಂತೆ, ಸಂಭ್ರಮದ ವಾತಾವರಣ ಮನೆ ಮಾಡಿದೆ. ಅವರನ್ನು ಭೇಟಿಯಾಗಲು ಹಳ್ಳಿ ಜನತೆ ತುದಿಗಾಲಲಲ್ಲಿ ಕಾದು ನಿಂತಿದ್ದಾರೆ.

ಇವರು ಜನಿಸಿದ್ದು ಬಹಾದುರ್ಪುರದಲ್ಲಿ. ಇದಾದ ಕೆಲವೇ ವರ್ಷಗಳಲ್ಲಿ ಅವರು ತನ್ನ ತಂದೆ ತಾಯಿಯೊಡನೆ ಅಮೆರಿಕಾಗೆ ತೆರಳಿದರು. ಬಳಿಕ ಅಲ್ಲಿನ ನಾಗರಿಕತೆ ಪಡೆದರು.

ರೀತಾ ಕುಟುಂಬಸ್ಥರು ಅಮೆರಿಕಾ ರಾಯಭಾರಿ ಕಚೇರಿ ಸಂಪರ್ಕಿಸಿ, ಅವರನ್ನು ಭೇಟಿಯಾಗುವ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅನುಮತಿ ಸಿಕ್ಕರೆ ಇವರೆಲ್ಲಾ ದೆಹಲಿಗೆ ತೆರಳಿ ರೀತಾರನ್ನು ಭೇಟಿಯಾಗಲಿದ್ದಾರೆ. ಇನ್ನು ರೀತಾ 10 ವರ್ಷ ಹಿಂದಷ್ಟೇ ಬಹಾದುರ್ಪುಗೆ ಬಂದಿದ್ದರು.

ರೀತಾ ತಂದೆ ಕೃಷ್ಣ ಬರನ್ವಾಲ್ ಹಲವಾರು ವರ್ಷದ ಹಿಂದೆ ಅಮೆರಿಕಾಗೆ ತೆರಳಿದ್ದರು. ಬಳಿಕ ಅಲ್ಲೇ ನೆಲೆಸಿದರು. ರೀತಾ MIT ಯಿಂದ ಆಹಾರ ವಿಜ್ಞಾನ ಹಾಗೂ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.

ಜುಲೈ 2019ರಲ್ಲಿ ಪರಮಾಣು ವಿದ್ಯುತ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದರು. ಇವರ ಕುಟುಂಬ ಈಗಲೂ ಉತ್ತರ ಪ್ರದೇಶದ ಬಹಾದುರ್ಪುರ್ ಹಳ್ಳಿಯಲ್ಲಿ ನೆಲೆಸುತ್ತಿದೆ.

loader