- Home
- News
- India News
- Meta Notice: ಟೆಲಿಗ್ರಾಂ ಬಳಿಕ ಇನ್‌ಸ್ಟಾಗ್ರಾಂ ನಿಷೇಧಕ್ಕೆ ಮುಂದಾಯ್ತಾ ಸರ್ಕಾರ, ಮೆಟಾಗೆ ಖಡಕ್ ನೋಟಿಸ್ ಜಾರಿ!
Meta Notice: ಟೆಲಿಗ್ರಾಂ ಬಳಿಕ ಇನ್‌ಸ್ಟಾಗ್ರಾಂ ನಿಷೇಧಕ್ಕೆ ಮುಂದಾಯ್ತಾ ಸರ್ಕಾರ, ಮೆಟಾಗೆ ಖಡಕ್ ನೋಟಿಸ್ ಜಾರಿ!
Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್ ಅನ್ನು ತೆಗೆದುಹಾಕಲು MeitY ಆದೇಶಿಸಿದೆ.

Child Sexual Abuse Ads: Government Orders Immediate Action
ಇನ್‌ಸ್ಟಾಗ್ರಾಂನ(Instagram)ಲ್ಲಿ ಹಣ ಪಾವತಿಸಿದ ಜಾಹೀರಾತುಗಳು(Paid advertisements ) ಮಕ್ಕಳ ಲೈಂಗಿಕ ಶೋಷಣೆಯ ವಿಷಯವನ್ನು ಹೆಚ್ಚು (CSEAM) ಪ್ರಚಾರ ಮಾಡುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(Meta)ಗೆ ನೋಟಿಸ್ ನೀಡಿದೆ. ಇಂತಹ ಜಾಹೀರಾತುಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಶನಿವಾರ ಸಂಜೆ ನೋಟಿಸ್ ಕಳುಹಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈಗಾಗಲೇ ತೆಗೆದುಕೊಂಡಿರುವ ಕ್ರಮಗಳು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಯೋಜಿಸಿರುವ ಸುರಕ್ಷತಾ ಕ್ರಮಗಳ ಬಗ್ಗೆ ಏಳು ದಿನಗಳಲ್ಲಿ ವಿವರವಾದ ವಿವರಣೆ ನೀಡುವಂತೆ ಸಚಿವಾಲಯವು ಮೆಟಾಗೆ ಸೂಚಿಸಿದೆ.
Minister Ordered Action After Reports Surfaced
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್(Union IT Minister Ashwini Vaishnaw) ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಲೈ*ಗಿಕವಾಗಿ ಅಸಭ್ಯ, ಹಾನಿಕಾರಕ ಕಾಂಟೆಂಟ್ ನಿಷೇಧಿಸುವ ಕಂಪನಿಯ ಸ್ವಂತ ನಿಯಮಗಳಿದ್ದರೂ, ಇಂತಹ ಜಾಹೀರಾತುಗಳಿಗೆ ಹೇಗೆ ಅನುಮೋದನೆ ನೀಡಲಾಯಿತು? ಇಂಥ ಜಾಹೀರಾತುಗಳು, ಅಶ್ಲೀಲ ಕಾಂಟೆಂಟ್ ವಿಡಿಯೋಗಳು ಪರಿಶೀಲನೆಯಿಂದ ಹೇಗೆ ತಪ್ಪಿಸಿಕೊಂಡವು? ಎಂದು ಸರ್ಕಾರ ಪ್ರಶ್ನಿಸಿದೆ. ಅಲ್ಲದೇ ತನ್ನ ಮಾಡರೇಶನ್ ವ್ಯವಸ್ಥೆಯನ್ನು ಬಲಪಡಿಸಲು ಮೆಟಾ ಯಾವ ಬದಲಾವಣೆಗಳನ್ನು ಮಾಡಲು ಉದ್ದೇಶಿಸಿದೆ ಎಂಬುದರ ಕುರಿತು ವಿವರ ಕೇಳಿದೆ.
ಬಿಬಿಸಿ ತನಿಖಾ ವರದಿಯಲ್ಲೇನಿದೆ?
ಮೆಟಾದ ಶಿಫಾರಸು ವ್ಯವಸ್ಥೆಗಳು(Meta's recommendation systems) ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತುಗಳನ್ನು ಒಳಗೊಂಡಿರುವ ವೀಡಿಯೊಗಳನ್ನು ಪ್ರಚಾರ ಮಾಡಿವೆ ಎಂದು ಬಿಬಿಸಿ(BBC) ತನಿಖೆಯು ಆರೋಪಿಸಿದ ನಂತರ ಸರ್ಕಾರದ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಂತಹ ಅಕ್ರಮ ವಿಷಯಕ್ಕೆ ಸಂಬಂಧಿಸಿದ ಪದಗಳನ್ನು ಹೊಂದಿರುವ ಪೇಯ್ಡ್ ಅಡ್ವರ್ಟೈಸ್‌ಮೆಂಟ್‌ಗಳನ್ನ ಫೇಸ್‌ಬುಕ್(Facebook) ಮತ್ತು ಇನ್‌ಸ್ಟಾಗ್ರಾಂ(Instagram)ನಲ್ಲಿ ಕಾಣಿಸಿಕೊಂಡಿವೆ ಎಂದು ವರದಿಯು ಹೇಳಿದೆ.
ವರದಿಗಳ ಪ್ರಕಾರ, ಕೆಲವು ಇನ್‌ಸ್ಟಾಗ್ರಾಂ ಜಾಹೀರಾತುಗಳು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಹುಡುಕಾಟ ಪದಗಳನ್ನು ಒಳಗೊಂಡಿದ್ದವು ಮತ್ತು ಅಂತಹ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದ ಟೆಲಿಗ್ರಾಂ ಚಾನೆಲ್‌ಗಳಿಗೆ ಬಳಕೆದಾರರನ್ನು ನಿರ್ದೇಶಿಸುತ್ತಿದ್ದವು.
Government Says Paid Ads Carry Greater Responsibility
ಈ ಆರೋಪಗಳು ನಿಜವೆಂದು ಕಂಡುಬಂದಲ್ಲಿ, ಜಾಹೀರಾತುಗಳನ್ನು ಮೂರನೇ ವ್ಯಕ್ತಿಗಳು ರಚಿಸಿದ್ದಾರೆ ಎಂದು ವಾದಿಸಿ ಮೆಟಾ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ
ಪೇಯ್ಡ್ ಜಾಹೀರಾತುಗಳು ಪ್ಲಾಟ್‌ಫಾರ್ಮ್‌ನ ಜಾಹೀರಾತು ವ್ಯವಸ್ಥೆಯ ಮೂಲಕ ಅನುಮೋದನೆಗೊಳ್ಳುತ್ತವೆ(approved) ಮತ್ತು ಕಂಪನಿಗೆ ಆದಾಯವನ್ನು ಸಹ ಗಳಿಸುತ್ತವೆ. ಅಕ್ರಮ ಜಾಹೀರಾತುಗಳು ಕಾಣಿಸಿಕೊಳ್ಳಲು ಅನುಮತಿಸಿದರೆ, ಭಾರತದ ಮಾಹಿತಿ ತಂತ್ರಜ್ಞಾನ ಕಾನೂನುಗಳ ಅಡಿಯಲ್ಲಿ ಪ್ಲಾಟ್‌ಫಾರ್ಮ್ ಹೊಣೆಗಾರಿಕೆಯನ್ನು ಎದುರಿಸಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಶೂನ್ಯ-ಸಹಿಷ್ಣುತೆ ನೀತಿ
ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಕ್ಕೆ ಸಂಬಂಧಿಸಿದಂತೆ ಶೂನ್ಯ-ಸಹಿಷ್ಣುತೆ ನೀತಿಯನ್ನು ಅನುಸರಿಸುವುದಾಗಿ ಸರ್ಕಾರ ಪದೇ ಪದೇ ಹೇಳಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅಂತಹ ವಿಷಯವನ್ನು ತ್ವರಿತವಾಗಿ ಪತ್ತೆಹಚ್ಚಿ, ತೆಗೆದುಹಾಕಬೇಕು ಮತ್ತು ವರದಿ ಮಾಡಬೇಕು ಎಂದು ನಿರೀಕ್ಷಿಸಲಾಗಿದೆ.
Second Notice to Meta This Week
ಈ ವಾರದಲ್ಲೇ ಕೇಂದ್ರ ಸರ್ಕಾರ ಮೆಟಾಗೆ ನೀಡುತ್ತಿರುವ ಎರಡನೇ ಪ್ರಮುಖ ನೋಟಿಸ್ ಇದಾಗಿದೆ.
ಈ ಹಿಂದೆ, ವಾಟ್ಸಾಪ್‌ನ ಉದ್ದೇಶಿತ ಯೂಸರ್‌ನೇಮ್ ಫೀಚರ್ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಇದು ಫಿಶಿಂಗ್ ದಾಳಿಗಳು, ವಂಚನೆ, ಆನ್‌ಲೈನ್ ವಂಚನೆ ಮತ್ತು 'ಡಿಜಿಟಲ್ ಅರೆಸ್ಟ್' ಹಗರಣಗಳನ್ನು ಹೆಚ್ಚಿಸಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಸರ್ಕಾರದೊಂದಿಗೆ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಈ ಫೀಚರ್ ಬಿಡುಗಡೆಯನ್ನು ತಡೆಹಿಡಿಯುವಂತೆ ಕೇಂದ್ರವು ಮೆಟಾಗೆ ಸೂಚಿಸಿತ್ತು.
ಸದ್ಯಕ್ಕೆ ಯೂಸರ್‌ನೇಮ್‌ಗಳ ಬಿಡುಗಡೆಯನ್ನು ಮುಂದೂಡಲು ವಾಟ್ಸಾಪ್ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ನೋಟಿಸ್ ಸ್ವೀಕರಿಸಿದ ನಂತರ ಮೆಟಾ ತಂಡವು ಐಟಿ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದೆ.
ಬಳಕೆದಾರರ ಸುರಕ್ಷತೆ, ಆನ್‌ಲೈನ್ ಭದ್ರತೆ ಮತ್ತು ಭಾರತೀಯ ನಿಯಮಗಳ ಅನುಸರಿಸುವ ಬಗ್ಗೆ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಸರ್ಕಾರದ ಇತ್ತೀಚಿನ ಕ್ರಮಗಳು ಹೆಚ್ಚಿದ ಪರಿಶೀಲನೆಯನ್ನು ಸೂಚಿಸುತ್ತವೆ.
(ಏಜೆನ್ಸಿ ಇನ್‌ಪುಟ್‌ಗಳೊಂದಿಗೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

