- Home
- News
- India News
- ಭಾರತ್ ಮಾತಾ ಕಿ ಜೈ ಎಂದ ಬಿಗ್ ಬಿ ಅಮಿತಾಬ್ ಬಚ್ಚನ್; ಬಾಲಿವುಡ್ ಸೆಲೆಬ್ರಿಟಿಗಳ ರಿಯಾಕ್ಷನ್ ಇಲ್ಲಿದೆ!
ಭಾರತ್ ಮಾತಾ ಕಿ ಜೈ ಎಂದ ಬಿಗ್ ಬಿ ಅಮಿತಾಬ್ ಬಚ್ಚನ್; ಬಾಲಿವುಡ್ ಸೆಲೆಬ್ರಿಟಿಗಳ ರಿಯಾಕ್ಷನ್ ಇಲ್ಲಿದೆ!
'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವ ಕುರಿತು ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ವಿವಾದದ ಕುರಿತು ಹಲವಾರು ಗಣ್ಯರು ಹಲವು ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೆಯೇ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಮಿತಾಭ್ ಬಚ್ಚನ್ ಕಂಗನಾ ರನೌತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾರತ್ ಹೆಸರು ಬದಲಾವಣೆಗೆ ಪ್ರತಿಕ್ರಿಯಿಸಿದ್ದಾರೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಇಲ್ಲಿವೆ ನೋಡಿ.

ಸೆಪ್ಟೆಂಬರ್ 18-22 ರವರೆಗೆ ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 'ಇಂಡಿಯಾ'ವನ್ನು ಭಾರತ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಯಿದೆ. ಹೀಗಾಗಿ ಭಾರತ್ ಆಗಿ ಹೆಸರು ಬದಲಾಯಿಸುವುದಕ್ಕೆ ದೇಶಾದ್ಯಂತ ಜನರಿಂದ ಸೆಲೆಬ್ರಿಟಿಗಳವರೆಗೆ ಸ್ವಾಗತಿಸಿದ್ದಾರೆ. ಈ ಬಗ್ಗೆ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಭಾರತೀಯ ಧ್ವಜದ ಎಮೋಜಿಯೊಂದಿಗೆ 'ಭಾರತ್ ಮಾತಾ ಜೀ ಜೈ'ಎಂದು ಟ್ವೀಟರ್ ಮೂಲಕ ಬೆಂಬಲ ಸೂಚಿಸಿದ್ದಾರೆ.
ರಾಷ್ಟ್ರೀಯವಾದಿ, ನೇರ ನೇರಾ ಮಾತುಗಳಿಂದ ಭಾರೀ ಸುದ್ದಿ ಮಾಡುವ ಕಂಗಾನ ರಣಾವತ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ ನೋಡಿದರೆ ಕಂಗನಾ ಈ ವಿಚಾರದ ಮಾತಾಡಿರೋದು ಇದೇ ಮೊದಲು ಅಲ್ಲ, ಈ ಹಿಂದೆ ಇಂಡಿಯಾವನ್ನು ತೆಗೆದು ಭಾರತ ಎಂದು ನಾಮಕರಣ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಆಗ ಅದನ್ನು ಕೆಲವರು ಟೀಕಿಸಿದ್ದರು. ಇದೀಗ 2021ರಲ್ಲಿ ಮಾಡಿದ್ದ ಹಳೆಯ ಪೋಸ್ಟ್ ಬಳಸಿಕೊಂಡು ಮತ್ತೊಮ್ಮೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾಳೆ.
ಕಂಗಾನ ಹೇಳಿದ್ದೇನು?
‘India' ಅನ್ನೋ ಪದಕ್ಕೆ ಅರ್ಥಾನೇ ಇಲ್ಲ. ನಾವು 'ಭಾರತೀಯರು’ ಹೀಗೆ ಕರೆದುಕೊಳ್ಳುವುದರಲ್ಲೆ ಹೆಮ್ಮೆ, ಅರ್ಥವಿದೆ ಎಂದಿದ್ದಾರೆ. ಇದೀಗ ಇಂಡಿಯಾದಿಂದ ಭಾರತವಾಗಿ ಹೆಸರು ಬದಲಾಯಿಸಲು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
'India' ಹೆಸರಿನಲ್ಲಿ ಪ್ರೀತಿಸೋದಕ್ಕೆ ಏನಿದೆ ಎಂದು ಪ್ರಶ್ನಿಸಿರುವ ಕಂಗನಾ, ಮೊದಲನೆದಾಗಿ ಬ್ರಿಟಿಷರಿಗೆ 'ಸಿಂಧು' ಎನ್ನುವ ಪದದ ಉಚ್ಚಾರಣೆಯೇ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಬ್ರಿಟಿಷರು ಸಿಂಧು ಬದಲಿಗೆ 'ಇಂಡಸ್' ಎಂದರು. ಬಳಿಕ 'ಹಿಂದೋಸ್' ಎಂದರು. ಅದೇ ರೂಢಿಯಾಗಿ ಇಂಡಿಯಾ ಆಗಿದೆ. ಆದರೆ ನಮ್ಮ ದೇಶದ ಇತಿಹಾಸ ನೋಡಿದಾಗ, ಕುರುಕ್ಷೇತ್ರದಲ್ಲಿ ಭಾಗವಹಿಸಿದ ಎಲ್ಲ ರಾಜ್ಯಗಳು ಭಾರತ ಎಂಬ ಖಂಡದ ಅಡಿಯಲ್ಲೇ ಬಂದವು. ಆಗ ಇಂಡಿಯಾ ಎಲ್ಲಿತ್ತು? ಭಾರತ್ ಹೆಸರೇ ಅರ್ಥಪೂರ್ಣವಾಗಿದೆ "ಇಂಡಿಯಾ'ಅಂತ ಕರೆಯುವುದು ಗುಲಾಮಗಿರಿಯ ಸಂಕೇತ. ನಾವು ಗುಲಾಮರಲ್ಲ, ಭಾರತೀಯರು ಎಂದಿದ್ದಾರೆ.
ನಾವು ಭಾರತೀಯರು
ಖ್ಯಾತ ಬಾಲಿವುಡ್ ನಟರಾದ ಜಾಕಿ ಶ್ರಾಫ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ದೇಶವನ್ನು ಹಿಂದಿನಿಂದಲೂ "ಭಾರತ್' ಎಂದು ಕರೆಯಲಾಗುತ್ತದೆ ಅಲ್ಲವೇ? ನೋಡಿ ನನ್ನ ಹೆಸರು Jackie. ಕೆಲವರು Jaaki ಎಂದು ಇನ್ನು ಕೆಲವು Jocky ಎಂದು ಕರೆಯುತ್ತಾರೆ. ಜನರು ನನ್ನ ಹೆಸರನ್ನು ಬದಲಾಯಿಸುತ್ತಲೇ ಇರುತ್ತಾರೆ. ಆದರೆ ನಾನು ಬದಲಾಗುತ್ತೇನಾ? ಹೆಸರು ಬದಲಾಯಿಸಬಹುದು, ನನ್ನನ್ನು ಬದಲಾಯಿಸಲು ಆಗುತ್ತಾ? ನೀವು ದೇಶದ ಹೆಸರನ್ನು ಬದಲಾಯಿಸುತ್ತಲೇ ಇರಿ ಆದರೆ ನಾವು ಭಾರತೀಯರು ಎಂಬುದನ್ನು ಮರೆಯಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇಂಡಿಯಾ-ಭಾರತ ವಿವಾದ ಆಗಿದ್ದು ಹೇಗೆ?
ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕರೆಯಲಾಗಿದೆ. ಈ ಆಮಂತ್ರಣ ಪತ್ರಿಕೆಯ ಫೋಟೊಗಳನ್ನು ಬಳಸಿಕೊಂಡು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂಡಿಯಾ ಎಂದು ಹೇಳುವುದನ್ನು ಇನ್ನು ಬಿಡಿ, ಭಾರತ ಎಂದು ಹೇಳಿ ಎಂದು ಮನವಿ ಮಾಡಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿರೋದು ಚರ್ಚೆಗೆ ಇಂಬು ಕೊಟ್ಟಂತಾಗಿದೆ. ಸದ್ಯ ಇದೀಗ ನಡೆಯುತ್ತಿರುವ ಬಿಸಿಬಿಸಿ ಚರ್ಚೆಯಲ್ಲಿ ದೇಶಾದ್ಯಂತ ವಿರೋಧಕ್ಕಿಂತ ಹೆಚ್ಚಾಗಿ ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ