MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • India Pride: ಕಳೆದ 10 ದಿನಗಳಲ್ಲಿ ವಿಶ್ವವನ್ನೇ ನಿಬ್ಬೆರಗಾಗಿಸಿದ ಭಾರತದ ಸಾಧನೆಗಳು, ನೀವು ಹೆಮ್ಮೆಪಡ್ತೀರಿ!

India Pride: ಕಳೆದ 10 ದಿನಗಳಲ್ಲಿ ವಿಶ್ವವನ್ನೇ ನಿಬ್ಬೆರಗಾಗಿಸಿದ ಭಾರತದ ಸಾಧನೆಗಳು, ನೀವು ಹೆಮ್ಮೆಪಡ್ತೀರಿ!

ಕಳೆದ 10 ದಿನಗಳಲ್ಲಿ ಭಾರತವು ಬಾಹ್ಯಾಕಾಶ, ರೈಲ್ವೆ, ಆರ್ಥಿಕತೆ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವ ಸಾಧನೆಗಳನ್ನು ಮಾಡಿದೆ. ISRO ಉಪಗ್ರಹ ಉಡಾವಣೆ, ಬುಲೆಟ್ ರೈಲು ಕಾಮಗಾರಿ, ಬಡತನ ಇಳಿಕೆ ಮತ್ತು ಜಿಯೋ ಐಪಿಒ ದಾಖಲೆಗಳು ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತವೆ.

3 Min read
Author : Sumanth SN
Published : Nov 04 2026, 01:24 PM IST
Share this Photo Gallery
  • FB
  • TW
  • Linkdin
  • Whatsapp
110
ವಿಶ್ವದ ಗಮನ ಸೆಳೆದ ಭಾರತದ ಸಾಧನೆಗಳು
Image Credit : ANI

ವಿಶ್ವದ ಗಮನ ಸೆಳೆದ ಭಾರತದ ಸಾಧನೆಗಳು

ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಸ್ವರೂಪದ ಟೀಕೆಗಳನ್ನು ನಡೆಸುತ್ತಿದೆ. ಪ್ರಮುಖವಾಗಿ ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಆಡಳಿತಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಟೀಕೆಗಳನ್ನು ಮಾಡುತ್ತಿವೆ. ಆದರೆ ಕಳೆದ 10 ದಿನಗಳಲ್ಲಿ ಭಾರತದಲ್ಲಿ ನಡೆದ ಕೆಲವು ಸಾಧನೆಗಳು, ವಿಶ್ವದ ಗಮನ ಸೆಳೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿ ತೀವ್ರಗತಿ
Image Credit : IndianRailways

ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿ ತೀವ್ರಗತಿ

ಭಾರತ ಹೈಸ್ಪೀಡ್ ಬುಲೆಟ್ ರೈಲು ಯುಗಕ್ಕೆ ಅಧಿಕೃತ ಹೆಜ್ಜೆ ಇಡುತ್ತಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಮಾದರಿಗಳು ಸಿದ್ಧಗೊಳ್ಳುತ್ತಿದೆ. ಭಾರತ್ ಆರ್ಥ್ ಮೂವರ್ಸ್ ಲಿಮಿಟೆಡ್ ಘಟಕದಲ್ಲಿ ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು ಸಿದ್ಧಗೊಳ್ಳುತ್ತಿದೆ. ಇದೇ ದೇಶದ ರೈಲ್ವೆ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ. ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಯೋಜನೆ ಶೇಖಡಾ 80ರಷ್ಟು ಕಾರ್ಯಗಳು ಪೂರ್ಣಗೊಂಡಿದ್ದು, ಸೂರತ್ ಮತ್ತು ಬಿಲಿಮೊರಾ ನಡುವೆ 50 ಕಿಮೀ ಪ್ರಾಥಮಿಕ ವೇಗದಲ್ಲಿ 2027ರ ಆಗಸ್ಟ್ 15ರ ವೇಳೆಗೆ ಮೊದಲ ಬುಲೆಟ್ ರೈಲು ಪ್ರಾಯೋಗಿಕವಾಗಿ ಓಡಿಸುವ ಗುರಿ ಹೊಂದಿದೆ.

Related Articles

Related image1
Mandya: ಶಿಂಷಾ ಬಲ-ಎಡದಂಡೆ ನಾಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, S.M ಕೃಷ್ಣರ ಹೆಸರು ನಾಮಕರಣ
Related image2
PM Modi: ನ.13ಕ್ಕೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಜಗತ್ತಿನ ಮೊದಲ ಅತ್ಯಾಧುನಿಕ ತಾರಾಲಯ ಉದ್ಘಾಟನೆ
310
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲು
Image Credit : PIB

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್ ರೈಲು ಅಧಿಕೃತವಾಗಿ ಚಾಲನೆಗೊಂಡಿದೆ. ಈ ರೈಲು ಒಟ್ಟು 16 ಆಧುನಿಕ ಬೋಗಿಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಮತ್ತು ಲೋಕೋ ಪೈಲಟ್‌ಗಳಿಗೆ ಸುಧಾರಿತ ಸೌಕರ್ಯಗಳನ್ನು ನೀಡಲಾಗಿದೆ. ಮಧ್ಯ ಮತ್ತು ಮೇಲಿನ ಬರ್ತ್‌ಗಳಿಗೆ ಸುಲಭವಾಗಿ ಹತ್ತಲು ಹೊಸ ಮಾದರಿಯ ಮೆಟ್ಟಿಲು ವಿನ್ಯಾಸಗೊಳಿಸಲಾಗಿದೆ.

410
ISRO NVS-03 ಉಡಾವಣೆ
Image Credit : Gemini AI

ISRO NVS-03 ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಹೆಮ್ಮೆ ತಂದುಕೊಟ್ಟಿದೆ. ಜಾಗತಿಕ ಮತ್ತು ಭಾರತದ ಜಿಪಿಎಸ್ ಕ್ಷೇತ್ರದಲ್ಲಿ ಭಾರತದ ಪ್ರಾದೇಶಿಕ ದಿಕ್ಸೂಚಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಮುಂದಿನ ಪೀಳಿಗೆಯ ಎನ್‌ವಿಎಸ್-01 ಸರಣಿಯ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದರಲ್ಲಿ ಭಾರತದಲ್ಲೇ ತಯಾರಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಬಳಸಲಾಗಿದೆ. ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಸ್ಪಷ್ಟ ಲೊಕೇಶನ್ ನೀಡಲು ಹೊಸ ಎಲ್‌5 ಫ್ರೀಕ್ವೆನ್ಸಿ ಸಿಗ್ನಲ್‌ಗಳನ್ನು ಜಿಪಿಎಸ್ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದೆ. ಇಸ್ರೋ ತನ್ನ ಉಪಗ್ರಹ ತಂತ್ರಜ್ಞಾನ ಮತ್ತು ನಾಕ್ ಮೂಲಕ ಭವಿಷ್ಯದಲ್ಲಿ ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಮತ್ತಷ್ಟು ಪ್ರಮುಖ ಪಾತ್ರ ವಹಿಸಲಿದೆ.

510
ಇರಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Image Credit : Official Twitter Account of the High Commission of India, Islamabad

ಇರಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಅರೇಬಿಯನ್ ಸಮುದ್ರದ ಸೋಮಾಲಿಯಾ ಕರಾವಳಿ ಭಾಗದಲ್ಲಿ ಅಪಹರಣಕ್ಕೊಳಗಾಗಿದ್ದ ಇರಾನ್‌ನ ಅಜಿನಿ ಎಂಬ ಮೀನುಗಾರಿಕಾ ಧೋಣಿ ಮತ್ತು ಅದರಲ್ಲಿದ್ದ 20 ಇರಾನಿ ಮೀನುಗಾರರನ್ನು ಭಾರತೀಯ ನೌಕಾಪಡೆಯ 48 ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ. ಇದು ಮಾತ್ರವಲ್ಲದೇ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಕಾಯುವಲ್ಲಿ ಭಾರತೀಯ ನೌಕಾಪಡೆಯು ಇತ್ತೀಚೆಗೆ ಇಂತಹ ಹಲವು ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದೆ.

610
ದಾಖಲೆಯ ಪ್ರಮಾಣದಲ್ಲಿ ತೀವ್ರ ಬಡತನ ಇಳಿಕೆ
Image Credit : X

ದಾಖಲೆಯ ಪ್ರಮಾಣದಲ್ಲಿ ತೀವ್ರ ಬಡತನ ಇಳಿಕೆ

ವಿಶ್ವ ಬ್ಯಾಂಕ್‌ನ ಅಕ್ಟೋಬರ್ 2026ರ ವರದಿಯ ಅನ್ವಯ, ಪಾವರ್ಟಿ ಅಂಡ್ ಈಕ್ವಿಟಿ ಬ್ರೀಫ್ ವರದಿಯ ಪ್ರಕಾರ ಭಾರತ ಬಡತನ ನಿವಾರಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. 2011ರಲ್ಲಿ ಶೇಕಡಾ 21.1 ರಷ್ಟಿದ್ದ ತೀವ್ರ ಬಡತನದ ಪ್ರಮಾಣ 2023ರ ವೇಳೆಗೆ ಶೇಕಡಾ 2.6ಕ್ಕೆ ಇಳಿಕೆಯಾಗಿದೆ. ಕಳೆದ 12 ವರ್ಷಗಳಲ್ಲಿ ಸುಮಾರು 49.6 ಕೋಟಿ ಜನರು ತೀವ್ರ ಬಡತನದಿಂದ ಹೊರ ಬಂದಿದ್ದಾರೆ. ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ, ಭಾರತದಲ್ಲಿ ಬಡತನದ ಪ್ರಮಾಣವು 2026ರ ವೇಳೆಗೆ ಶೇಕಡಾ 14.2ಕ್ಕೆ ಹಾಗೂ 2028ರ ವೇಳೆಗೆ ಶೇಕಡಾ 12.1ಕ್ಕೆ ಮತ್ತಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

710
ಫ್ರೆಂಚ್ ಫ್ರೈಸ್ ಸಂಸ್ಕರಣಾ ಘಟಕ
Image Credit : @narendramodi

ಫ್ರೆಂಚ್ ಫ್ರೈಸ್ ಸಂಸ್ಕರಣಾ ಘಟಕ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಬನಸ್ಕಾಂಥಾ ಜಿಲ್ಲೆಯ ಸನಾದಾರ್‌ನಲ್ಲಿರುವ ಬನಾಸ್‌ ಡೈಲಿಯ ಫ್ರೆಂಚ್ ಫ್ರೈಸ್ ಸಂಸ್ಕರಣಾ ಘಟಕದ ವಿಸ್ತರಣೆಯನ್ನು ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದರು. ಈ ಘಟಕ ಗಂಟೆಗೆ ಸುಮಾರು 2 ಟನ್ ನಿಂದ 5 ಟನ್ ಫ್ರೆಂಚ್ ಫ್ರೈಸ್ ಸಂಸ್ಕರಣೆ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 51.65 ಕೋಟಿ ವೆಚ್ಚದಲ್ಲಿ ಈ ಘಟಕ ನಿರ್ಮಾಣ ಮಾಡಲಾಗಿದ್ದು, ಭಾರತದಲ್ಲಿ ತಯಾರಿಸಿದ್ದು ಜಗತ್ತಿಗೆ ಸರ್ವ್ ಎಂಬ ಸಂದೇಶವನ್ನು ನೀಡಿದ್ದು, ಬನಸ್ಕಾಂಥಾದ ಆಲೂಗಡ್ಡೆ ಇಂದು ಜಗತ್ತಿನಲ್ಲಿ ಪ್ರಸಿದ್ಧವಾಗಲಿದೆ ಎಂದು ಮೋದಿ ಹೇಳಿದ್ದಾರೆ.

810
ವಾರಣಾಸಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಉದ್ಯಮ
Image Credit : @narendramodi

ವಾರಣಾಸಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಉದ್ಯಮ

ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಅರ್ವಿಂದ್ ಲಿಮಿಟೆಡ್ ಹೊಸ ಗಾರ್ಮೆಂಟ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಈ ಘಟಕವೂ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಲಿದೆ. 5.5 ಎಕರೆ ಪ್ರದೇಶದಲ್ಲಿ ಸುಮಾರು 150 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, ಇಲ್ಲಿ 1000 ಮಂದಿಗೆ ಉದ್ಯೋಗ ಸಿಗಲಿದ್ದು, ಬಹುತೇಕ ಮಹಿಳೆಯರಿಗೆ ಇಲ್ಲಿ ಕೆಲಸ ನೀಡಲಾಗುತ್ತದೆ. ವಾರಣಾಸಿಯಲ್ಲಿ ತಯಾರಾಗುವ ಗಾರ್ಮೆಂಟ್‌ಗಳು ಜಾಗತಿಕ ಮಾರುಕಟ್ಟೆಗಳಿಗೆ ರಫ್ತಾಗಲಿದೆ.

One of the best aspects of Arvind Limited’s garment manufacturing facility in Varanasi is the boost it will give to women empowerment! https://t.co/nNSAuka9ne

— Narendra Modi (@narendramodi) October 25, 2026

910
ದಾಖಲೆ ನಿರ್ಮಿಸಿದ ಜಿಯೋ ಪ್ಲಾಟ್ ಫಾರ್ಮ್ಸ್
Image Credit : instagram

ದಾಖಲೆ ನಿರ್ಮಿಸಿದ ಜಿಯೋ ಪ್ಲಾಟ್ ಫಾರ್ಮ್ಸ್

ಜಿಯೋ ಪ್ಲಾಟ್ ಫಾರ್ಮ್ಸ್ ಐಪಿಒ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಹಲವಾರು ದಾಖಲೆಯನ್ನು ನಿರ್ಮಿಸಿದೆ. ಭಾರತ ಅತಿದೊಡ್ಡ ಐಪಿಒ ಎಂದು ದಾಖಲೆ ಬರೆದಿರುವ ಜಿಯೋ, ಈ ಹಿಂದಿನ ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ದಾಖಲೆಯನ್ನು ಮುರಿದಿದೆ. ಜಿಯೋ ಐಪಿಒ ಅಂತಿಮ ಗಾತ್ರ ಸುಮಾರು 30,188 ಕೋಟಿ ರೂಪಾಯಿ ಇದ್ದು, ಹ್ಯುಂಡೈ ಐಪಿಒ ದರ 27,870 ಕೋಟಿಯನ್ನು ಮೀರಿಸಿದೆ. 1.3 ಕೋಟಿಗೂ ಹೆಚ್ಚು ಭಾರತೀಯರು ನಂಬಿಕೆ ಇಟ್ಟು ಅರ್ಜಿ ಸಲ್ಲಿಕೆ ಸಲ್ಲಿಸಿದ್ದು, ಇದು ದೇಶದ ಆರ್ಥಿಕ ಶಕ್ತಿ ಮತ್ತು ಹೂಡಿಕೆದಾರರ ವಿಶ್ವಾಸವನ್ನು ತೋರಿಸುತ್ತದೆ.

1010
ಏಷ್ಯಾದಲ್ಲಿಯೇ ಭಾರತದ ಮ್ಯೂಸಿಯಂಗೆ ಮೊದಲ ಸ್ಥಾನ
Image Credit : @Indianinfoguide

ಏಷ್ಯಾದಲ್ಲಿಯೇ ಭಾರತದ ಮ್ಯೂಸಿಯಂಗೆ ಮೊದಲ ಸ್ಥಾನ

ಉಳಿದಂತೆ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 2026ರಲ್ಲಿ ಭಾರತದ ದಾಖಲೆಯ 114 ಪದಕಗಳನ್ನು ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದದು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಪಟ್ನಾದ ಬಿಹಾರ ಮ್ಯೂಸಿಯಂ ವಿಶ್ವದ 100 ಅತ್ಯುತ್ತಮ ಮ್ಯೂಸಿಯಂಗಳಲ್ಲಿ 9ನೇ ಸ್ಥಾನ ಪಡೆದುಕೊಂಡು, ಏಷ್ಯಾದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಇದರೊಂದಿಗೆ ಭಾರತ ಜಗತ್ತಿನ 3ನೇ ಅತಿದೊಡ್ಡ ಆಟೋಮೊಬೈಲ್ ಉದ್ಯಮವಾಗಿದೆ. ತಮಿಳುನಾಡಿನ ವಿಒಸಿ ಪೋರ್ಟ್‌ನ ತೂತುಕುಡಿ ಇಂಟರ್‌ ನ್ಯಾಷನಲ್ ಕಂಟೈನರ್ ಟರ್ಮಿನಲ್ ಗ್ರೀನ್ ಟರ್ಮಿನಲ್ ಸ್ಥಾನಮಾನವನ್ನು ಪಡೆದುಕೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಭಾರತ ಸುದ್ದಿ
ನರೇಂದ್ರ ಮೋದಿ
 
1st ODI • NZ vs IND 2026
Rain Delay
NZNZ
185
INDIND
(10.5 ov)54/1
IND need 132 runs in 235 balls
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Tiger Case: ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!
Recommended image2
ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನೆಫ್ರೋಪ್ಲಸ್‌ ಲಾಭದಲ್ಲಿ ಭರ್ಜರಿ ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ
Recommended image3
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ತಾಯಿ-ಮಕ್ಕಳಿಗೆ ನೆರವಾದ ಟಿಟಿ! ರೈಲ್ವೆ ಅಧಿಕಾರಿಯ ಕಾರ್ಯಕ್ಕೆ ಭಾರಿ ಮೆಚ್ಚುಗೆ
Related Stories
Recommended image1
Mandya: ಶಿಂಷಾ ಬಲ-ಎಡದಂಡೆ ನಾಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, S.M ಕೃಷ್ಣರ ಹೆಸರು ನಾಮಕರಣ
Recommended image2
PM Modi: ನ.13ಕ್ಕೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಜಗತ್ತಿನ ಮೊದಲ ಅತ್ಯಾಧುನಿಕ ತಾರಾಲಯ ಉದ್ಘಾಟನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved