ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಅಮೆರಿಕ ದಾಳಿ ಸಾಧ್ಯತೆಯಿಂದ ತೀವ್ರ ಸಂಚಲನ
ತಕ್ಷಣವೇ ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಇರಾನ್ ಪ್ರವಾಸ ಮುಂದೂಡುವಂತೆ ಮನವಿ ಮಾಡಲಾಗಿದೆ. ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ಇರುವ ಕಾರಣ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.

ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ
ಜಾಗತಿಕ ಮಟ್ಟದಲ್ಲಿ ಹಲವು ದೇಶಗಳಲ್ಲಿ ಪ್ರತಿಭಟನೆಗಳು, ಕೋಲಾಹಲ ನಡೆಯುತ್ತಿದೆ. ಇದರ ಹಿಂದೆ ಅಮೆರಿಕದ ಡೀಪ್ ಸ್ಟೇಟ್ ಕೈವಾಡ ಬಹಿರಂಗವಾಗಿ ಉಳಿದಿಲ್ಲ. ಒಂದರ ಹಿಂದೆ ಮತ್ತೊಂದರಂತೆ ಕೆಲ ದೇಶಗಳಲ್ಲಿ ಪ್ರತಿಭಟನೆ ಮೂಲಕ ಸರ್ಕಾರ ಉರುಳುತ್ತಿದೆ. ಹಂಗಾಮಿ ಹಾಗೂ ಅಮೆರಿಕ ಕೈಗೊಂಬೆ ಸರ್ಕಾರಗಳು ಅಸ್ಥಿತ್ವಕ್ಕೆ ಬರುತ್ತಿದೆ. ಇದೀಗ ಇರಾನ್ ದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದೆ. ಸಾವಿನ ಸಂಖ್ಯೆ 1000 ದಾಟಿದೆ. ಇದರ ನಡುವೆ ಅಮೆರಿಕ ದಾಳಿ ಸಾಧ್ಯತೆ ದಟ್ಟವಾಗುತ್ತಿದೆ. ಹೀಗಾಗಿ ಇರಾನ್‌ನಲ್ಲಿ ಭಾರತೀಯರಿಗೆ ಮಹತ್ವದ ಮಾರ್ಗಸೂಚಿ ನೀಡಲಾಗಿದೆ.
ಇರಾನ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಪ್ರಕಟ
ಆರ್ಥಿಕ ಬಿಕ್ಕಟ್ಟಿನಿಂದಾಗಿ ಇರಾನ್‌ನಲ್ಲಿ ಆರಂಭವಾದ ಸರ್ಕಾರಿ ವಿರೋಧಿ ಪ್ರತಿಭಟನೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಜಾಗರೂಕರಾಗಿರಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ. ಇರಾನ್‌ನಲ್ಲಿರುವ ಭಾರತೀಯರು ಆದಷ್ಟು ಬೇಗ ಇರಾನ್ ತೊರೆಯಲು ಮಾರ್ಗಸೂಚಿಯಲ್ಲಿ ಹೇಳಿದೆ.
ಮುಂದಿನ ಆದೇಶದ ವರೆಗೆ ಇರಾನ್ ಪ್ರಯಾಣ ಬೇಡ
ಇರಾನ್‌ನಲ್ಲಿನ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತ ಅಮೆರಿಕ ದಾಳಿ ಸಾಧ್ಯತೆಗಳು ದಟ್ಟವಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೂ ಭಾರತೀಯರು ಇರಾನ್ ಪ್ರಯಾಣ ಮುಂದೂಡಲು ವಿದೇಶಾಂಗ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿದೆ. ಈ ಮೂಲಕ ಭಾರತೀಯರಿಗೆ ಮಹತ್ವದ ಸೂಚನೆ ನೀಡಲಾಗಿದೆ.
ಖಮೇನಿ ವಿರುದ್ದ ಹೆಚ್ಚಿದ ಪ್ರತಿಭಟನೆ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಬೀದಿಗಳಲ್ಲಿ ಘೋಷಣೆಗಳು ಮೊಳಗುತ್ತಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಸರ್ಕಾರದ ಏಕತೆಗೆ ಕರೆ ನೀಡಿದ್ದಾರೆ. 2022ರ ನಂತರ ಇರಾನ್ ಮತ್ತೊಮ್ಮೆ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವೇ ಈ ಆಕ್ರೋಶಕ್ಕೆ ಮುಖ್ಯ ಕಾರಣ.
ಖಮೇನಿ ವಿರುದ್ದ ಹೆಚ್ಚಿದ ಪ್ರತಿಭಟನೆ
ಶುತ್ರಗಳಿಂದ ಗಲಭೆ ಸೃಷ್ಟಿ ಆರೋಪ
ತೆಹ್ರಾನ್‌ನ 'ಶತ್ರುಗಳೇ' ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂದು ಅವರು ದೂಷಿಸಿದ್ದಾರೆ. ಶತ್ರುಗಳು ನುಸುಳಿ ಗಲಭೆ ಸೃಷ್ಟಿಸಿದರೆ ಅವರನ್ನು ಎದುರಿಸಲಾಗುವುದು ಎಂದು ಅಯತೊಲ್ಲಾ ಅಲಿ ಖಮೇನಿ ಕೂಡ ಬಲವಾದ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಇರಾನ್‌ನಲ್ಲಿನ ಧಾರ್ಮಿಕ ಆಡಳಿತವನ್ನು ಕೊನೆಗೊಳಿಸುವಂತೆ ಪ್ರತಿಭಟನೆಯಲ್ಲಿ ಬಹಿರಂಗ ಕರೆಗಳು ಕೇಳಿಬಂದವು. ಆದರೆ, ಹಲವು ದಿನಗಳ ಕಾಲ ಇಂಟರ್‌ನೆಟ್ ನಿಷೇಧ ಹೇರಿದ್ದರಿಂದ ಪ್ರತಿಭಟನೆಯ ವ್ಯಾಪ್ತಿ ಮತ್ತು ಸಂಘರ್ಷದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ.
ಶುತ್ರಗಳಿಂದ ಗಲಭೆ ಸೃಷ್ಟಿ ಆರೋಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

