ಇಸ್ರೇಲ್-ಇರಾನ್ ಯುದ್ಧದಲ್ಲಿ ಅಮೆರಿಕದ ಬಿ-೨ ಬಾಂಬರ್ ನಾಪತ್ತೆಯಾಗಿದೆ. ಇರಾನ್ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ ಈ ಜೆಟ್ ಕಾಣೆಯಾಗಿದೆ. ತಾಂತ್ರಿಕ ದೋಷದಿಂದಾಗಿ ಹವಾಯಿಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆಯೇ ಅಥವಾ ಇನ್ನೇನಾದರೂ ರಹಸ್ಯವಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆ ತಾತ್ಕಾಲಿಕವಾಗಿ ಶಾಂತವಾಗಿದೆ. ಈ ಶಾಂತಿಗೆ ಮುಖ್ಯ ಕಾರಣವೆಂದರೆ ಜೂನ್ 21, 2025 ರಂದು ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ನಡೆಸಿದ ದಾಳಿ. ಈ ದಾಳಿಯ ನಂತರ ಕದನ ವಿರಾಮ ಘೋಷಿತವಾಯಿತು, ಇದರಿಂದ ಶಾಂತಿಯನ್ನು ತಾತ್ಕಾಲಿಕವಾಗಿ ಪುನಃಸ್ಥಾಪಿಸಲಾಯಿತು. ಆದರೆ, ಈ ಯಶಸ್ಸಿನ ನಡುವೆಯೂ ಒಂದು ಪ್ರಮುಖ ಸಮಸ್ಯೆ ಎದುರಾಗಿದೆ. ದಾಳಿಯಲ್ಲಿ ಭಾಗವಹಿಸಿದ ಒಂದು ಬಿ-2 ಬಾಂಬರ್ ಜೆಟ್ ನಾಪತ್ತೆಯಾಗಿದೆ. ಇದು ಅಮೆರಿಕದ ವಾಯುಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇರಾನ್‌ಗೆ ವಂಚಿಸಲು ಯುಎಸ್ ಸಂಚು ರೂಪಿಸಿತ್ತು:

ಯುಎಸ್ ವಾಯುಪಡೆಯು ಇರಾನ್‌ನ ಗಮನವನ್ನು ಬೇರೆಡೆ ಸೆಳೆಯಲು ಒಂದು ಚತುರ ಯೋಜನೆಯನ್ನು ರೂಪಿಸಿತ್ತು. ಜೂನ್ 21 ರಂದು, ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಯಿಂದ ಎರಡು ಬ್ಯಾಚ್‌ಗಳಲ್ಲಿ ಬಿ-2 ಬಾಂಬರ್‌ಗಳು ಹೊರಟವು. ಮೊದಲ ಬ್ಯಾಚ್ ಪೆಸಿಫಿಕ್ ಮಹಾಸಾಗರದ ಗುವಾಮ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಕಡೆಗೆ ತೆರಳಿತು, ಇದು ಇರಾನ್‌ಗೆ ತಪ್ಪು ಸಂಕೇತವನ್ನು ನೀಡುವ ತಂತ್ರವಾಗಿತ್ತು. ಈ ಸಮಯದಲ್ಲಿ, ಎರಡನೇ ಬ್ಯಾಚ್‌ನ ಏಳು ಬಿ-2 ಬಾಂಬರ್‌ಗಳು ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಸ್ಥಾವರಗಳ ಮೇಲೆ 14 ಜಿಬಿಯು-57 ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬೀಳಿಸಿ, 37 ಗಂಟೆಗಳ ದೀರ್ಘ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹಿಂತಿರುಗಿದವು.

ಇದನ್ನೂ ಓದಿ: Shubhanshu Shukla: ಅಂತರಿಕ್ಷಕ್ಕೇರಿದ ಶುಕ್ಲಾ ಜತೆ ಮೋದಿ ಮಾತು | ಇದು ನವಯುಗದ ಆರಂಭ । ನೀವು ಶುಭಾರಂಭ ಮಾಡಿರುವಿರಿ: ಮೋದಿ

ಆದರೆ ಮೊದಲ ಬ್ಯಾಚ್‌ನ ಒಂದು ಬಿ-2 ಬಾಂಬರ್, ಕಾಲ್‌ಸೈನ್ 'ಮೈಟಿ 14' ಎಂದು ಕರೆಯಲ್ಪಡುವ ಜೆಟ್, ಹವಾಯಿಯ ಡೇನಿಯಲ್ ಕೆ. ಇನೌಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು. ಇದು ಹಿಕಮ್ ವಾಯುಪಡೆ ನೆಲೆಗೆ ಸಮೀಪವಾಗಿದೆ. ಯುರೇಷಿಯನ್ ಟೈಮ್ಸ್ ವರದಿಯ ಪ್ರಕಾರ, ತಾಂತ್ರಿಕ ದೋಷದಿಂದಾಗಿ ಈ ಜೆಟ್ ಜೂನ್ 21 ರಂದು ತುರ್ತು ಲ್ಯಾಂಡಿಂಗ್‌ಗೆ ಒಳಗಾಯಿತು ಮತ್ತು ಇದೀಗ ಹೊನೊಲುಲುನಲ್ಲಿ ನಿಂತಿದೆ. ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಯುಎಸ್ ವಾಯುಪಡೆಯು ಬಿಡುಗಡೆ ಮಾಡಿಲ್ಲ, ಇಂಧನ ತುಂಬಿಸಲು ಲ್ಯಾಂಡಿಂಗ್ ಮಾಡಲಾಗಿದೆ ಎಂದು ಕೆಲವರು ಊಹಿಸಿದ್ದಾರಾದರೂ ಆದಾಗ್ಯೂ, 10 ದಿನ ಕಳೆದರೂ ಜೆಟ್ ಇನ್ನೂ ಹಿಂತಿರುಗಿಲ್ಲ ಎಂಬುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಯುಎಸ್ ವಾಯುಪಡೆಯೂ ಏನೂ ಹೇಳಲಾಗುತ್ತಿಲ್ಲ.

ಬಿ-2 ಬಾಂಬರ್ ಹೊಡೆದುರುಳಿಸಿದ್ದೇವೆ ಎಂದಿದ್ದ ಇರಾನ್:

ದಾಳಿಯ ನಂತರ, ಇರಾನ್ ಒಂದು ಬಿ-2 ಬಾಂಬರ್ ಜೆಟ್‌ನ ಫೋಟೋವನ್ನು ಬಿಡುಗಡೆ ಮಾಡಿ, ಅದನ್ನು ತಾನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿತ್ತು. ಆದರೆ, ಈ ಚಿತ್ರವು ಎಐ-ನಿರ್ಮಿತವಾಗಿದೆ ಎಂದು ಬಿಬಿಸಿ ವೆರಿಫೈ ಮತ್ತು ಇತರ ಸಂಸ್ಥೆಗಳು ದೃಢಪಡಿಸಿವೆ. ಯುಎಸ್ ಅಧ್ಯಕ್ಷ ಟ್ರಂಪ್ ಮತ್ತು ವಾಯುಪಡೆಯು ಎಲ್ಲಾ ಬಿ-2 ಬಾಂಬರ್‌ಗಳು ಸುರಕ್ಷಿತವಾಗಿ ವೈಟ್‌ಮ್ಯಾನ್ ನೆಲೆಗೆ ಹಿಂತಿರುಗಿವೆ ಎಂದು ಘೋಷಿಸಿದ್ದರೂ, 'ಮೈಟಿ 14' ಜೆಟ್‌ನ ನಾಪತ್ತೆಯಾಗಿರುವುದು ಗೊಂದಲ ಉಂಟುಮಾಡಿದೆ.

ಅಪಘಾತವಾಯ್ತಾ? ಹೊಡೆದುರುಳಿಸಲಾಯ್ತಾ?

ಬಿ-2 ಬಾಂಬರ್‌ಗಳ ಇತಿಹಾಸವನ್ನು ಗಮನಿಸಿದರೆ, ಎರಡು ಜೆಟ್‌ಗಳು ಈ ಹಿಂದೆ ಅಪಘಾತಗಳಲ್ಲಿ ನಾಶವಾಗಿವೆ. 2023 ರ ಏಪ್ರಿಲ್‌ನಲ್ಲಿ ಕೂಡ ಒಂದು ಬಿ-2 ಬಾಂಬರ್ ಹವಾಯಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಈಗಿನ 'ಮೈಟಿ 14' ಜೆಟ್ ಕೂಡ ತಾಂತ್ರಿಕ ದೋಷ ಅಥವಾ ಅಪಘಾತಕ್ಕೆ ಒಳಗಾಗಿರಬಹುದು ಎಂದು ಊಹಿಸಲಾಗಿದೆ. ಆದರೆ, ಯುಎಸ್ ವಾಯುಪಡೆಯು ಈ ಬಗ್ಗೆ ಯಾವುದೇ ಔಪಚಾರಿಕ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ, ಇದರಿಂದ ಊಹಾಪೋಹಗಳು ಹೆಚ್ಚಾಗಿವೆ.

ಯುಎಸ್‌ಗೆ ನಷ್ಟ, ಪ್ರತಿಷ್ಠೆಗೆ ಪೆಟ್ಟು

ಒಂದು ಬಿ-2 ಬಾಂಬರ್‌ನ ವೆಚ್ಚ ಸುಮಾರು 2.1 ಬಿಲಿಯನ್ ಡಾಲರ್‌ಗಳಾಗಿದ್ದು, ಇದು ಯುಎಸ್ ವಾಯುಪಡೆಯ ಹೆಮ್ಮೆಯ ಸಂಪತ್ತಾಗಿದೆ. ಕೇವಲ 19 ಬಾಂಬರ್‌ಗಳು ಉಳಿದಿರುವಾಗ, ಒಂದು ಜೆಟ್ ಕಾಣೆಯಾಗಿರುವುದು ಯುಎಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ಇದು ಇರಾನ್‌ನಿಂದ ಹೊಡೆದುರುಳಿಸಲ್ಪಟ್ಟಿದೆಯೇ, ಪೈಲಟ್ ಕಾಣೆಯಾಗಿದ್ದಾರೆಯೇ, ಅಥವಾ ತಾಂತ್ರಿಕ ದೋಷದಿಂದ ಅಪಘಾತಕ್ಕೆ ಒಳಗಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Donald Trump: ನಾನೇ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು 12 ಸಲ ಟ್ರಂಪ್ ಹೇಳಿಕೆ!

ಯುಎಸ್‌ನ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಗಂಭೀರ ಹಾನಿಯನ್ನುಂಟುಮಾಡಿತು, ಆದರೆ ಕಾಣೆಯಾದ ಬಿ-2 ಬಾಂಬರ್ ಜೆಟ್‌ನ ರಹಸ್ಯವು ಜಾಗತಿಕ ಗಮನವನ್ನು ಸೆಳೆದಿದೆ. ಈ ಘಟನೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ತನಿಖೆಗಳು ಮುಂದುವರಿಯುತ್ತಿವೆ.