MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮೇ.26ಕ್ಕೆ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ, ಮಳೆ ಜೊತೆ ಎಲ್ ನಿನೊ ಎಚ್ಚರಿಕೆ ನೀಡಿದ IMD

ಮೇ.26ಕ್ಕೆ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ, ಮಳೆ ಜೊತೆ ಎಲ್ ನಿನೊ ಎಚ್ಚರಿಕೆ ನೀಡಿದ IMD

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಮೇ.26ಕ್ಕೆ ನೈಖುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಇಲ್ಲಿಂದ ಮಳೆಗಾಲ ಆರಂಭಗೊಳ್ಳಲಿದೆ. ಆದರೆ ಎಲ್ ನಿನೋ ಎಚ್ಚರಿಕೆ ನೀಡಲಾಗಿದೆ.

2 Min read
Author : Chethan Kumar
Published : May 16 2026, 10:01 AM IST
Share this Photo Gallery
  • FB
  • TW
  • Linkdin
  • Whatsapp
16
ಮುಂಗಾರು ಮಳೆ ಪ್ರವೇಶ
Image Credit : Asianet News

ಮುಂಗಾರು ಮಳೆ ಪ್ರವೇಶ

ಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ. ಮೇ.26ರ ವೇಳೆಗೆ ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಮುಂದಿನ 24 ಗಂಟೆಗಳಲ್ಲಿ, ಮಾನ್ಸೂನ್ ದಕ್ಷಿಣ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳತ್ತ ಮುಂದುವರಿಯಲು ಪೂರಕ ವಾತಾವರಣವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Add Asianetnews Kannada as a Preferred SourcegooglePreferred
26
ಎಲ್ ನಿನೋ ಭೀತಿ
Image Credit : Asianet News

ಎಲ್ ನಿನೋ ಭೀತಿ

ಈ ಬಾರಿ ಮಳೆಗಾಲದಲ್ಲಿ ಹಲವು ಅಡ್ಡಿ ಆತಂಕವನ್ನು ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಮುಖವಾಗಿ ಎಲ್ ನಿನೊ ಭೀತಿ ಆವರಿಸಿದೆ. ಹೀಗಾಗಿ ಮುಂಗಾರು ಪ್ರವೇಶದ ಬಳಿಕ ಉತ್ತಮ ಮಳೆಯಾಗುತ್ತಿದ್ದಂತೆ ಎಲ್ ನಿನೊದಿಂದ ಬರಗಾಲ ಸೇರಿದಂತೆ ಕೆಲೆವಡೆ ಪ್ರವಾಹ ಪರಿಸ್ಥಿತಿಗಳು ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದೆ.

Related Articles

Related image1
ಈ ವರ್ಷದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ಸ್ಕೈಮೆಟ್ ಮುನ್ಸೂಚನೆ
Related image2
Monsoon 2026: ಈ ವರ್ಷ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ; ಹವಾಮಾನ ಇಲಾಖೆ ಮುನ್ಸೂಚನೆ, ಮಳೆ ಕೊರತೆಗೆ ಕಾರಣವೇನು?
36
ಮಾನ್ಸೂನ್ ಮಧ್ಯೆಯೂ ಬಿಸಿಗಾಳಿಯ ಅಬ್ಬರ
Image Credit : Asianet News

ಮಾನ್ಸೂನ್ ಮಧ್ಯೆಯೂ ಬಿಸಿಗಾಳಿಯ ಅಬ್ಬರ

ಮುಂಗಾರು ಬರುತ್ತಿದೆ ಅನ್ನೋ ಖುಷಿ ಒಂದೆಡೆಯಾದರೆ, ವಾಯುವ್ಯ ಮತ್ತು ಮಧ್ಯ ಭಾರತದ ಜನರಿಗೆ ಸದ್ಯಕ್ಕೆ ಬಿಸಿಲಿನಿಂದ ಮುಕ್ತಿ ಇಲ್ಲ. ಈ ವಾರವಿಡೀ ಅಲ್ಲಿ ತೀವ್ರದಿಂದ ಅತೀ ತೀವ್ರ ಬಿಸಿಗಾಳಿ ಮುಂದುವರಿಯಲಿದೆ. ಇದರಿಂದ ಉತ್ತರ ಭಾರತದಲ್ಲಿ ಬಹುತೇಕ ಕಡೆ ಮಳೆಗಾಗಿ ಕಾಯಬೇಕಿದೆ.

46
ಮಾನ್ಸೂನ್ ಆರಂಭದ ಮಹತ್ವವೇನು?
Image Credit : Asianet News

ಮಾನ್ಸೂನ್ ಆರಂಭದ ಮಹತ್ವವೇನು?

ಭಾರತದ ಮುಖ್ಯ ಭೂಭಾಗಕ್ಕೆ ನೈಋತ್ಯ ಮಾನ್ಸೂನ್ ಕಾಲಿಡುವುದನ್ನೇ ಕೇರಳದಲ್ಲಿ ಮುಂಗಾರು ಆರಂಭ ಎಂದು ಕರೆಯುತ್ತಾರೆ. ಇದು ಬೇಸಿಗೆಯ ಸುಡು ಬಿಸಿಲಿನಿಂದ ಮಳೆಗಾಲಕ್ಕೆ ಬದಲಾಗುವ ಪ್ರಮುಖ ಸೂಚಕವಾಗಿದೆ. ಮಾನ್ಸೂನ್ ಉತ್ತರ ದಿಕ್ಕಿನತ್ತ ಸಾಗಿದಂತೆ, ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆಯಿಂದ ಜನರಿಗೆ ರಿಲೀಫ್ ಸಿಗುತ್ತದೆ.IMD ಪ್ರಕಾರ, ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಇದರಲ್ಲಿ ಸುಮಾರು ಏಳು ದಿನಗಳ ವ್ಯತ್ಯಾಸ ಆಗುವುದು ಸಹಜ.

56
IMD ಮುನ್ಸೂಚನಾ ಮಾದರಿ ಮತ್ತು ನಿಖರತೆ
Image Credit : Getty

IMD ಮುನ್ಸೂಚನಾ ಮಾದರಿ ಮತ್ತು ನಿಖರತೆ

ಕೇರಳಕ್ಕೆ ಮಾನ್ಸೂನ್ ಯಾವಾಗ ಪ್ರವೇಶಿಸಲಿದೆ ಎಂದು IMD 2005ರಿಂದಲೇ ಮುನ್ಸೂಚನೆ ನೀಡುತ್ತಾ ಬಂದಿದೆ. ಇದಕ್ಕಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಒಂದು ಸ್ಟಾಟಿಸ್ಟಿಕಲ್ ಮಾಡೆಲ್ ಬಳಸಲಾಗುತ್ತದೆ. ಇದರಲ್ಲಿ ನಾಲ್ಕು ದಿನಗಳ ವ್ಯತ್ಯಾಸ ಆಗಬಹುದು. ಈ ಮಾಡೆಲ್, ವಾಯುವ್ಯ ಭಾರತದ ಕನಿಷ್ಠ ತಾಪಮಾನ, ದಕ್ಷಿಣ ಭಾರತದ ಮಾನ್ಸೂನ್ ಪೂರ್ವ ಮಳೆ, ದಕ್ಷಿಣ ಚೀನಾ ಸಮುದ್ರದ ಮೇಲಿನ ವಿಕಿರಣ ಸೇರಿದಂತೆ ಒಟ್ಟು ಆರು ಅಂಶಗಳನ್ನು ಆಧರಿಸಿ ಭವಿಷ್ಯ ನುಡಿಯುತ್ತದೆ.

66
ಹವಾಮಾನ ಇಲಾಖೆ ಭವಿಷ್ಯ
Image Credit : Getty

ಹವಾಮಾನ ಇಲಾಖೆ ಭವಿಷ್ಯ

2005ರಿಂದ 2025ರವರೆಗಿನ 21 ವರ್ಷಗಳಲ್ಲಿ, 2015ನ್ನು ಬಿಟ್ಟರೆ ಉಳಿದ ಬಹುತೇಕ ವರ್ಷಗಳಲ್ಲಿ IMDಯ ಮುನ್ಸೂಚನೆ ಬಹುತೇಕ ನಿಖರವಾಗಿದೆ. ಕಳೆದ ಆರು ವರ್ಷಗಳಲ್ಲಿ (2020-2025) ಕೂಡ, ಇಲಾಖೆ ಹೇಳಿದ ದಿನಾಂಕದ ಆಸುಪಾಸಿನಲ್ಲೇ ಮಾನ್ಸೂನ್ ಬಂದಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮುಂಗಾರು ಮಳೆ
ಮಾನ್ಸೂನ್
ಕರ್ನಾಟಕ ಮಳೆ

Latest Videos
Recommended Stories
Recommended image1
India Latest News Live: ಮೇ.26ಕ್ಕೆ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ, ಮಳೆ ಜೊತೆ ಎಲ್ ನಿನೊ ಎಚ್ಚರಿಕೆ ನೀಡಿದ IMD
Recommended image2
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಪುಣೆ ಪ್ರೊಫೆಸರ್! ಮರು ಪರೀಕ್ಷೆ ಯಾವಾಗ? ಇಲ್ಲಿದೆ ದಿನಾಂಕ
Recommended image3
Bhojshala Mosque verdict: ಭೋಜಶಾಲಾ ಮಸೀದಿ ಅಲ್ಲ, ಮಂದಿರ: ಮ.ಪ್ರ. ಹೈಕೋರ್ಟ್‌ ಮಹತ್ವದ ತೀರ್ಪು, ಹಿಂದುಗಳ ವಾದಕ್ಕೆ ಜಯ
Related Stories
Recommended image1
ಈ ವರ್ಷದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ಸ್ಕೈಮೆಟ್ ಮುನ್ಸೂಚನೆ
Recommended image2
Monsoon 2026: ಈ ವರ್ಷ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ; ಹವಾಮಾನ ಇಲಾಖೆ ಮುನ್ಸೂಚನೆ, ಮಳೆ ಕೊರತೆಗೆ ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved