- Home
- News
- India News
- ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, ಬೀಗ ಹಾಕಿ 10 ವರ್ಷ ಚಿಕ್ಕವನೊಂದಿಗೆ ಐನಾತಿ ಆಂಟಿ ಜೂಟ್!
ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, ಬೀಗ ಹಾಕಿ 10 ವರ್ಷ ಚಿಕ್ಕವನೊಂದಿಗೆ ಐನಾತಿ ಆಂಟಿ ಜೂಟ್!
ಐವರು ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ, ತನಗಿಂತ 10 ವರ್ಷ ಚಿಕ್ಕವನಾದ ಪ್ರಿಯಕರನೊಂದಿಗೆ ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ. ಪತಿಯ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಪ್ರಣಯಜೋಡಿಯನ್ನು ಪತ್ತೆಹಚ್ಚಿದ್ದು, ಮಕ್ಕಳನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.

ಐನಾತಿ ಮಹಿಳೆ
ಮಹಿಳೆಯೊಬ್ಬಳು ಐವರು ಮಕ್ಕಳ ಆಹಾರದಲ್ಲಿ ನಿದ್ದೆ ಮಾತ್ರೆ ಸೇರಿ, ತನಗಿಂತ 10 ವರ್ಷ ಚಿಕ್ಕವನಾದ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಮಹಿಳೆ ಪತಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯಲ್ಲಿಯೇ ಪ್ರಣಯಜೋಡಿಗಳನ್ನು ಪತ್ತೆ ಮಾಡಿದ್ದಾರೆ.
10 ವರ್ಷ ಚಿಕ್ಕ ಯುವಕನ ಮೇಲೆ ಲವ್
ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಮಹಿಳೆ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದೆ. 33 ವರ್ಷದ ಮಿಥಿಲೇಶಾ ಪ್ರಿಯಕರನೊಂದಿಗೆ ಕಾಲ್ಕಿತ್ತ ಐದು ಮಕ್ಕಳ ತಾಯಿ. 22 ವರ್ಷದ ಸುರೇಂದ್ರ ಅಲಿಯಾಸ್ ಖನ್ನಾ ಎಂಬಾತನೊಂದಿಗೆ ಮಿಥಿಲೇಶಾಗೆ ಪ್ರೇಮಾಂಕುರವಾಗಿತ್ತು.
ಬಾಗಿಲು ಹಾಕಿಕೊಂಡು ಆಂಟಿ ಜೂಟ್
ವರದಿಗಳ ಪ್ರಕಾರ, ಸುರೇಂದ್ರ ಜೊತೆ ತೆರಳುವ ಮುನ್ನ ಐವರು ಮಕ್ಕಳಿಗೆ ನಿದ್ದೆ ಮಾತ್ರೆಗಳನ್ನು ನೀಡಿದ್ದಾಳೆ. ಮಕ್ಕಳು ಸಂಪೂರ್ಣ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದ ಹಣ, ಒಡವೆ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೂಡಾ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಮಕ್ಕಳು ಮಲಗಿದ್ರೆ ಹೊರಗಿನಿಂದ ಬಾಗಿಲು ಹಾಕಿಕೊಂಡು ಮಿಥಿಲೇಶಾ ಕಾಲಿಗೆ ಬುದ್ದಿ ಹೇಳಿದ್ದಾಳೆ.
ದೂರು ದಾಖಲಿಸಿದ ಪತಿ
ಮಿಥಿಲೇಶಾ ಪತಿ ರೂಪ್ ಕಿಶೋರ್ ದೆಹಲಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, 24 ಗಂಟೆಯಲ್ಲಿಯೇ ಮಿಥಿಲೇಶಾ ಮತ್ತು ಆಕೆಯ ಪ್ರಿಯಕರ ಸುರೇಂದ್ರನನ್ನು ಪತ್ತೆ ಮಾಡಿದ್ದಾರೆ. ನಿದ್ದೆ ಮಾತ್ರೆ ಸೇವನೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಗೆಳತಿ ಜೊತೆ ಹಾಸಿಗೆಯಲ್ಲಿ ಮಜಾ ಮಾಡ್ತಿದ್ದ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ; ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ರಾಂಪುರ ಪೊಲೀಸ್ ಠಾಣೆಯಲ್ಲಿ ಕುಳಿತು ಮಹಿಳೆ ಹೇಳಿಕೆ ದಾಖಲು ಮಾಡಿರುವ ವಿಡಿಯೋ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. ಐದು ಮಕ್ಕಳಿದ್ರೂ ಮಹಿಳೆಗೆ ಮತ್ತೊಬ್ಬನ ಮೇಲೆ ಲವ್? ಒಂದು ವೇಳೆ ಮಕ್ಕಳಿಗೆ ಏನಾದ್ರೂ ಆಗಿದ್ರೆ ಹೇಗೆ? ದೇವರು ದೊಡ್ಡವನು. ಮಕ್ಕಳಿಗೆ ಏನು ಆಗಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಗಂಡ ಜೊತೆಯಲ್ಲಿರದ ಕಾರಣ ಮಹಿಳೆ ಈ ರೀತಿ ಮಾಡಿರಬಹುದು ಅಥವಾ ವೈವಾಹಿಕ ಜೀವನ ಚೆನ್ನಾಗಿರದ ಕಾರಣಕ್ಕೂ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಂಡುಡುಗೆಯಲ್ಲಿ ನರ್ಸ್‌ಗಳಿಂದ ಕೆಲಸ; ಬಿಹಾರ ಖಾಸಗಿ ಆಸ್ಪತ್ರೆಯ ವಿಡಿಯೋ ಅಸಲಿ ಸತ್ಯ ಇಲ್ಲಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

