ಹಕ್ಕಿ ಜ್ವರ ಆತಂಕ: ಚಿಕನ್, ಮೊಟ್ಟೆ ತಿನ್ನೋದು ಎಷ್ಟು ಸೇಫ್? ಹೀಗ್ಮಾಡಿದ್ರೆ ಯಾವ ಭಯವೂ ಇಲ್ಲ!
First Published Jan 9, 2021, 12:49 PM IST
ಕಳೆದೊಂದು ವರ್ಷದಿಂದ ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದೆ. ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಇದಕ್ಕೆ ಚಿಕಿತ್ಸೆ ಸಿಗುವ ಭರವಸೆ ಲಭಿಸಿದೆ. ಅನೇಕ ಕಡೆ ಕೊರೋನಾ ಲಸಿಕೆ ನೀಡುವ ಕಾರ್ಯವೂ ಆರಂಭವಾಗಿದೆ. ಹೀಗಿದ್ದರೂ ಈವರೆಗೂ ಹೆಚ್ಚಿನ ಜನರಿಗೆ ನಂಬಿಕೆ ಇಲ್ಲ. ಆದರೀಗ ಕೊರೋನಾ ಭೀತಿ ನಡುವೆಯೇ ಹಕ್ಕಿ ಜ್ವರದ ಭೀತಿ ಆವರಿಸಿದೆ. ಅನೇಕ ರಾಜ್ಯಗಳಲ್ಲಿ ಕುರಿತು ಅಲರ್ಟ್ ಕೂಡಾ ಜಾರಿಗೊಳಿಸಲಾಗಿದೆ. ಆದರೆ ಯಾವಾಗೆಲ್ಲಾ ಹಕ್ಕಿ ಜ್ವರ ಕಾಡಲಾರಂಭಿಸುತ್ತದೋ ಆವಾಗೆಲ್ಲಾ ಕೋಳಿ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಭಾರೀ ನಷ್ಟವಾಗುತ್ತದೆ. ಜನರು ಮಾಂಸ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ. ರಕ್ಷಣೆಗೆ ಇದು ಒಳ್ಳೆಯದು ಕೂಡಾ, ಆದರೆ ಅನೇಕ ಮಂದಿ ಮಾಂಸ ಪ್ರಿಯರಿಗೆ ಇದು ಬಹಳ ಕಷ್ಟ ಕೊಡುತ್ತದೆ. ಹೀಗಿರುವಾಗ ಹಕ್ಕಿ ಜ್ವರ ಹಬ್ಬಿದ ಬಳಿಕ ಚಿಕನ್ ಹಾಗೂ ಮೊಟ್ಟೆ ತಿನ್ನವ ಸುರಕ್ಷಿತ ಮಾರ್ಗ ಹೀಗಿದೆ ನೋಡಿ

ದೇಶಾದ್ಯಂತ ಸದ್ಯ ಹಕ್ಕಿ ಜ್ವರ ಹಬ್ಬಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದಾದ ಬಳಿಕ ಮತ್ತೊಂದು ಹೀಗೆ ಅನೇಕ ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದ ಭಾರೀ ಆತಂಕ ಸೃಷ್ಟಿಯಾಗಿದ್ದು, ಈ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲಿ ಹಕ್ಕಿ ಜ್ವರ ದಾಳಿ ಇಟ್ಟ ಬೆನ್ನಲ್ಲೇ ಎಮರ್ಜೆನ್ಸಿ ಘೋಷಿಸಲಾಗಿದೆ. ಅತ್ತ ಮಧ್ಯಪ್ರದೇಶದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಶಾಪ್ ಮುಚ್ಚುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ಆವರಿಸಿದಾಗ ನಾನ್ ವೆಜ್ ಶಾಪ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?