MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬಡತನ ಕಾರಣಕ್ಕೆ ಶಾಲೆ ಬಿಟ್ಟಿದ್ದ 'ಟೀ ಕಪ್ ಹಿಡಿದು ನಗುವ' ವೈರಲ್ ಹುಡುಗ; ಒಂದು ವಿಡಿಯೋದಿಂದ ಜೀವನ ಬದಲಾಯ್ತು!

ಬಡತನ ಕಾರಣಕ್ಕೆ ಶಾಲೆ ಬಿಟ್ಟಿದ್ದ 'ಟೀ ಕಪ್ ಹಿಡಿದು ನಗುವ' ವೈರಲ್ ಹುಡುಗ; ಒಂದು ವಿಡಿಯೋದಿಂದ ಜೀವನ ಬದಲಾಯ್ತು!

ಸಾಮಾಜಿಕ ಜಾಲತಾಣದಲ್ಲಿ ಚಹಾ ಕಪ್ ಹಿಡಿದು ನಗುವ ವಿಡಿಯೋ ಮೂಲಕ ವೈರಲ್ ಆಗಿದ್ದ ಹುಡುಗನ ಬದುಕು ಈಗ ಬದಲಾಗಿದೆ. ಬಡತನದಿಂದ ಶಾಲೆ ಬಿಟ್ಟಿದ್ದ ಈ ಬಾಲಕ ಈಗ ಹತ್ತನೇ ತರಗತಿ ಪಾಸಾಗಿ ಲಕ್ಷಾಂತರ ಜನರಿಗೆ ಮಾದರಿಯಾಗಿದ್ದಾನೆ. ಏನಿದು ಅಸಲಿ ಕಹಾನಿ ಓದಿ.

2 Min read
Author : Sathish Kumar KH
Published : Jun 10 2026, 08:35 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಸಾಮಾಜಿಕ ಜಾಲತಾಣದಲ್ಲಿ ಚಹಾ ಕಪ್ ಹಿಡಿದು ನಗುತ್ತಲೇ ಕೈ ಸುಟ್ಟುಕೊಂಡು ಚಹಾವನ್ನು ಮತ್ತೊಂದು ಕೈಗೆ ಬದಲಾಯಿಸುವ ಬಡ ಹುಡುಗನ ವಿಡಿಯೋವನ್ನು ನೀವು ಎಲ್ಲೆಡೆ ನೋಡಿರುತ್ತೀರಿ. ಆದರೆ, ಈ ನಗುವ ಹುಡುಗನ ನಿಜ ಜೀವನದಲ್ಲಿ ಭಾರೀ ಕಷ್ಟವಿದೆ. ಕುಟುಂಬಕ್ಕಾಗಿ ಓದು ಅರ್ಧಕ್ಕೆ ನಿಲ್ಲಿಸಿದ ಈ ಬಾಲಕ, ಒಂದೇ ಒಂದು ವಿಡಿಯೋದಿಂದಾಗ ಆತನ ಜೀವನವೇ ಬದಲಾಗಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಬಡತನ ಎಂಬುದು ಕೇವಲ ಹೊಟ್ಟೆ ಹಸಿವನ್ನಷ್ಟೇ ಹೆಚ್ಚಿಸುವುದಿಲ್ಲ, ಅದು ಕಾಣುವ ಸುಂದರ ಕನಸುಗಳನ್ನೂ ಚಿವುಟಿ ಹಾಕುತ್ತದೆ. ಆದರೆ, ದೃಢ ಸಂಕಲ್ಪ ಮತ್ತು ಅದೃಷ್ಟ ಕೈಜೋಡಿಸಿದರೆ ಎಂತಹ ಕಠಿಣ ಹಾದಿಯನ್ನೂ ಸುಗಮಗೊಳಿಸಬಹುದು ಎಂಬುದಕ್ಕೆ ಈ ಅರುಣ್ ಎಂಬ ಬಾಲಕನೇ ಸಾಕ್ಷಿ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ಈ ಬಾಲಕ, ಇಂದು 10ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದುವ ಮೂಲಕ ಹೊಸ ಇತಿಹಾಸ ಬರೆದಿದ್ದಾನೆ. 

ಅರುಣ್ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ 2 ವರ್ಷ ಕಳೆದರೂ ಆತನ ಪಾಸ್ ಆಗುವ ಹಿಂದಿದ್ದ ಒಂದು ವಿಡಿಯೋ ಕಥೆ ಇದೀಗ ರಿವೀಲ್ ಆಗಿದೆ.

Related Articles

Related image1
41ರ ಹರೆಯದಲ್ಲಿ ನಟಿ ತ್ರಿಶಾಗೆ ದಿಢೀರ್ ನಿಶ್ಚಿತಾರ್ಥ! ಫೋಟೋ ವೈರಲ್, ಹುಡುಗ ಯಾರು?
Related image2
ಎಲ್ಲಾ ಮೀಮ್ಸ್​ ಕೊನೆಯಲ್ಲಿ ಕಾಣೋ ಹುಡುಗ ಕೊನೆಗೂ ಪತ್ತೆ! ನಕ್ಕರೆ ಬರತ್ತೆ ಮಿಲಿಯನ್ಸ್​ ವ್ಯೂವ್ಸ್​- ಯಾರೀತ?
36
Image Credit : Instagram

ಅರುಣ್ ಬದುಕಿನಲ್ಲಿ ಪವಾಡ ಮಾಡಿದ ವೈರಲ್ ವಿಡಿಯೋ:

ಒಂದಾನೊಂದು ಕಾಲದಲ್ಲಿ ಅರುಣ್ ಬಡತನದ ಬೇಗೆಯಿಂದಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಶಾಲೆಗೆ ಹೋಗಬೇಕಿದ್ದ ವಯಸ್ಸಿನಲ್ಲಿ ಕುಟುಂಬಕ್ಕೆ ಆಧಾರವಾಗಲು ಕೆಲಸಕ್ಕೆ ಸೇರಿದ್ದ. ಆದರೆ, ಈತನ ಅಸಹಾಯಕತೆ ಮತ್ತು ಕಲಿಯುವ ಹಂಬಲದ ಬಗ್ಗೆ ತಯಾರಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಅರುಣ್‌ನ ಜೀವನದ ದಿಕ್ಕನ್ನೇ ಬದಲಿಸಿತು. ಆ ವಿಡಿಯೋ ನೋಡಿದ ನೆಟ್ಟಿಗರು ಮತ್ತು ದಾನಿಗಳು ಆತನ ಸಹಾಯಕ್ಕೆ ಧಾವಿಸಿದರು.

46
Image Credit : Instagram

ದಾನಿಗಳಿಂದ ಆರ್ಥಿಕ ಸಹಾಯ ಬರುತ್ತಿದ್ದಂತೆ ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ರೆಕ್ಕೆ-ಪುಕ್ಕ ಬಂದವು. ಜನರ ಪ್ರೋತ್ಸಾಹ ಮತ್ತು ಸರ್ಕಾರದ ನೆರವಿನಿಂದ ಅರುಣ್ ಮತ್ತೆ ಶಾಲೆಯ ಮೆಟ್ಟಿಲು ಹತ್ತಿದ. ಕಳೆದ ಕೆಲವು ವರ್ಷಗಳಿಂದ ಹಗಲಿರುಳು ಶ್ರಮವಹಿಸಿ ಓದಿದ ಈತ, ಈಗ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ಮೂಲಕ ತನ್ನ ಓದಿನ ಕನಸನ್ನು ನನಸು ಮಾಡಿಕೊಂಡು ಯಶಸ್ಸನ್ನೂ ಸಾಧಿಸಿದ್ದಾನೆ.

56
Image Credit : Instagram

ಲಕ್ಷಾಂತರ ಜನರಿಗೆ ಸ್ಫೂರ್ತಿ:

ಅರುಣ್ ಸಾಧನೆ ಇಂದು ಕೇವಲ ವೈಯಕ್ತಿಕ ಯಶಸ್ಸಲ್ಲ, ಅದು ಬಡತನದ ವಿರುದ್ಧ ಹೋರಾಡುತ್ತಿರುವ ಸಾವಿರಾರು ಮಕ್ಕಳಿಗೆ ಭರವಸೆಯ ಕಿರಣವಾಗಿದೆ. 'ನನಗೆ ಸಿಕ್ಕ ಅವಕಾಶವನ್ನು ನಾನು ವ್ಯರ್ಥ ಮಾಡಬಾರದು ಎಂದು ನಿರ್ಧರಿಸಿದ್ದೆ. ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು' ಎಂದು ಅರುಣ್ ಸಂಭ್ರಮ ಹಂಚಿಕೊಂಡಿದ್ದಾನೆ.

66
Image Credit : Instagram

ಒಂದು ಸಣ್ಣ ವಿಡಿಯೋ ಅರುಣ್‌ನಂತಹ ಎಷ್ಟೋ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ನ್ಯಾಯ ಕೊಡಿಸಬಲ್ಲದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಅರುಣ್‌ನ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ವೈರಲ್ ಸುದ್ದಿ
ವೈರಲ್ ವಿಡಿಯೋ
ವಿದ್ಯಾರ್ಥಿ
ಭಾರತ ಸುದ್ದಿ
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
Latest Videos
Recommended Stories
Recommended image1
ಒಂದು ರಾತ್ರಿಗೆ ಡ್ಯಾನ್ಸರ್ ಬುಕ್ ಮಾಡಿದ ನಾಲ್ವರು ಸ್ನೇಹಿತರು; ಬೆಳಗ್ಗೆ ಆಕೆಯ ಬಿಲ್ ನೋಡಿ ಮೂರ್ಚೆ ಹೋದರು!
Recommended image2
ರೈಲಿನ ಕಿಟಕಿಯಲ್ಲಿ ಮೂತ್ರ ವಿಸರ್ಜನೆ ಮಾಡಿ, ಮಲಗಿದ್ದ ಮಹಿಳೆ ಮುಖಕ್ಕೆ ಮೂತ್ರ ಎರಚಿದ ವಿಕೃತ ವ್ಯಕ್ತಿ!
Recommended image3
ಖಾಲಿ ಜಾಗ ಇದ್ರೆ ಸಾಕು, ತಿಂಗಳಿಗೆ 22 ಲಕ್ಷ ದುಡಿಯಬಹುದು: ಗೆಳೆಯನ ಬ್ಯುಸಿನೆಸ್ ಐಡಿಯಾ ಹಂಚಿಕೊಂಡ ಯುವತಿ
Related Stories
Recommended image1
41ರ ಹರೆಯದಲ್ಲಿ ನಟಿ ತ್ರಿಶಾಗೆ ದಿಢೀರ್ ನಿಶ್ಚಿತಾರ್ಥ! ಫೋಟೋ ವೈರಲ್, ಹುಡುಗ ಯಾರು?
Recommended image2
ಎಲ್ಲಾ ಮೀಮ್ಸ್​ ಕೊನೆಯಲ್ಲಿ ಕಾಣೋ ಹುಡುಗ ಕೊನೆಗೂ ಪತ್ತೆ! ನಕ್ಕರೆ ಬರತ್ತೆ ಮಿಲಿಯನ್ಸ್​ ವ್ಯೂವ್ಸ್​- ಯಾರೀತ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved