ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ
ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ, ರಾಜಸ್ಥಾನದ ಅತೀ ದೊಡ್ಡ ರಿಫೈನರಿ ಘಟಕದಲ್ಲಿನ ಅಗ್ನಿ ಅವಘಡ ನಿಯಂತ್ರಣಕ್ಕೆ ತರಲು 20 ಅಗ್ನಿಶಾಮಕ ದಳ ಹರಹಾಸ ಪಟ್ಟಿದೆ.

ಅಗ್ನಿ ಅವಘಡದಿಂದ ಉದ್ಘಾಟನೆ ಮುಂದೂಡಿಕೆ
ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 21 ರಂದು ಉದ್ಘಾಟನೆ ಮಾಡಬೇಕಿದ್ದ ರಾಜಸ್ಥಾನದ HRRL ರಿಫೈನರಿ ಘಟಕ ಇದೀಗ ಮುಂದೂಡಲಾಗಿದೆ. ದೇಶದ ಅತ್ಯಂತ ಸುಸಜ್ಜಿತ ಘಟಕದ ಉದ್ಘಾಟನೆಗೂ ಮೊದಲೇ ಅಗ್ನಿ ಅವಘಡದಿಂದ ಘಟಕದ ಒಂದು ಭಾಗ ಸಂಪೂರ್ಣ ಹಾನಿಯಾಗಿದೆ. ಬಲೋತ್ರದಲ್ಲಿ ತಲೆ ಎತ್ತಿ ನಿಂತಿರುವ ಈ ರಿಫೈನರಿ ಘಟಕದಲ್ಲಿ ಇಂದು ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿತ್ತು. ತೈಲ ಘಟಕದ ಕಾರಣ ಬೆಂಕಿ ಕೆನ್ನಾಲಗೆ ವೇಗವಾಗಿ ವ್ಯಾಪಸಿತ್ತು. 20 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಹಾಸ ಪಟ್ಟಿದೆ. ಈ ದುರ್ಘಟನೆಯಿಂದ ಪ್ರಧಾನಿ ಮೋದಿ ನಾಳೆ (ಏ.21) ಉದ್ಘಾಟಿಸಬೇಕಿದ್ದ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಮೋದಿ ಕಾರ್ಯಕ್ರಮ ಮುಂದೂಡಿಕೆ ಖಚಿತಪಡಿಸಿದ ಸಚಿವಾಲಯ
ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯನ್ನು ಪೆಟ್ರೋಲಿಯಂ ಹಾಗೂ ಗ್ಯಾಸ್ ಸಚಿವಾಲಯ ಖಚಿತಪಡಿಸಿದೆ. HRRL ತೈಲ ಶುದ್ಧೀಕರಣ ಘಟಕದಲ್ಲಿ ನಡೆದ ಅಗ್ನಿ ಅವಘಡದಿಂದ ಎಪ್ರಿಲ್ 21ರ ಪ್ರಧಾನಿ ಮೋದಿ ಉದ್ಘಟನಾ ಕಾರ್ಯಕ್ರವನ್ನು ಮುಂದೂಡಲಾಗಿದೆ. ಕಾರ್ಯಕ್ರಮ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲ
ರಿಫೈನರಿ ಘಟಕದಲ್ಲಿನ ದಿಢೀರ್ ಅಗ್ನಿ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹಲವು ಕಾರ್ಮಿಕರು ನಾಳೆಯ ಉದ್ಘಾಟನಾ ಕಾರ್ಯಕ್ರಮದ ತಯಾರಿಯಲ್ಲಿದ್ದಾಗ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ನೀಡಲಾಗಿದೆ. ಹೀಗಾಗಿ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ಅಗ್ನಿಶಾಮಕ ದಳದ ಸಿಬ್ಬಂದಿಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ರಾಜಸ್ಥಾನಕ್ಕೆ ತೆರಳಬೇಕಿದ್ದ ಮೋದಿ
ನಾಳೆ HRRL ಘಟಕ ಉದ್ಘಾಟನೆಗೆ ರಾಜಸ್ಥಾನಕ್ಕೆ ತೆರಳಬೇಕಿತ್ತು. ಆದರೆ ಕಾರ್ಯಕ್ರಮ ಮುಂದೂಡಿಕೆಯಾಗಿರುವ ಕಾರಣ ಮೋದಿ ರಾಜಸ್ಥಾನ ಪ್ರವಾಸ ರದ್ದಾಗಿದೆ. ಸದ್ಯ ಘಟಕದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ತ್ವರಿತಗತಿಯಲ್ಲಿ ಲೋದೋಷ ಸರಿಪಡಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
79,000 ಕೋಟಿ ವೆಚ್ಚದ ಘಟಕ
ಬರೋಬ್ಬರಿ 79 ಸಾವಿರ ಕೋಟಿ ರೂಪಾಯಿ ವೆಚ್ಚದ ಘಟಕ ಇದಾಗಿದೆ. ಈ ಘಟಕದಿಂದ ರಾಜಸ್ಥಾನ ಸರ್ಕಾರಕ್ಕೆ ಬರೋಬ್ಬರಿ 5000 ಕೋಟಿ ರೂಪಾಯಿ ವಾರ್ಷಿಕ ಆದಾಯ ಸಿಗಲಿದೆ. ಇನ್ನು ತೈಲ ಆಮದಿನಲ್ಲಿ ಭಾರತಕ್ಕೆ ಹೆಚ್ಚಿನ ಉಪಯೋಗಗಳಿವೆ. ಈ ಘಟಕದಿಂದ ಮುದ್ರಾ ಬಂದರಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ.
79,000 ಕೋಟಿ ವೆಚ್ಚದ ಘಟಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

