ಲಾಠಿಚಾರ್ಜ್, ಮುಳ್ಳು ತಂತಿ, ಅಶ್ರುವಾಯು: ರಾಷ್ಟ್ರ ರಾಜಧಾನಿಗೆ ತೆರಳಲು ಮುನ್ನ ರೈತನ ಸಂಘರ್ಷ!
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿರುವ ಸಾವಿರಾರು ರೈತರನ್ನು ರಾಷ್ಟ್ರ ರಾಜಧಾನಿ ತಲುಪುವುದಕ್ಕೂ ಮುನ್ನ ತಡೆಯಲು ಭಾರೀ ತಯಾರಿ ನಡೆಸಲಾಗಿದೆ. ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. ಇನ್ನು ಕೆಲವೆಡೆ ಮುಳ್ಳು ತಂತಿ ಮೂಲಕ ಬ್ಯಾರಿಕೇಡ್ ಹಾಕಿದ್ದರೆ, ಮತ್ತೆ ಕೆಲವೆಡೆ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಹೀಗಿದ್ದರೂ ಅನೇಕ ಕಡೆ ರೈತರ ಹಾಗೂ ಪೊಲೀಸರ ನಡುವೆ ಘರ್ಷಣೆಯೂ ನಡೆದಿದೆ. ಇಲ್ಲಿದೆ ನೋಡಿ ರೈತರ ಹಾದಿಯಲ್ಲಿ ಎದುರಾದ ಸಂಕಷ್ಟಗಳು
ರೈತರು ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ತಿಂಗಳಿಗಾಗುವಷ್ಟು ದವಸ ಧಾನ್ಯ ಹಾಗೂ ಅಗತ್ಯ ವಸ್ತುಗಳೊಂದಿಗೆ ದೆಹಲಿ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಅನೇಕ ಮಂದಿ ಕಾಲ್ನಡಿಗೆಯಲ್ಲೇ ರಾಷ್ಟ್ರ ರಾಜಧಾನಿಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದ್ದಾರೆ.
ನಿನ್ನೆ ಹರ್ಯಾಣದಲ್ಲಿ ರೈತರು ತಣ್ಣೀರು ಹಾಗೂ ಅಶ್ರುವಾಯು ಎದುರಿಸಬೇಕಾಯ್ತು.
ಪೊಲೀಸರು ರೈತರನ್ನು ತಡೆಯಲು ಮರಳಿನಿಂದ ತುಂಬಿದ ಟ್ರಕ್ ಹಾಗೂ ಲಾರಿಗಳನ್ನು ಹಾಗೂ ಮುಳ್ಳು ತಂತಿಯಿಂದ ಸುತ್ತಿದ ಬ್ಯಾರಿಕೇಡ್‌ಗಳನ್ನೂ ಬಳಸಿದ್ದಾರೆ.
ಅನೇಕ ಕಡೆ ರೈತರು ಬೃಹತ್ ಬ್ಯಾರಿಕೇಡ್‌ಗಳನ್ನೂ ಸರಿಸಿ ಮುಂದುವರೆದಿದ್ದಾರೆ.
ಪೊಲೀಸರು ರಸ್ತೆಯಲ್ಲಿ ಗುಂಡಿಗಳನ್ನು ಕೊರೆದಿದ್ದಷ್ಟೇಯಲ್ಲದೇ, ದೊಡ್ಡ ದೊಡ್ಡ ಟ್ರಕ್‌ಗಳನ್ನೂ ಬ್ಯಾರಿಕೇಡ್‌ಗಳಂತೆ ಇರಿಸಿದ್ದಾರೆ.