ಕರ್ನಲ್ ಸೋಫಿಯಾ ಖುರೇಷಿ ಅವಳಿ ಸೋದರಿ ಶೈನಾ ಸಾಧನೆ ತಿಳಿದ್ರೆ ಆಶ್ಚರ್ಯ ಆಗುತ್ತೆ!
ಕರ್ನಲ್ ಸೋಫಿಯಾ ಖುರೇಷಿ ಅವರ ಅವಳಿ ಸೋದರಿ ಶೈನಾ ಸುನ್ಸಾರ ವಡೋದರಾದಲ್ಲಿ ವಂಡನ್ ವುಮೆನ್ ಎಂದೇ ಖ್ಯಾತರಾಗಿದ್ದಾರೆ. ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಶೈನಾ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
17

ಕರ್ನಲ್ ಸೋಫಿಯಾ ಖುರೇಷಿ ಅವರ ಅವಳಿ ಸೋದರಿ ಶೈನಾ ಸುನ್ಸಾರ ವಡೋದರಾದಲ್ಲಿ ವಂಡನ್ ವುಮೆನ್ ಎಂದೇ ಖ್ಯಾತರಾಗಿದ್ದಾರೆ. ಡಾ. ಶೈನಾ ಸುನ್ಸಾರಾ ಅನೇಕ ಸಾಧನೆಗಳನ್ನು ಮಾಡಿದ್ದು, ಅವುಗಳನ್ನು ಕೇಳಿದ್ರೆ ನೀವು ಖಂಡಿತ ಆಶ್ಚರ್ಯಚಕಿತರಾಗುತ್ತೀರಿ.
27
ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮಾಹಿತಿ ನೀಡಿದ ಸೋಫಿಯಾ ಖುರೇಷಿ ದೇಶದಾದ್ಯಂತ ಮುನ್ನಲೆಗೆ ಬಂದರು. ಅದರಲ್ಲೂ ಬೆಳಗಾವಿಯ ಸೊಸೆ ಎಂಬ ವಿಷಯ ತಿಳಿಯುತ್ತಲೇ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿದ್ದರು. ಗುಜರಾತ್ ನಿವಾಸಿಯಾದ ಕರ್ನಲ್ ಸೋಫಿಯಾ ಸೇನಾ ಕುಟುಂಬಕ್ಕೆ ಸೇರಿದವರು. ಸೋಫಿಯಾ ಅವರ ತಂದೆ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
37
ಸೋಫಿಯಾ ಖುರೇಷಿ ನಂತರ ಇದೀಗ ಅವರ ಅವಳಿ ಸೋದರಿ ಶೈನಾ ಸುನ್ಸಾರಾ ಕೂಡ ಬೆಳಕಿಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೈನ ಸುನ್ಸಾರಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಹಾಗಾದ್ರೆ ಶೈನಾ ಸುನ್ಸಾರಾ ಮಾಡಿದ ಸಾಧನೆಗಳು ಏನು ಗೊತ್ತಾ? ಆ ಕುರಿತ ಮಾಹಿತಿ ಇಲ್ಲಿದೆ.
47
ಶೈನಾ ಸುನ್ಸಾರರಾ ಓರ್ವ ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶೈನಾ 2018ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.2018 ರ ವಿಶ್ವಸಂಸ್ಥೆಯ ಸುಂದರಿ ಮತ್ತು ಭಾರತ ಅರ್ಥ್ ವಿಶ್ವ ಶಾಂತಿ ಪ್ರಶಸ್ತಿಯನ್ನು ಸಹ ಶೈನಾ ತಮ್ಮದಾಗಿಸಿಕೊಂಡಿದ್ದಾರೆ.
57
ಇನ್‌ಸ್ಟಾಗ್ರಾಂನಲ್ಲಿ 28 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಶೈನಾ, ತಮ್ಮ ಖಾತೆಯಲ್ಲಿ ಮಾಡೆಲಿಂಗ್ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಶೈನಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸಹೋದರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
67
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಶೈನಾ ಮಿಸ್ ಗುಜರಾತ್ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಶೈನಾ ಸುನ್ಸಾರಾ ರೈಫಲ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಶೈನಾ ಸುನ್ಸಾರ ವಡೋದರಾದ 'ವಂಡರ್ ವುಮನ್' ಎಂದು ಪ್ರಸಿದ್ಧರಾಗಿದ್ದಾರೆ.
77
ಇಷ್ಟು ಮಾತ್ರವಲ್ಲ ಗುಜರಾತ್‌ನಲ್ಲಿ 1 ಲಕ್ಷ ಮರಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಫ್ಯಾಷನ್ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಶೈನಾ ಸುನ್ಸಾರಾ 2018 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವಳಿಗಾದ್ರೂ ಸೋದರಿಯರು ತಮ್ಮದೇ ಮಾರ್ಗದಲ್ಲಿಯೇ ಅಪಾರ ಸಾಧನೆಯನ್ನು ಮಾಡಿದ್ದಾರೆ.
Latest Videos