ಸೇನೆಯ ಹೆಮ್ಮೆಯ ಮಗಳು ಕರ್ನಲ್ ಸೋಫಿಯಾ ಖುರೇಷಿ ಹಿನ್ನೆಲೆ ಏನು?
ಆಪರೇಷನ್ ಸಿಂಧೂರ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಲ್ ಸೋಫಿಯಾ ಖುರೇಷಿ, ಭಾರತೀಯ ಸೇನೆಯಲ್ಲಿ ಮಹಿಳೆಯರ ಸಾಧನೆಯ ಪ್ರತೀಕ. ಅವರ ಶಿಕ್ಷಣ, ವೃತ್ತಿಜೀವನ ಮತ್ತು ಕುಟುಂಬದ ಬಗ್ಗೆ ತಿಳಿಯಿರಿ.

ಕರ್ನಲ್ ಸೋಫಿಯಾ ಖುರೇಷಿ: ಸೇನೆಯ ಹೆಮ್ಮೆ
ದೇಶದ ಹೆಮ್ಮೆಯ ಕುವರಿ ಕರ್ನಲ್ ಸೋಫಿಯಾ ಖುರೇಷಿ. ಆಪರೇಷನ್ ಸಿಂಧೂರ್ನಲ್ಲಿ ಭಾರತದ ಧ್ವನಿಯಾಗಿ, 18 ದೇಶಗಳ ಸೈನಿಕರ 'ಎಕ್ಸರ್ಸೈಜ್ ಫೋರ್ಸ್ 18' ನೇತೃತ್ವ ವಹಿಸಿದ ಧೀರ ವನಿತೆ. ಅವರ ಸಾಧನೆಯ ಪಯಣವನ್ನು ತಿಳಿಯೋಣ ಬನ್ನಿ
ಸಿಂಧೂರ್ನಲ್ಲಿ ಸೋಫಿಯಾ ಧ್ವನಿ
ಆಪರೇಷನ್ ಸಿಂಧೂರ್ನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾರತದ ಪ್ರತಿನಿಧಿಗಳಾಗಿ ವಿಶ್ವಕ್ಕೆ ಮಾಹಿತಿ ನೀಡಿದರು.
ಸೇನೆಯಲ್ಲಿ ಮಹಿಳಾ ಶಕ್ತಿ
ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಮತ್ತು ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಒಟ್ಟಾಗಿ ಭಾರತೀಯ ಸೇನೆಯಲ್ಲಿ ಮಹಿಳೆಯರ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಯಾರು ಈ ಸೋಫಿಯಾ?
18 ದೇಶಗಳ 'ಫೋರ್ಸ್ 18' ಸೈನಿಕ ಕಾರ್ಯಾಚರಣೆಯಲ್ಲಿ ಭಾರತವನ್ನು ಮುನ್ನಡೆಸಿದ ಏಕೈಕ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ.
ಸೋಫಿಯಾ: ವಿದ್ಯೆ & ವೃತ್ತಿ
ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಸೋಫಿಯಾ ಖುರೇಶಿ, ಸೇನೆಯ ಸಿಗ್ನಲ್ ಕೋರ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶ್ವಮಟ್ಟದಲ್ಲಿ ಸೋಫಿಯಾ
ಕಾಂಗೋದಲ್ಲಿ 6 ವರ್ಷಗಳ ಕಾಲ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿರುವ ಸೋಫಿಯಾ ಖುರೇಶಿ, ಭಾರತದ ನಾರಿಶಕ್ತಿಯ ಅನಾವರಣ ಮಾಡಿದ್ದಾರೆ.
ಸೋಫಿಯಾ ಕುಟುಂಬ & ಸೇನೆ
ಸೋಫಿಯಾ ಖುರೇಶಿ ಅವರ ತಾತ ಸೇನೆಯಲ್ಲಿದ್ದರು, ಪತಿ ಮೆಕ್ಯಾನೈಜ್ಡ್ ಇನ್ಫ್ಯಾಂಟ್ರಿಯ ಅಧಿಕಾರಿ. ದೇಶಸೇವೆ ಅವರ ರಕ್ತದಲ್ಲಿದೆ.