ಶೀಘ್ರದಲ್ಲೇ ಜಂತರ್ ಮಂತರ್ ಸೀಸನ್ 2: ನಿಗೂಢ ಹೋರಾಟದ ಮುನ್ಸೂಚನೆ ನೀಡಿದ ದೀಪ್ಕೆ
Abhijeet Dipke: ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ, 'ಜಂತರ್ ಮಂತರ್ ಹೋರಾಟದ 2ನೇ ಸೀಸನ್' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಹೋರಾಟದ ಸ್ವರೂಪವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ದೇಶವ್ಯಾಪಿ 'ಲಿಸನಿಂಗ್ ಟೂರ್' ನಡೆಸುವುದಾಗಿ ತಿಳಿಸಿದ್ದಾರೆ.

ಹೋರಾಟದ 2ನೇ ಸೀಸನ್ ಅತಿಶೀಘ್ರ ಆರಂಭ
‘ಸಚಿವರ ರಾಜೀನಾಮೆಗೆ ಕಾರಣವಾಗಿದ್ದ ಜಂತರ್ ಮಂತರ್ ಹೋರಾಟದ 2ನೇ ಸೀಸನ್ ಅತಿಶೀಘ್ರ ಆರಂಭವಾಗಲಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಆದರೆ ಹೋರಾಟದ ಸ್ವರೂಪದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಜಂತರ್ ಮಂತರ್ ಸೀಸನ್ 2
ದೆಹಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಜಂತರ್ ಮಂತರ್ ಸೀಸನ್ 2 ಯಾವಾಗ ಶುರುವಾಗುತ್ತದೆ? ಎಂದು ಸುಮಾರು ಜನ ಇನ್‌ಸ್ಟಾಗ್ರಾಂನಲ್ಲಿ ಕೇಳುತ್ತಿದ್ದಾರೆ. ಅದು ಆದಷ್ಟು ಬೇಗ ಆರಂಭವಾಗಲಿದೆ’ ಎಂದು ತಿಳಿಸಿದರು. ಆದರೆ ಯಾವ ವಿಷಯವನ್ನೆತ್ತಿಕೊಂಡು ಪ್ರತಿಭಟನೆ ಆರಂಭಿಸಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಸೀಸನ್ 2
ಇದೇ ವೇಳೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ‘ಸೀಸನ್ 2 ಎಂದರೆ ದೆಹಲಿಗೆ ಬಂದು ಪ್ರತಿಭಟಿಸುತ್ತೇವೆ ಎಂದಲ್ಲ. ಈಗಾಗುತ್ತಿರುವುದೇ ಸೀಸನ್ 2’ ಎಂದಿದ್ದಾರೆ. ಜಾರ್ಖಂಡ್ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ರೀತಿ ಹೇಳಿರಬಹುದು ಎನ್ನಲಾಗುತ್ತಿದೆ. ಜತೆಗೆ, ಜನರ ಸಮಸ್ಯೆಗಳಿಗೆ ಕಿವಿಯಾಗಲು ದೇಶವ್ಯಾಪಿ ‘ಲಿಸನಿಂಗ್ ಟೂರ್’ ಮಾಡುವುದಾಗಿಯೂ ತಿಳಿಸಿದರು.
ಪೊಲೀಸರಿಂದ ಬೆದರಿಕೆ
ಇನ್ನು ದೀಪ್ಕೆ ಅವರು, ‘ದಿಲ್ಲಿಯಲ್ಲಿ ನಮಗೆ ಸಭೆ ನಡೆಸಲು ಸ್ಥಳಾವಕಾಶ ನೀಡುತ್ತಿಲ್ಲ. ನಮಗೆ ಸಭೆಗೆ ಅವಕಾಶ ನೀಡದಂತೆ ಸಭಾಂಗಣಗಳ ಸಿಬ್ಬಂದಿಗೆ ಪೊಲೀಸರು ಬೆದರಿಸುತ್ತಿದ್ದಾರೆ’ ಎಂದಿದ್ದಾರೆ. ಸೋಮವಾರವಷ್ಟೇ ದೀಪ್ಕೆ, ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಆಂದೋಲನ ಶುರು ಮಾಡುವುದಾಗಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

