MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • 2008 ರಿಂದಲೂ ಪ್ರತಿದಿನ ಇದು ಅಪ್ಪಳಿಸುತ್ತಿದೆ! ಅಸಲಿಗೆ ಭೂಮಿಗೆ ಏನಾಗುತ್ತಿದೆ?

2008 ರಿಂದಲೂ ಪ್ರತಿದಿನ ಇದು ಅಪ್ಪಳಿಸುತ್ತಿದೆ! ಅಸಲಿಗೆ ಭೂಮಿಗೆ ಏನಾಗುತ್ತಿದೆ?

Climate Change Crisis Heat Waves Melting Himalayas Drought: ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಹೀಟ್ ವೇವ್‌ನಿಂದ ಭೂಮಿಯ ಮೇಲಾಗುತ್ತಿರುವ ಗಂಭೀರ ಪರಿಣಾಮಗಳು ಹಾಗೂ ಭವಿಷ್ಯದ ಅಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿ.

2 Min read
Author : Ravi Janekal
Published : Oct 21 2026, 01:33 PM IST
Share this Photo Gallery
  • FB
  • TW
  • Linkdin
  • Whatsapp
15
2008 ರಿಂದಲೂ ಭೂಮಿಗೆ ಅಪ್ಪಳಿಸುತ್ತಿದೆ ಅಲೆ!
Image Credit : AI

2008 ರಿಂದಲೂ ಭೂಮಿಗೆ ಅಪ್ಪಳಿಸುತ್ತಿದೆ ಅಲೆ!

ಕಳೆದೆರಡು ದಶಕಗಳಿಂದ ದಿನೇದಿನೇ ಭೂಮಿಯಲ್ಲಿ ವಿಚಿತ್ರ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಒಂದು ಕಡೆ ವಿವಿಧ ರೀತಿಯಿಂದ ವಾಯು, ಜಲ, ನೆಲ, ಮಾಲಿನ್ಯದಿಂದ ಭೂಮಿಯ ಪರಿಸರವು ತೀವ್ರ ಬಿಸಿಯಾಗುತ್ತಿದೆ. ಅಲ್ಲದೆ ಇದು ಪ್ರತಿವರ್ಷವೂ ಹೆಚ್ಚುತ್ತಲೇ ಸಾಗಿದೆ. ಇನ್ನೊಂದೆಡೆ ನೇಪಾಳ, ಅಸ್ಸಾಂನಲ್ಲಿ ಸಂಭವಿಸಿದ ಭಾರೀ ಸ್ಫೋಟ ಪ್ರವಾಹವನ್ನು ನಾವು ಇತ್ತೀಚಿಗೆ ನೋಡಲಾರಂಭಿಸಿದ್ದೇವೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಹಿಂದಿನಿಂದಲೂ ಹಿಮಾಲಯ ಕರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳು ಈಗ ಇನ್ನೂ ಗಂಭೀರ ರೂಪಗಳಲ್ಲಿ ಮುನ್ನೆಲೆಗೆ ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಭೂಮಿಯ ಹವಾಮಾನ ಬದಲಾಗುತ್ತಿರುವ ವೇಗ ಹೇಗಿದೆ ಗೊತ್ತಾ?
Image Credit : AI

ಭೂಮಿಯ ಹವಾಮಾನ ಬದಲಾಗುತ್ತಿರುವ ವೇಗ ಹೇಗಿದೆ ಗೊತ್ತಾ?

ಇದು ನಿನ್ನೆ ಮೊನ್ನೆಯಿಂದ ಸಂಭವಿಸುತ್ತಿರುತ್ತಿರುವುದು ಅಲ್ಲ, ಜುಲೈ 6, 2008 ರಿಂದ ಭೂಮಿಯ ಮೇಲೆ ಪ್ರತಿದಿನ ಕನಿಷ್ಠ ಒಂದು ಶಾಖದ ಬಿರುಗಾಳಿ ರೂಪುಗೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ಸರಣಿಯು 18 ವರ್ಷಗಳಿಂದಲೂ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ. ಭೂಮಿಯ ಹವಾಮಾನ ಬದಲಾಗುತ್ತಿರುವ ರೀತಿ ವೇಗ ನೋಡಿದರೆ ಮುಂದಿನ ದಿನಗಳು ಮನುಷ್ಯರು ಬದುಕುವುದು ಸವಾಲಾಗಿ ಪರಿಣಮಿಸಲಿದೆ.

Related Articles

Related image1
Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?
Related image2
ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ 8 ನಿಮಿಷಗಳ ನಂತರ ಭೂಮಿಗೆ ಏನಾಗಲಿದೆ? ಭೌತಶಾಸ್ತ್ರದ ನಿಯಮ ಏನು ಹೇಳುತ್ತದೆ?
35
ಏನಿದು ಹೀಟ್ ವೇವ್?
Image Credit : AI

ಏನಿದು ಹೀಟ್ ವೇವ್?

ಏನಿದು ಹೀಟ್ ವೇವ್?

ಈ ಬಾರಿ ಭಾರತದಾದ್ಯಂತ ಒಟ್ಟಾರೆ ಮುಂಗಾರು ಮಳೆಯೇ ಕುಸಿದು, ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ, ಮಳೆಗಾಲದಲ್ಲಿ ಬೇಸಿಗೆಯಂತಹ ಬಿಸಿಲು , ಉಷ್ಣ ಬಿರುಗಾಳಿ, ಇದು ಕೇವಲ ನಗರದಲ್ಲಿನ ತಾಪಮಾನ ಏರಿಕೆಯಲ್ಲ, ಜಾಗತಿಕವಾಗಿಯೂ ಭೂಮಿ ತೀವ್ರಗತಿಯಲ್ಲಿ ಬಿಸಿಯಾಗುತ್ತಿದೆ. ಸಮುದ್ರಗಳೇ ಕುದಿಯುತ್ತಿವೆ. ಹಿಮಾಲಯದ ಮಂಜುಗಡ್ಡೆಯೂ ತೀವ್ರವಾಗಿ ಕರುಗುತ್ತಿವೆ.

ಉಷ್ಣಾಂಶ ಹೆಚ್ಚಳ, ಹೀಟ್ ವೇವ್, ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ರಾತ್ರಿಯ ತಾಪಮಾನವು ಕಡಿಮೆಯಾಗುವುದಿಲ್ಲ. ಇದರರ್ಥ ದೇಹ ಹಗಲಿನ ಶಾಖದಿಂದ ಚೇತರಿಸಿಕೊಳ್ಳಲು ಕೂಡ ಅವಕಾಶ ಇಲ್ಲದಂತಾಗಿದೆ. ಹಗಲು ರಾತ್ರಿ ಶಾಖದ ಬಿಸಿಗೆ ಹೃದಯದ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ. ಪಳೆಯುಳಿಕೆ ಇಂಧನಗಳ ಹೆಚ್ಚಿದ ಬಳಕೆ, ಕಲ್ಲಿದ್ದಲು ಮತ್ತು ತೈಲದ ದಹನ, ಅರಣ್ಯನಾಶ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದಾಗಿ ಭೂಮಿಯ ಉಷ್ಣತೆಯು ಇನ್ನಷ್ಟು ಹೆಚ್ಚುತ್ತಿರುವ ಬಗ್ಗೆ ಹವಾಮಾನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

45
ಕೃಷಿ, ಕುಡಿಯುವ ನೀರು, ಆರೋಗ್ಯ.. ಆತಂಕ
Image Credit : AI

ಕೃಷಿ, ಕುಡಿಯುವ ನೀರು, ಆರೋಗ್ಯ.. ಆತಂಕ

ಬೆಂಗಳೂರಿನಂತಹ ಮಹಾನಗರ ಬೆಳೆದಂತೆಲ್ಲ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುವುದು ಮರಗಳಿದ್ದ ಜಾಗದಲ್ಲಿ ಬೃಹತ್ ಕಾಂಕ್ರಿಟ್ ಕಟ್ಟಡಗಳು, ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ರಾತ್ರಿ ಕೂಡ ಶಾಖದ ಪರಿಣಾಮ ಹೆಚ್ಚಾಗಿ ಕಂಡುಬರುತ್ತೆ. ಇದರಿಂದ ಹಿರಿಯ ನಾಗರಿಕರು, ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ.

ದಿನೇದಿನೆ ಹೆಚ್ಚುತ್ತಿರುವ ಶಾಖದ ಪರಿಣಾಮದಿಂದಾಗಿ ಮಳೆಯ ಕೊರತೆಯಾಗುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದೆ ಕೃಷಿ ಬೆಳೆಗಳಿಗೆ ನೀರಿಲ್ಲದೆ ರೈತರ ಫಸಲು ಒಣಗಿ ಹಾಳಾಗುತ್ತಿವೆ. ಇದರ ಪರಿಣಾಮ ಆಹಾರದ ಕೊರತೆ ಬೆಲೆಗಳು ಏರಿಕೆಯಾಗುತ್ತಿದೆ. ಇತ್ತ ಕೃಷಿ ನಾಶದಿಂದ ಆಹಾರದ ಕೊರತೆ, ಕುಡಿದು ಬದುಕೋಣವೆಂದರೆ ಜಲಮೂಲಗಳೇ ಖಾಲಿ. ಹೀಗಾದಾಗ ಬದುಕು ಅಸಹನೀಯವೆನಿಸುತ್ತಿದೆ.

55
ತಾಪಮಾನ ಏರಿಕೆ ಮಂಜುಗಡ್ಡೆ ಕರಗುತ್ತಿದೆ.
Image Credit : AI

ತಾಪಮಾನ ಏರಿಕೆ ಮಂಜುಗಡ್ಡೆ ಕರಗುತ್ತಿದೆ.

ಕಳೆದೆರಡು ದಶಕಗಳಿಂದ ಭೂಮಿ ತೀವ್ರವಾಗಿ ಬದಲಾಗುತ್ತಿದ್ದರೂ ಎಚ್ಚೆತ್ತುಕೊಳ್ಳದಿದ್ದರೆ, ಏರುತ್ತಿರುವ ತಾಪಮಾನವನ್ನು ತಡೆಗಟ್ಟಲು ಮುಂದಾಗದಿದ್ದರೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡದಿದ್ದರೆ, ಮರಗಳನ್ನು ಬೆಳೆಸದಿದ್ದರೆ, ನವೀಕರಿಸಬಹುದಾದ ಶಕ್ತಿಯನ್ನು ಬಳಸದಿದ್ದರೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರೆ ಇನ್ನು ಕೆಲವು ವರ್ಷಗಳಲ್ಲಿ ಬದುಕುವದು ಕಷ್ಟವಾದೀತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭೂಮಿ
ಹವಾಮಾನ ಬದಲಾವಣೆ
ಸುದ್ದಿ
 

Latest Videos
Recommended Stories
Recommended image1
ಎರಡೇ ದಿನಕ್ಕೆ ಎದೆ ಮೇಲಿನ ಗುಂಡಿನ ಗಾಯವೂ ಮಾಯ? ಬ್ಯಾಂಡೇಜ್​ ರಹಿತ ನಟ ಟೈಗರ್​ ಶ್ರಾಫ್​ ಫೋಟೋಸ್​ ವೈರಲ್​
Recommended image2
ರೀಲ್ಸ್​​ನಲ್ಲಿ ಮೈಮರೆತ ದಂಪತಿ: ಸಮುದ್ರದೊಳಗೆ ಮಗು ಹೋದ್ರೂ ಪರಿವೇ ಇಲ್ಲ! ಶಾಕಿಂಗ್​ ವಿಡಿಯೋ ವೈರಲ್​
Recommended image3
ಪಂಜಾಬ್ ಸಿಎಂ ಭಗವಂತ್ ಮಾನ್ ದೆಹಲಿಯಲ್ಲಿ ಪೊಲೀಸರ ವಶಕ್ಕೆ, ಆಪ್ ಬಾಂಬ್‌ಗೆ ಕೋಲಾಹಲ
Related Stories
Recommended image1
Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?
Recommended image2
ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ 8 ನಿಮಿಷಗಳ ನಂತರ ಭೂಮಿಗೆ ಏನಾಗಲಿದೆ? ಭೌತಶಾಸ್ತ್ರದ ನಿಯಮ ಏನು ಹೇಳುತ್ತದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved