MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • Ayodhya Ground Report: ರಾಮರಾಜ್ಯದಂತೆ ಸಿಂಗಾರಗೊಳ್ಳುತ್ತಿದೆ ಶ್ರೀರಾಮನ ಅಯೋಧ್ಯೆ

Ayodhya Ground Report: ರಾಮರಾಜ್ಯದಂತೆ ಸಿಂಗಾರಗೊಳ್ಳುತ್ತಿದೆ ಶ್ರೀರಾಮನ ಅಯೋಧ್ಯೆ

ಅಯೋಧ್ಯೆಗೆ ಶ್ರೀರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠಾಪನೆ ದಿನ ಹತ್ತಿರವಾಗುತ್ತಿದೆ. ಇದಕ್ಕಾಗಿ ಇಡೀ ಅಯೋಧ್ಯೆ ನಗರವನ್ನು ರಾಮರಾಜ್ಯದ ರೀತಿಯಲ್ಲಿ ಸಿಂಗಾರ ಮಾಡಲಾಗುತ್ತಿದೆ. ಅಯೋಧ್ಯೆಗೆ ಒಳಹೊಕ್ಕ ಬೆನ್ನಲ್ಲಿಯೇ ಸನಾತನ ಸಂಸ್ಕೃತಿ ಕಣ್ಣಿಗೆ ರಾಚಲಿದೆ. 

2 Min read
Santosh Naik
Published : Dec 20 2023, 06:20 PM IST| Updated : Dec 20 2023, 06:21 PM IST
Share this Photo Gallery
  • FB
  • TW
  • Linkdin
  • Whatsapp
16
ಧರ್ಮದ ಹಾದಿಯಲ್ಲಿ ಬೆಳಗಲು ಸೂರ್ಯಸ್ತಂಭ

ಧರ್ಮದ ಹಾದಿಯಲ್ಲಿ ಬೆಳಗಲು ಸೂರ್ಯಸ್ತಂಭ

ಲಕ್ನೋ-ಗೋರಖ್‌ಪುರ ಹೆದ್ದಾರಿಯಿಂದ ಅಯೋಧ್ಯೆಗೆ ಪ್ರವೇಶಿಸಿದ ತಕ್ಷಣ ರಾಮನಗರಿಯಲ್ಲಿ ಸಮರೋಪಾದಿಯಲ್ಲಿಕಾಮಗಾರಿ ನಡೆಯುತ್ತಿರುವ ದೃಶ್ಯ ಗೋಚರಿಸುತ್ತದೆ. ಸಾಕೇತ್ ಪೆಟ್ರೋಲ್ ಪಂಪ್‌ನಿಂದ ಲತಾ ಮಂಗೇಶ್ಕರ್ ಚೌಕ್‌ವರೆಗಿನ ರಸ್ತೆಯನ್ನು ಧಾರ್ಮಿಕ ಮಾರ್ಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 2 ಕಿಲೋಮೀಟರ್ ಈ ಮಾರ್ಗವು ಮೊದಲು ಎರಡು ಲೇನ್ ಆಗಿತ್ತು. ಈಗ ಅದನ್ನು ನಾಲ್ಕು ಪಥಗಳಾಗಿ ಪರಿವರ್ತಿಸಲಾಗಿದೆ. ಡಿಎಂ ನಿತೀಶ್ ಕುಮಾರ್ ಪ್ರಕಾರ, 30 ಸ್ಥಳಗಳಲ್ಲಿ ಸಮಾನ ಅಂತರದಲ್ಲಿ ಸೂರ್ಯ ಕಂಬಗಳನ್ನು ಸ್ಥಾಪಿಸಲಾಗುತ್ತಿದೆ.


 

26
ಗೋಡೆಗಳ ಮೇಲೆ ರಾಮಾಯಣದ ಮ್ಯೂರಲ್‌ ಕಲಾಕೃತಿಗಳು

ಗೋಡೆಗಳ ಮೇಲೆ ರಾಮಾಯಣದ ಮ್ಯೂರಲ್‌ ಕಲಾಕೃತಿಗಳು

ರಸ್ತೆಗಳ ಉದ್ದಕ್ಕೂ ಸ್ಥಾಪಿಸಲಾದ ಸೂರ್ಯ ಸ್ತಂಭಗಳು ಭಗವಾನ್ ರಾಮನು ಸೂರ್ಯವಂಶಿಯ ಸಂಕೇತವನ್ನು ಪ್ರತಿನಿಧಿಸುತ್ತವೆ. ಜಿಲ್ಲಾಡಳಿತದ ಪ್ರಕಾರ ಧರ್ಮ ಪಥದ ರಸ್ತೆ ಬದಿಯಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ರಾಮಾಯಣ ಕಾಲದ ಘಟನೆಗಳನ್ನು ತೋರಿಸಲಾಗುತ್ತದೆ. ಗೋಡೆಗಳನ್ನು ಟೆರಾಕೋಟಾ ಸೂಕ್ಷ್ಮ ಮಣ್ಣಿನ ಮ್ಯೂರಲ್ ಕಲಾಕೃತಿಗಳಿಂದ ಅಲಂಕರಿಸಲಾಗುವುದು. ರಾಮಚರಿತ ಮಾನಸದಲ್ಲಿ ತುಳಸಿದಾಸರು ಲಂಕಾ ವಿಜಯದ ನಂತರ ಭಗವಾನ್ ಶ್ರೀರಾಮನು ಅಯೋಧ್ಯೆಗೆ ಆಗಮಿಸಿದ ನಂತರ ಅಯೋಧ್ಯೆಯನ್ನು ರಾಮರಾಜ್ಯದ ರೀತಿಯಲ್ಲಿ ಅಲಂಕರಿಸಲಾಗಿತ್ತು. ಅದೇ ರೀತಿ ಜನವರಿ 22ರಂದು ರಾಮಲಲ್ಲಾ ಪಟ್ಟಾಭಿಷೇಕಕ್ಕೂ ಮುನ್ನ ಇಡೀ ಅಯೋಧ್ಯೆಯನ್ನು ಅಲಂಕರಿಸಲಾಗುತ್ತಿದೆ.

36
ರಸ್ತೆಯ ಗೋಡೆಗಳ ಮೇಲೆ ರಾಮಾಯಣ ಕಾಲದ ಘಟನೆಗಳ ಸೃಷ್ಟಿ

ರಸ್ತೆಯ ಗೋಡೆಗಳ ಮೇಲೆ ರಾಮಾಯಣ ಕಾಲದ ಘಟನೆಗಳ ಸೃಷ್ಟಿ

ರಾಮಮಂದಿರದ ಮುಖ್ಯ ಪ್ರವೇಶ ರಸ್ತೆಯನ್ನು ಶ್ರೀರಾಮ ಜನ್ಮಭೂಮಿ ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. 90 ಅಡಿ ಅಗಲದ ರಸ್ತೆಯಲ್ಲಿ ದೀಪಾಲಂಕಾರ ಹಾಗೂ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದೆ. ಭಕ್ತರ ಆಗಮನವನ್ನು ಗಮನದಲ್ಲಿಟ್ಟುಕೊಂಡು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯ ಗೋಡೆಗಳನ್ನು ರಾಮಾಯಣ ಕಾಲದ ಕಲಾಕೃತಿಗಳಿಂದ ಅಲಂಕರಿಸಲಾಗುತ್ತಿದೆ.

46
ಲತಾ ಮಂಗೇಶ್ಕರ್ ಚೌಕ್‌ನಲ್ಲಿ 40 ಅಡಿ ಉದ್ದದ ವೀಣೆ

ಲತಾ ಮಂಗೇಶ್ಕರ್ ಚೌಕ್‌ನಲ್ಲಿ 40 ಅಡಿ ಉದ್ದದ ವೀಣೆ

ಧರ್ಮಪಥದ ಮುಂದೆ ಲತಾ ಮಂಗೇಶ್ಕರ್ ಚೌಕ್‌ನಲ್ಲಿ ನಿರ್ಮಿಸಲಾದ 40 ಅಡಿ ಉದ್ದದ ವೀಣೆ ಜನರನ್ನು ಆಕರ್ಷಿಸುತ್ತದೆ. ಮೊದಲು ಇಂಟರ್‌ಸೆಕ್ಷನ್‌ನ ಹೆಸರು ನಯಾ ಘಾಟ್ ಆಗಿತ್ತು. ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ನೆನಪಿಗಾಗಿ ಈ ಇಂಟರ್‌ಸೆಕ್ಷನ್‌ಗೆ ಅವರ ಹೆಸರು ಇಡಲಾಗಿದೆ. ಈ ಇಂಟರ್‌ಸೆಕ್ಷನ್‌ಅನ್ನು 100 ಅಡಿಗಳಿಗೆ ವಿಸ್ತರಿಸಲಾಗಿದೆ.

56
ಕಟ್ಟಡಗಳನ್ನು ಒಂದೇ ವಿನ್ಯಾಸ ಮತ್ತು ಬಣ್ಣದಲ್ಲಿ ಚಿತ್ರಿಸಲಾಗುತ್ತಿದೆ

ಕಟ್ಟಡಗಳನ್ನು ಒಂದೇ ವಿನ್ಯಾಸ ಮತ್ತು ಬಣ್ಣದಲ್ಲಿ ಚಿತ್ರಿಸಲಾಗುತ್ತಿದೆ

ನಯಾಘಾಟ್‌ನಿಂದ ಸಹದತ್‌ಗಂಜ್‌ಗೆ ಹೋಗುವ ರಸ್ತೆಗೆ ರಾಮಪಥ ಎಂದು ಹೆಸರಿಸಲಾಗಿದೆ. ಈ ರಸ್ತೆ 13 ಕಿಲೋಮೀಟರ್ ಉದ್ದವಿದೆ. ಈ ಹಿಂದೆ ಈ ರಸ್ತೆ ಎರಡು ಪಥಗಳಾಗಿತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಾರೆ. ಈಗ ಅದರ ಜಾಗದಲ್ಲಿ 40 ಅಡಿ ಅಗಲದ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿರುವ ಸಂಸ್ಥೆಗಳು, ಕಟ್ಟಡಗಳು ಮತ್ತು ಅಂಗಡಿಗಳಿಗೆ ಒಂದೇ ವಿನ್ಯಾಸ ಮತ್ತು ಬಣ್ಣದಲ್ಲಿ ಬಣ್ಣ ಬಳಿಯಲಾಗುತ್ತಿದೆ. ಡಿವೈಡರ್ ಮೇಲೆ ಸಸಿಗಳನ್ನು ನೆಡಲಾಗುತ್ತಿದೆ. ಬಸ್ ನಿಲ್ದಾಣಗಳನ್ನೂ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: Ayodhya Ground Report: ರಾಮಲಲ್ಲಾನ ಸಾರ್ವಜನಿಕ ದರ್ಶನ ಯಾವಾಗ ಆರಂಭ? ಇಲ್ಲಿದೆ ಡೀಟೇಲ್ಸ್‌

66
ಅಯೋಧ್ಯೆಯನ್ನು ಪ್ರಾಚೀನ ಪ್ರಾಮುಖ್ಯತೆಯ ಸಂಕೇತಗಳಿಂದ ಅಲಂಕರಿಸಲಾಗುತ್ತಿದೆ

ಅಯೋಧ್ಯೆಯನ್ನು ಪ್ರಾಚೀನ ಪ್ರಾಮುಖ್ಯತೆಯ ಸಂಕೇತಗಳಿಂದ ಅಲಂಕರಿಸಲಾಗುತ್ತಿದೆ

ರಾಮನಗರಿಯ ಪುರಾತನ ಕೊಳಗಳು ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅವುಗಳಿಗೂ ಅಲಂಕಾರ ಮಾಡಲಾಗುತ್ತಿದೆ. ಜಿಲ್ಲಾಡಳಿತದ ಪ್ರಕಾರ ನಯಾಘಾಟ್‌ನಲ್ಲಿರುವ ರಾಮಕಥಾ ವಸ್ತುಸಂಗ್ರಹಾಲಯವನ್ನು ಸುಂದರಗೊಳಿಸಲಾಗುತ್ತಿದೆ. ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ರಾಮ್ ಕಿ ಪೌರಿಯನ್ನು ಸ್ವಚ್ಛಗೊಳಿಸಲಾಗಿದೆ. ಪಂಪಿಂಗ್ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಪ್ರತಿದಿನ ಸಂಜೆ, ಲೇಸರ್ ಶೋ ಮೂಲಕ ರಾಮ್ ಕಥಾ ಪ್ರಸ್ತುತಪಡಿಸಲಾಗುತ್ತದೆ. ರಾಮನಗರಿಯ 37 ಪುರಾತನ ದೇವಾಲಯಗಳನ್ನೂ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಯೋಧ್ಯೆಯನ್ನು ಪ್ರಾಚೀನ ಪ್ರಾಮುಖ್ಯತೆಯ ಸಂಕೇತಗಳಿಂದ ಅಲಂಕರಿಸಲಾಗುತ್ತಿದೆ. ಇದರಿಂದ ಭಕ್ತರು ಅಯೋಧ್ಯೆಗೆ ಪ್ರವೇಶಿಸಿದ ಕೂಡಲೇ ರಾಮರಾಜನ ಉಪಸ್ಥಿತಿಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: Ayodhya Ground Report: 'ವಿಐಪಿ ಆಗಿ ಬರಬೇಡಿ, ಎಲ್ಲರೂ ಭಕ್ತರಾಗಿ ಬನ್ನಿ..' ಆಹ್ವಾನ ಪತ್ರಿಕೆಯಲ್ಲಿದೆ ವಿಶೇಷ ಅಂಶ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಯೋಧ್ಯೆ
ಉತ್ತರ ಪ್ರದೇಶ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved