ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ
ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ, ಕಾಮಕಾಂಡ ಗುರೂಜಿ ಪುತ್ರನ ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಇದೀಗ ಕೆಲ ಮಾಹಿತಿಗಳು ಹೊರಬಂದಿದೆ.

ಮಹಿಳಾ ಪೊಲೀಸ್ ಅಧಿಕಾರಿಯತ್ತ ತನಿಖೆ
100ಕ್ಕೂ ಹೆಚ್ಚು ಮಹಿಳೆಯನ್ನು ಆಧ್ಯಾತ್ಮ, ಪೂಜೆ ಹೆಸರಿನಲ್ಲಿ ಬಳಸಿಕೊಂಡ ರಾಸಲೀಲೆ ಗುರೂಜಿ ಅಶೋಕ್ ಖಾರಟ್ ಕಾಮಕಾಂಡಗಳು ಒಂದೊಂದಾಗಿ ಹೊರಬರುತ್ತಿದೆ. ಬಂಧನದ ಬಳಿಕ ಪ್ರತಿಷ್ಠಿತ ವ್ಯಕ್ತಿಗಳ ಜೊತೆ ಸಂಪರ್ಕವಿರುವುದು ಬಹಿರಂಗವಾಗಿತ್ತು. ಈ ಪೈಕಿ ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ರಾಜೀನಾಮೆ ನೀಡಿದ್ದರು. ಇದೀಗ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್ ಪತ್ತೆಯಾಗಿದೆ.
ಮಹಿಳಾ ಪೊಲೀಸ್ ಅಧಿಕಾರಿ ನೆರವು
ಅಶೋಕ್ ಖಾರಟ್ ಇಷ್ಟು ರಾಜಾರೋಶವಾಗಿ ಅಕ್ರಮ ನಡೆಸಲು, ಮಹಿಳೆಯರನ್ನು ಬಳಸಿಕೊಳ್ಳಲು ನಾಸಿಕ್‌ನಲ್ಲಿ ಕಾರ್ಯನಿರ್ವಹಿಸಿದ ಮಹಿಳಾ ಅಧಿಕಾರಿ ಕಾರಣವಾಗಿದ್ದಾರೆ ಅನ್ನೋ ಮಾಹಿತಿಯೂ ಹೊರಬಂದಿದೆ. ಈ ಮಹಿಳಾ ಅಧಿಕಾರಿಯ ಆತ್ಮೀಯತೆಯಿಂದ ಅಶೋಕ್ ಖಾರಟ್ ಹಲವು ಅಕ್ರಮ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ತನಿಖೆ ರೇಡಾರ್‌ನಲ್ಲಿ ಮಹಿಳಾ ಅಧಿಕಾರಿ
ತನಿಖೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ನೆರವು ಬಹಿರಂಗವಾಗುತ್ತಿದ್ದಂತೆ ಎಸ್ಐಟಿ ಪೊಲೀಸ್ ಅಧಿಕಾರಿಗಳ ತಂಡ ಇದೀಗ ಈ ಅಧಿಕಾರಿ ಮೇಲೆ ಕಣ್ಣಿಟ್ಟಿದ್ದಾರೆ. ಪೂರಕ ದಾಖಲೆ, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಅಶೋಕ್ ಖಾರಟ್ ತನಿಖೆಯಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಪೊಲೀಸ್ ವರ ವಕೀಲರು ನ್ಯಾಯಾಲದಲ್ಲೂ ಇದೇ ಮಾಹಿತಿ ನೀಡಿದ್ದಾರೆ. ತನಿಖೆಗೆ ಸಹಕರಿಸುತಿಲ್ಲ ಅನ್ನೋ ಮಾತುಗಳು ಕೋರ್ಟ್‌ನಲ್ಲೂ ಉಲ್ಲೇಖವಾಗಿದೆ.
ಅರೆಸ್ಟ್ ಆಗಿರೋ ಪುತ್ರನಿಂದ ಸ್ಫೋಟಕ ಮಾಹಿತಿ
ಅಶೋಕ್ ಖಾರಟ್ ಅರೆಸ್ಟ್ ಬೆನ್ನಲ್ಲೇ ಅಶೋಕ್ ಖಾರಟ್ ಪುತ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪತ್ನಿ ತಲೆಮರೆಸಿಕೊಂಡಿದ್ದಾರೆ. ಪುತ್ರನ ವಿಚಾರಣೆ ವೇಳೆ ಕೆಲ ಮಾಹಿತಿ ಬಹಿರಂಗವಾಗಿದೆ. ಪ್ರತಿ ದಿನ ಮನೆಗೆ ಕಂತೆ ಕಂತೆ ಹಣ ಬರುತ್ತಿತ್ತು. ಊಹಿಸಲು, ಎಣಿಸಲು ಸಾಧ್ಯವಾಗದಷ್ಟು ಹಣವಿತ್ತು ಎಂದು ಪುತ್ರ ವಿಚಾರಣೆಯಲ್ಲಿ ಹೇಳಿದ್ದಾರೆ.
ಇಡಿ ತನಿಖೆಗೆ ಆದೇಶಿಸಿದ ಸಿಎಂ
ಅಶೋಕ್ ಖಾರಟ್ ಆಸ್ತಿ 1000ಕೋಟಿ ರೂಪಾಯಿಗೂ ಅಧಿಕ. ಇತ್ತ ಪುತ್ರನ ಹೇಳಿಕೆಗಳ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಡಿ ತನಿಖೆಗೆ ಆದೇಶಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಆರೋಪಗಳಿರುವ ಕಾರಣ ಇಡಿ ತನಿಖೆಗೆ ಸೂಚಿಸಿದ್ದಾರೆ. ಇತ್ತ ಎಸ್ಐಟಿ ಅಧಿಕಾರಿಗಳ ಸತತ ವಿಚಾರಣೆಗೆ ಅಶೋಕ್ ಖರಾಟ್ ಬಳಲಿ ಬೆಂಡಾಗಿ ಹೋಗಿದ್ದಾರೆ.
ವಿಡಿಯೋದಿಂದ ಮಹಿಳೆಯರಿಗೆ ಸಂಕಷ್ಟ
ಅಶೋಕ್ ಖಾರಟ್ ಜೊತೆ ಟೇಬಲ್ ಹಂಚಿಕೊಂಡ ಹಲವು ಮಹಿಳೆಯರ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಡನಿಗೆ ಒಂದು ಮಾತು ಹೇಳದೆ ಸ್ವಾಮೀಜಿ ಜೊತೆ ಚಕ್ಕಂದ ಆಡಲಾಗಿದೆ ಎಂದು ಮಹಿಳೆಯರ ವಿರುದ್ದ ಗಂಡಂದಿರು ರಂಪಾಟ ಮಾಡಿದ ಘಟನೆಗಳು ನಡೆದಿದೆ.
ವಿಡಿಯೋದಿಂದ ಮಹಿಳೆಯರಿಗೆ ಸಂಕಷ್ಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
