MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಪಾಕಿಸ್ತಾನವನ್ನು ಮತ್ತೆ FATF ಬೂದು ಪಟ್ಟಿಗೆ ಸೇರಿಸಲು ಓವೈಸಿ ಒತ್ತಾಯ

ಪಾಕಿಸ್ತಾನವನ್ನು ಮತ್ತೆ FATF ಬೂದು ಪಟ್ಟಿಗೆ ಸೇರಿಸಲು ಓವೈಸಿ ಒತ್ತಾಯ

ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಯಲು FATF ಬೂದು ಪಟ್ಟಿಗೆ ಸೇರಿಸಬೇಕೆಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿ ಭಾರತದಲ್ಲಿ ಅಸ್ಥಿರತೆ ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

2 Min read
Gowthami K
Published : May 29 2025, 01:55 PM IST| Updated : May 29 2025, 02:08 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : ANI

ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಬುಧವಾರ, ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಮಾಡುವುದನ್ನು ತಡೆಯಲು ಪಾಕಿಸ್ತಾನವನ್ನು ಮತ್ತೆ ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಬೂದು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಅವರು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷೀಯ ಭಾರತೀಯ ನಿಯೋಗದ ಭಾಗವಾಗಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿ, ಭಾರತದಲ್ಲಿ ಅಸ್ಥಿರತೆ ಉಂಟುಮಾಡಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಪಾಕಿಸ್ತಾನವನ್ನು ಎಫ್‌ಎಟಿಎಫ್ ಬೂದು ಪಟ್ಟಿಗೆ ಮತ್ತೆ ಸೇರಿಸಬೇಕಾಗಿದ್ದು, ಅಂದೇ ಮಾತ್ರ ನಾವು ಆ ಭಯೋತ್ಪಾದಕ ಗುಂಪುಗಳ ಹಣಕಾಸು ಮೂಲಗಳನ್ನು ನಿಯಂತ್ರಿಸಬಹುದು" ಎಂದು ಅವರು ಹೇಳಿದರು. ಅಮೆರಿಕದಿಂದ ಗುರುತಿಸಲ್ಪಟ್ಟ ಭಯೋತ್ಪಾದಕ ಮೊಹಮ್ಮದ್ ಎಹ್ಸಾನ್ ಜೊತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಕೈ ಕುಲಿಯುತ್ತಿರುವ ಛಾಯಾಚಿತ್ರವೊಂದನ್ನು ಉಲ್ಲೇಖಿಸಿದ ಓವೈಸಿ, "ಈ ಫೋಟೋವು ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವಿನ ನೇರ ಸಂಪರ್ಕಕ್ಕೆ ಸ್ಪಷ್ಟ ಪುರಾವೆಯಾಗಿದೆ. ಪಾಕಿಸ್ತಾನದಲ್ಲಿ ಈ ಸಂಘಟನೆಗಳು ಬೆಳೆಯುತ್ತಿವೆ, ಅವರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೇ, ಭಾರತದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳನ್ನು ಉಂಟುಮಾಡಿ ದೇಶವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ" ಎಂದು ಹೇಳಿದರು.

25
Image Credit : social media

ಪಾಕಿಸ್ತಾನ ತನ್ನ ಭಾರತ ವಿರೋಧಿ ನಿಲುವುಗಳನ್ನು ಹಿಂದೂ-ಮುಸ್ಲಿಂ ಸಮಸ್ಯೆಯಂತೆ ರೂಪಿಸಬೇಕೆಂಬ ಹೋರಾಟವನ್ನು AIMIM ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ 240 ಮಿಲಿಯನ್‌ಕ್ಕಿಂತ ಹೆಚ್ಚು ಹೆಮ್ಮೆಪಡುವ ಮುಸ್ಲಿಮರು ಬದುಕುತ್ತಿದ್ದಾರೆ. ಇಲ್ಲಿಗೆ ಅನೇಕ ಜಾಗತಿಕ ಮಟ್ಟದ ಇಸ್ಲಾಮಿಕ್ ಪಂಡಿತರೂ ಇದ್ದಾರೆ ಎಂದು ಅವರು ತಿಳಿಸಿದರು. ಸೌದಿ ಅರೇಬಿಯಾದಲ್ಲಿ ಭಾರತೀಯ ನಿಯೋಗದ ಭಾಗವಾಗಿ ಮಾತನಾಡಿದ ಓವೈಸಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ ನಂತರ ಭಾರತ ಸರ್ಕಾರ ನಡೆಸುತ್ತಿರುವ ಜಾಗತಿಕ ಸಂಪರ್ಕದ ಅಂಗವಾಗಿ ಓವೈಸಿ ಸೌದಿ ಅರೇಬಿಯಾದಿಗೆ ಭೇಟಿ ನೀಡಿದ್ದರು. ಅಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತಂತೆ ಮಾತನಾಡಿದರು.

Related Articles

Related image1
Asaduddin Owaisi attack ದಾಳಿ ಅಪಾಯ ತಗ್ಗಿಲ್ಲ, ಝಡ್‌ ಭದ್ರತೆ ಸ್ವೀಕರಿಸಿ: ಒವೈಸಿಗೆ ಸಚಿವ ಶಾ ಮನವಿ
Related image2
ಇದು ಪಾಕಿಸ್ತಾನ ಅಂದ್ರೆ: ನುಗ್ಗಿ ಹೊಡೆದ್ರೂ, ಆರ್ಮಿ ಚೀಫ್‌ಗೆ ಪ್ರಮೋಷನ್‌, ಫೀಲ್ಡ್‌ ಮಾರ್ಷಲ್‌ ಆದ ಅಸೀಮ್‌ ಮುನೀರ್‌!
35
Image Credit : ANI

"ಪಾಕಿಸ್ತಾನವು ನಾವು ಮುಸ್ಲಿಂ ರಾಷ್ಟ್ರ, ಭಾರತ ಅಲ್ಲ’ ಎಂಬ ತಪ್ಪು ಸಂದೇಶವನ್ನು ಮುಸ್ಲಿಂ ಜಗತ್ತಿಗೆ ಹರಡುತ್ತಿದೆ. ಇದು ತುಂಬಾ ದುಃಖಕರ. ಭಾರತದಲ್ಲಿ ವಾಸಿಸುತ್ತಿರುವುದಕ್ಕೆ ಹೆಮ್ಮೆಪಡುವ 24 ಕೋಟಿ ಭಾರತೀಯ ಮುಸ್ಲಿಮರಿದ್ದಾರೆ. ಶಾಂತಿಯುತವಾಗಿ ಬದುಕುತ್ತಿದ್ದಾರೆ. ನಮ್ಮ ಪಂಡಿತರು ಅರೆಬಿಕ್ ಭಾಷೆಯಲ್ಲಿಯೂ ಶ್ರೇಷ್ಠರು. ಪಾಕಿಸ್ತಾನಕ್ಕೆ ಇದು ಸಹಿಸಲಾರದು. ಮುಸ್ಲಿಂ ರಾಷ್ಟ್ರವಾಗಿರುವುದರಿಂದ ಭಾರತ ತಮಗೆ ತೊಂದರೆ ಕೊಡುತ್ತಿದೆ ಎಂಬ ಪಾಕಿಸ್ತಾನದ ಪ್ರಚಾರ ಸುಳ್ಳು ಎಂದು ಅವರು ಹೇಳಿದರು. ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ದಕ್ಷಿಣ ಏಷ್ಯಾದಲ್ಲಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಪ್ರಗತಿ ಸಾಧ್ಯ" ಎಂದರು.

45
Image Credit : Asianet News

ಭಾರತ ಮನಸ್ಸು ಮಾಡಿದ್ದರೆ ಪಾಕಿಸ್ತಾನದ ವಿಮಾನ ನಿಲ್ದಾಣಗಳನ್ನು ಸಂಪೂರ್ಣವಾಗಿ ನಾಶಮಾಡಬಹುದಿತ್ತು. ಆದರೆ ಎಚ್ಚರಿಕೆ ನೀಡಿದೆ. ಆ ಹಾದಿಯಲ್ಲಿ ಹೋಗಲು ನಮ್ಮನ್ನು ಒತ್ತಾಯಿಸಬೇಡಿ ಎಂದು ಹೇಳಲು ನಾವು ಬಯಸಿದ್ದೇವೆ. ಒಂಬತ್ತು ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಲಾಗಿದೆ. ಕೊಲ್ಲಲ್ಪಟ್ಟ ಭಯೋತ್ಪಾದಕರಿಗೆ ನಮಾಜ್ ಮಾಡಿದ ವ್ಯಕ್ತಿ ಯುಎಸ್ ಭಯೋತ್ಪಾದಕ ಎಂದು ತಿಳಿದು ಆಘಾತವಾಯಿತು ಎಂದು ಓವೈಸಿ ಹೇಳಿದರು. ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುವುದನ್ನು ತಡೆಗಟ್ಟಲು ಪಾಕಿಸ್ತಾನವನ್ನು ಮತ್ತೆ FATF (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಬೂದು ಪಟ್ಟಿಗೆ ಸೇರಿಸಬೇಕು ಎಂದು ಓವೈಸಿ ಒತ್ತಾಯಿಸಿದರು. "ಪಾಕಿಸ್ತಾನದ ಸೇನಾ ಮುಖ್ಯಸ್ಥರ ಪಕ್ಕದಲ್ಲೇ ಅಮೆರಿಕದ ವಾಂಟೆಡ್ ಭಯೋತ್ಪಾದಕ ಮೊಹಮ್ಮದ್ ಎಹ್ಸಾನ್ ಕುಳಿತಿದ್ದ ಫೋಟೋ ಇದೆ. ಇದು ಪಾಕಿಸ್ತಾನ ಹಾಗೂ ಭಯೋತ್ಪಾದಕರ ನಡುವಿನ ನೇರ ಸಂಪರ್ಕವನ್ನು ತೋರಿಸುತ್ತದೆ" ಎಂದರು.

55
Image Credit : ANI

26/11 ಬಳಿಕವೂ ಪಾಕಿಸ್ತಾನ ಕ್ರಮ ಕೈಗೊಂಡಿಲ್ಲ

"2008ರ ಮುಂಬೈ ದಾಳಿಯ ನಂತರ, ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಪಾಕಿಸ್ತಾನಕ್ಕೆ ಎಲ್ಲ ಪುರಾವೆಗಳನ್ನು ನೀಡಿತ್ತು. ಆದರೆ ಯಾವುದೇ ಕಾರ್ಯಾಚರಣೆ ಆಗಲಿಲ್ಲ. ನಂತರ ಭಾರತವು ಒಬ್ಬ ಪ್ರಮುಖ ಶಂಕಿತ ಸಾಜಿದ್ ಮಿರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು. ಆದರೆ ಪಾಕಿಸ್ತಾನ ಅವರು ಸತ್ತಿದ್ದಾರೆ ಎಂದು ಹೇಳಿತು. ಆಮೇಲೆ, ಅವರೇ ಜೀವಂತವಿದ್ದಾರೆ ಎಂದು ಹೇಳಿ, ಕೆಲವು ವರ್ಷಗಳ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿಸಿತು. ಆದರೆ ಆ ಶಿಕ್ಷೆ ಭಯೋತ್ಪಾದನೆಯ ಕಾರಣಕ್ಕಲ್ಲ ಬದಲಾಗಿ ಹಣಕಾಸು ವ್ಯವಹಾರಗಳ ಬಗ್ಗೆ" ಎಂದು ಓವೈಸಿ ಆರೋಪಿಸಿದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಪಾಕಿಸ್ತಾನ
ಭಾರತ
ಭಾರತ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved