ಈ ನಾಲ್ವರಲ್ಲಿ ಯಾರ ಬಳಿಯಲ್ಲಿದೆ ಅಂಬಾನಿ ಕುಟುಂಬದ ಅತ್ಯಂತ ದುಬಾರಿ ಬೆಲೆಯ ನೆಕ್ಲೇಸ್?
ನೀತಾ ಅಂಬಾನಿ, ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಅವರ ಆಭರಣ ಸಂಗ್ರಹಗಳನ್ನು ಮೀರಿಸುವ ಇಶಾ ಅಂಬಾನಿಯವರ ಹಾರ ಅದ್ಭುತವಾಗಿದೆ. 4,000 ಗಂಟೆಗಳಿಗೂ ಹೆಚ್ಚು ಕಾಲ ವಿನ್ಯಾಸಗೊಳಿಸಲಾದ ಈ ಹಾರದ ಮೌಲ್ಯವು ಒಂದು ಸಣ್ಣ ರಾಷ್ಟ್ರದ GDPಗೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ.
ನೀತಾ ಅಂಬಾನಿ
ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಭಾರತದ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು. ವ್ಯಾಪಾರ, ಸಮಾಜಸೇವೆ ಜೊತೆಗೆ ತಮ್ಮ ಐಷಾರಾಮಿ ಬಟ್ಟೆಗಳು ಮತ್ತು ಆಭರಣಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ನೀತಾ ಅಂಬಾನಿ ಮಾತ್ರವಲ್ಲ, ಅವರ ಸೊಸೆಯಂದಿರಾದ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಕೂಡ ಲಕ್ಷಾಂತರ ಮೌಲ್ಯದ ಹಾರಗಳನ್ನು ಹೊಂದಿರುವ ಅವರ ಸೊಗಸಾದ ಮತ್ತು ಅಮೂಲ್ಯವಾದ ಆಭರಣ ಸಂಗ್ರಹಗಳಿಗಾಗಿ ಗಮನ ಸೆಳೆಯುತ್ತಿದ್ದಾರೆ.
ನೀತಾ ಅಂಬಾನಿ
ಪ್ರಪಂಚದ ಅತ್ಯಮೂಲ್ಯ ಆಭರಣಗಳ ಸಂಗ್ರಹ ನೀತಾ ಅಂಬಾನಿಯವರಲ್ಲಿದೆ. ನೀತಾ ಅಂಬಾನಿಯವರ ಹಸಿರು ಪಚ್ಚೆ ಹಾರದ ಬಗ್ಗೆ ಅನೇಕರಿಗೆ ತಿಳಿದಿರುತ್ತದೆ. ವಜ್ರಗಳಿಂದ ಅಲಂಕರಿಸಲ್ಪಟ್ಟ ಈ ಹಾರದ ಬೆಲೆ 550 ಕೋಟಿ ಎಂದು ಹೇಳಲಾಗುತ್ತದೆ. ತಮ್ಮ ಹಿರಿಯ ಸೊಸೆ ಶ್ಲೋಕಾಗೆ ಹಲವು ಐಷಾರಾಮಿ ಹಾರಗಳನ್ನು ನೀತಾ ಅಂಬಾನಿ ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಒಂದು ಹಾರದ ಬೆಲೆ 450 ಕೋಟಿ ರೂ. ಎಂದು ವರದಿಯಾಗಿದೆ.
ಅಂಬಾನಿ ಕುಟುಂಬದ ಮಹಿಳೆಯರು
ಅಂಬಾನಿ ಕುಟುಂಬದಲ್ಲಿ ಅತ್ಯಂತ ದುಬಾರಿ ಹಾರ ಶ್ಲೋಕಾ ಮತ್ತು ರಾಧಿಕಾ ಬಳಿಯಲಿಲ್ಲ. ಅಂಬಾನಿ ಸೊಸೆಯಂದಿರು ಆಗಾಗ್ಗೆ ಸೊಗಸಾದ ವಜ್ರಗಳು, ರತ್ನಗಳು ಮತ್ತು ಚಿನ್ನದಿಂದ ಅಲಂಕರಿಸಲ್ಪಟ್ಟಿದ್ದರೂ, ಅವರ ಆಭರಣ ಸಂಗ್ರಹದಲ್ಲಿ ಕುಟುಂಬದ ಕೆಲವರಂತೆ ಅಮೂಲ್ಯವಾದ ಹಾರವಿಲ್ಲವಂತೆ.
ಇಶಾ ಅಂಬಾನಿ
ಇತ್ತೀಚೆಗೆ, ಇಶಾ ಅಂಬಾನಿ ತಮ್ಮ ಕಿರಿಯ ಸಹೋದರ ಅನಂತ್ ಮದುವೆಯಲ್ಲಿ ತಮ್ಮ ಔಟ್‌ಫಿಟ್‌ಗಳಿಂದಲೇ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲಿಯೂ ಇಶಾ ಧರಿಸಿದ್ದ ನೆಕ್ಲೇಸ್ ಎಲ್ಲರ ಗಮನ ಸೆಳೆದಿತ್ತು. ಭರಣ ವ್ಯಾಪಾರಿ ಕಾಂತಿಲಾಲ್ ಚೋಟಾಲಾಲ್ ಡಿಸೈನ್ ಮಾಡಿದ ಅಪರೂಪದ ಗುಲಾಬಿ, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ವಜ್ರ ಹೊಂದಿರುವ ನೆಕ್ಸ್ಲೇಸ್ ಅತ್ಯಂತ ದುಬಾರಿಯಾಗಿದೆ. ನುರಿತ . ಕುಶಲಕರ್ಮಿಗಳು ಸುಮಾರು 4 ಸಾವಿರ ಗಂಟೆಗೂ ಹೆಚ್ಚು ಕೆಲಸ ಮಾಡಿ ಈ ನೆಕ್ಲೇಸ್ ಡಿಸೈನ್ ಮಾಡಿದ್ದಾರೆ.
ಇಶಾ ಅಂಬಾನಿ
ಇಶಾ ಅವರ ಈ ನೆಕ್ಲೇಸ್‌ಗೆ ಮ್ಯಾಚ್ ಆಗುವಂತೆ ಬಳೆ ಮತ್ತು ಕಿವಿಯೊಲೆಯನ್ನು ಸಹ ಡಿಸೈನ್ ಮಾಡಲಾಗಿತ್ತು. ಈ ಅದ್ಭುತ ನೆಕ್ಲೇಸ್ ಬೆಲೆ ಎಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಈ ನೆಕ್ಲೇಸ್ ಅಂಬಾನಿ ಕುಟುಂಬದ ದುಬಾರಿ ಆಭರಣ ಎಂದು ಹೇಳಲಾಗಿದೆ.