ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?
ಜೂನ್ 12ರ ಅಹಮದಾಬಾದ್ ವಿಮಾನ ದುರಂತದಲ್ಲಿ 270 ಜನರು ಸಾವನ್ನಪ್ಪಿದ್ದರು. ಟಾಟಾ ಗ್ರೂಪ್ ಮೃತರಿಗೆ ಪರಿಹಾರ ಘೋಷಿಸಿತ್ತು. ವಿಮಾನಯಾನ ಕಂಪನಿಗಳು ವಿಮಾ ಕ್ಲೈಮ್‌ಗಳನ್ನು ಹೇಗೆ ಮಾಡಿಕೊಳ್ಳುತ್ತವೆ ಮತ್ತು ಅಹಮದಾಬಾದ್ ದುರಂತದಲ್ಲಿ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಜೂನ್ 12ರಂದು ಗುಜರಾತಿನ ಅಹಮಾದಾಬಾದ್ ಏರ್‌ಪೋರ್ಟ್‌ನಲ್ಲಿ ನಡೆದ ದುರಂತಕ್ಕೆ ಇಡೀ ಜಗತ್ತು ಕಣ್ಣೀರು ಹಾಕಿತ್ತು. ಟೇಕಾಫ್ ಆಗುತ್ತಿದ್ದಂತೆ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಪತನವಾಗಿತ್ತು. ಓರ್ವ ಪ್ರಯಾಣಿಕನನ್ನು ಹೊರತಪಡಿಸಿ ಇನ್ನುಳಿದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದರು.
ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 270 ಜನರು ಈ ದುರಂತದಲ್ಲಿ ಮೃತರಾಗಿದ್ದರು. ಪತನದ ಬಳಿಕ ವಿಮಾನಯಾನ ಕಂಪನಿ ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದೆ. ಟಾಟಾ ಗ್ರೂಪ್ ಕುಟುಂಬ ಮೃತ ಪ್ರಯಾಣಿಕರಿಗೆ ತಲಾ 1 ಕೋಟಿ ರೂ. ಪರಿಹಾರವನ್ನು ಘೋಷಿಸಿತ್ತು. ಇಂತಹ ದುರಂತದ ಬಳಿಕ ವಿಮಾನಯಾನ ಕಂಪನಿಗಳು ವಿಮೆ ಹಣಕ್ಕೆ ಅರ್ಜಿ ಸಲ್ಲಿಸುತ್ತವೆ. ಹಾಗಾದ್ರೆ ಅಹಮದಾಬಾದ್ ದುರಂತದ ಬಳಿಕ ವಿಮಾನಯಾನ ಕಂಪನಿಗೆ ಎಷ್ಟು ಹಣ ಸಿಗುತ್ತೆ ಎಂಬುದನ್ನು ನೋಡೋಣ ಬ
ವಿಮಾನ ಪತನದ ಬಳಿಕ ವಿಮಾನಯಾನ ಕಂಪನಿಗಳು ಹಲವು ರೀತಿಯಲ್ಲಿ ವಿಮಾ ಕ್ಲೈಮ್‌ಗಳನ್ನು ಮಾಡಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಇವುಗಳಲ್ಲಿ ಹಲ್ ವಿಮೆ, ಬಿಡಿ ಭಾಗಗಳ ವಿಮೆ ಮತ್ತು ಕಾನೂನು ಹೊಣೆಗಾರಿಕೆಯ ವಿಮೆ ಸೇರಿರುತ್ತದೆ.
ಪತನಕ್ಕೆ ಸಂಬಂಧಿಸಿದಂತೆ ವಿಮಾನಯಾನ ಕಂಪನಿ ತೆಗೆದುಕೊಂಡ ಕ್ಲೈಮ್‌ಗೆ ವಿಮಾನಕ್ಕಾದ ಹಾನಿ ಮತ್ತು ಪ್ರಯಾಣಿಕರ ಸಾವಿಗೂ ಪರಿಹಾರವನ್ನು ಪಡೆದುಕೊಳ್ಳುತ್ತದೆ. ಅಂದ್ರೆ ವಿಮಾನಕ್ಕಾದ ಸಂಪೂರ್ಣ ಹಾನಿಯು ಕಂಪನಿಗೆ ಲಭ್ಯವಾಗುತ್ತದೆ. ಪ್ರತಿಯೊಂದು ವಿಮಾನಯಾನ ಕಂಪನಿಗಳು ವಿಮೆ ಪಾಲಿಸಿ ಮಾಡಿಕೊಂಡಿರುತ್ತದೆ. ಹಾಗಾಗಿ ವಿಮಾನಕ್ಕಾದ ಸಂಪೂರ್ಣ ಹಾನಿ ಮತ್ತು ಪ್ರಯಾಣಿಕರ ಸಾವಿಗೂ ಕಂಪನಿ ಪರಿಹಾರ ಪಡೆದುಕೊಳ್ಳುತ್ತದೆ.
ಅಪಘಾತಕ್ಕೊಳಗಾದ ನಂತರ ವಿಮೆ ಕಂಪನಿಗೆ ವಿಮಾನಯಾನ ಸಂಸ್ಥೆ ವಿಮಾನದ ಮೌಲ್ಯವನ್ನು ದಾಖಲೆಸಹಿತ ತಿಳಿಸುತ್ತದೆ. ಈ ದಾಖಲೆಗಳಾಧರದ ಮೇಲೆ ವಿಮೆ ಕಂಪನಿ ನಷ್ಟವನ್ನು ನಿರ್ಧರಿಸುತ್ತದೆ. ಜೂನ್ 12ರಂದು ಬೋಯಿಂಗ್ 787 ಡ್ರೀಮ್‌ಲೈನರ್ ಪತನವಾಗಿತ್ತು. ಸದ್ಯದ ವರದಿಗಳ ಪ್ರಕಾರ, ಬೋಯಿಂಗ್ 787 ಡ್ರೀಮ್‌ಲೈನರ್ ಮಾರುಕಟ್ಟೆ ಮೌಲ್ಯ 211 ರಿಂದ 280 ಮಿಲಿಯನ್ ಡಾಲರ್ ಇರಬಹಹುದು ಎಂದು ಅಂದಾಜಿಸಲಾಗುತ್ತಿದೆ.
ವಿಮೆ ಮೊತ್ತ ಅಪಘಾತದಿಂದ ಮೂರನೇ ವ್ಯಕ್ತಿಗಾದ ಹಾನಿಯನ್ನು ಒಳಗೊಂಡಿರುತ್ತದೆ. ಹಾಸ್ಟೆಲ್ ಮೇಲೆ ವಿಮಾನ ಪತನವಾಗಿದ್ದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಈ ಪತನದಲ್ಲಿ ಮೂರನೇ ವ್ಯಕ್ತಿಗೂ ಹಾನಿಯಾಗಿದೆ. ಹಾಗಾಗಿ ಈ ನಷ್ಟವನ್ನು ವಿಮಾ ಕಂಪನಿಯು ಸಹ ಸರಿದೂಗಿಸಬಹುದು.
2400 ಕೋಟಿ ರೂಪಾಯಿ
ಈ ರೀತಿಯ ಎಲ್ಲಾ ಕ್ಲೈಮ್‌ಳನ್ನು ವಿಮಾನಯಾನ ಸಂಸ್ಥೆ ಪಡೆದುಕೊಳ್ಳುತ್ತದೆ. ವಿಮಾನಯಾನ ಕಂಪನಿ ನೂರಾರು ಕೋಟಿ ವಿಮೆಯನ್ನು ಪಡೆದುಕೊಳ್ಳಲಿದೆ. ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಟ್ಟು 211 ರಿಂದ 280 ಮಿಲಿಯನ್ ಡಾಲರ್ ವಿಮೆ ಕ್ಲೈಮ್ ಪಡೆಯಬಹುದು. ಈ ಮೊತ್ತ ಭಾರತೀಯ ರೂಪಾಯಿಗಳಲ್ಲಿ ಸುಮಾರು 2400 ಕೋಟಿ ರೂ.ಗಳವರೆಗೆ ಆಗಲಿದೆ.