MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ

ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ

ದೆಹಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾ ನಿರ್ಮಿತ ರೋಬೋಟ್ ಡಾಗ್‌ ಅನ್ನು ತಮ್ಮದೆಂದು ಪ್ರದರ್ಶಿಸಿ ರಾಷ್ಟ್ರೀಯ ಮುಜುಗರಕ್ಕೆ ಕಾರಣವಾಯಿತು. ಈ ವಿವಾದದ ನಂತರ, ವಿಶ್ವವಿದ್ಯಾಲಯವನ್ನು ಶೃಂಗಸಭೆಯಿಂದ ಹೊರಹಾಕಲಾಯಿತು ಈ ವಿವಾದದ ನಂತರ ಸರ್ಕಾರ ಎಚ್ಚರಿಕೆ ನೀಡಿದೆ.

2 Min read
Author : Anusha Kb
Published : Feb 18 2026, 08:51 PM IST
Share this Photo Gallery
  • FB
  • TW
  • Linkdin
  • Whatsapp
16
 ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಾಲ್ಗೋಟಿಯಾಸ್ ವಿವಿ ಅವಾಂತರ
Image Credit : Asianet News

ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಾಲ್ಗೋಟಿಯಾಸ್ ವಿವಿ ಅವಾಂತರ

ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ವಿಶ್ವ ಮಟ್ಟದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾ ನಿರ್ಮಿತ ರೋಬೋಟ್ ಡಾಗ್‌ ಅನ್ನು ತಮ್ಮದೆಂದು ತೋರಿಸಿ ದೇಶಕ್ಕೆ ಮುಜುಗರ ತಂದ ಗಾಲ್ಗೋಟಿಯಾಸ್ ವಿವಿಯನ್ನು ಈ ಶೃಂಗಸಭೆಯಿಂದ ಈಗಾಗಲೇ ಹೊರಗೆ ಕಳುಹಿಸಿರುವುದು ಗೊತ್ತೇ ಇದೆ. ಈ ರೋಬೋಡಾಗ್ ವಿವಾದದ ಮಧ್ಯೆ ಕೇಂದ್ರ ಸರ್ಕಾರ ಇಂದು ಈ ಶೃಂಗದಲ್ಲಿ ಭಾಗವಹಿಸುವ ಎಲ್ಲರಿಗೂ ಎಚ್ಚರಿಕೆ ನೀಡಿದ್ದು, ಇಲ್ಲಿ ಪ್ರದರ್ಶಕರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಹೇಳಿದೆ. ಪ್ರದರ್ಶಕರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಐಟಿ ಕಾರ್ಯದರ್ಶಿ ಎಸ್ ಕೃಷ್ಣನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

26
ವಿಶ್ವಮಟ್ಟದಲ್ಲಿ ದೇಶಕ್ಕೆ ಮುಜುಗರ
Image Credit : facebook@GalgotiasUniversity

ವಿಶ್ವಮಟ್ಟದಲ್ಲಿ ದೇಶಕ್ಕೆ ಮುಜುಗರ

2026 ರ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಈ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯವು ಚೀನೀ ಯುನಿಟ್ರೀ ರೋಬೋಡಾಗ್ ಅನ್ನು ತಾವೇ ನಿರ್ಮಿಸಿದ್ದು ಎಂದು ಹೇಳಿ ಪ್ರದರ್ಶನಕ್ಕಿಟ್ಟಿತ್ತು. ಶೃಂಗಸಭೆಯಲ್ಲಿ ವಿಶ್ವವಿದ್ಯಾನಿಲಯದ ಸ್ಟಾಲ್‌ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಈ ವಿಚಾರವನ್ನು ಗಮನಿಸಿ ಗಮನಸೆಳೆದರು.

Related Articles

Related image1
ಜಿಪ್‌ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ
Related image2
ಮುಗುಳ್ನಕ್ಕೂ ತಲೆಯಲ್ಲಾಡಿಸುವ ರಾಮಲಲ್ಲಾ: ಮೈ ರೋಮಾಂಚನಗೊಳಿಸುತ್ತಿದೆ ಎಐ ಸೃಷ್ಟಿಸಿದ ವೀಡಿಯೋ
36
ಚೀನಾದ ರೋಬೋವನ್ನು ತಾವೇ ನಿರ್ಮಿಸಿದ್ದಾಗಿ ಹೇಳಿಕೆ
Image Credit : ANI

ಚೀನಾದ ರೋಬೋವನ್ನು ತಾವೇ ನಿರ್ಮಿಸಿದ್ದಾಗಿ ಹೇಳಿಕೆ

ಚೀನಾದ ಯುನಿಟ್ರೀ ರೋಬೋಡಾಗ್ ಅನ್ನು ತನ್ನದೇ ಎಂದು ಹೇಳಿಕೊಂಡು ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ದೇಶಕ್ಕೆ ಮುಜುಗರ ಉಂಟುಮಾಡಿದ್ದಕ್ಕಾಗಿ ಈಗಾಗಲೇ ಈ 2026 ರ ಎಐ ಇಂಪ್ಯಾಕ್ಟ್ ಶೃಂಗಸಭೆಯಿಂದ ಗ್ಯಾಲ್ಗೋಟಿಯಾಸ್ ಕಾಲೇಜಿನ ಸ್ಟಾಲ್ ಅನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯವು ಈ ವಿಚಾರದಲ್ಲಿ ಆದ ಗೊಂದಲಕ್ಕೆ ಕಾಲೇಜಿನ ಪ್ರತಿನಿಧಿಯಾಗಿ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ನೇಹಾ ಸಿಂಗ್ ಅವರು ಕಾರಣ ಎಂದು ಆರೋಪಿಸಿದೆ. ತಮ್ಮ ಪ್ರತಿನಿಧಿಗೆ ತಿಳಿವಳಿಕೆ ಇಲ್ಲ ಮತ್ತು ಕ್ಯಾಮೆರಾದ ಮುಂದೆ ಉತ್ಸಾಹದಲ್ಲಿ ಅವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಅವರಿಗೆ ಮೀಡಿಯಾ ಮುಂದೆ ಮಾತನಾಡಲು ಅಧಿಕಾರವಿರಲಿಲ್ಲ ಎಂದು ಅದು ಹೇಳಿದೆ.

46
ವೀಡಿಯೋ ವೈರಲ್ ಆಗ್ತಿದ್ದಂತೆ ವಿವಾದ
Image Credit : x.com/PTI_News

ವೀಡಿಯೋ ವೈರಲ್ ಆಗ್ತಿದ್ದಂತೆ ವಿವಾದ

ಮಂಗಳವಾರ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು AI ಇಂಪ್ಯಾಕ್ಟ್ ಸಮ್ಮಿಟ್ 2026 ಸ್ಟಾಲ್‌ನಲ್ಲಿತನ್ನದೇ ಎಂದು ಹೇಳಿಕೊಂಡು ರೋಬೋಟ್ ನಾಯಿಯನ್ನು ಪ್ರದರ್ಶಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು. ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ರೋಬೋಡಾಗ್ ಬಗ್ಗೆ ವಿವರಿಸುತ್ತಾ ನೀವು ಓರಿಯನ್ ಅನ್ನು ಭೇಟಿ ಮಾಡಬೇಕು. ಇದನ್ನು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು. ಈ ಯಂತ್ರವು ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅದು ಕ್ಯಾಂಪಸ್‌ನಾದ್ಯಂತ ಮುಕ್ತವಾಗಿ ಚಲಿಸುತ್ತದೆ ಎಂದು ಹೇಳಿದರು.

56
 ಚೀನಾದ ರೊಬೊಟಿಕ್ಸ್ ಸಂಸ್ಥೆ ನಿರ್ಮಿಸಿದ್ದ ರೋಬೋ ಡಾಗ್
Image Credit : X@ANI

ಚೀನಾದ ರೊಬೊಟಿಕ್ಸ್ ಸಂಸ್ಥೆ ನಿರ್ಮಿಸಿದ್ದ ರೋಬೋ ಡಾಗ್

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಸ್ವಲ್ಪ ಸಮಯದಲ್ಲೇ ಹಲವಾರು ವೀಕ್ಷಕರು ರೋಬೋಟ್ ನಾಯಿಯನ್ನು ಚೀನಾದ ರೊಬೊಟಿಕ್ಸ್ ಸಂಸ್ಥೆ ಯುನಿಟ್ರೀಯಿಂದ ಪಡೆಯಲಾಗಿದೆ ಎಂದು ಹೇಳಿಕೊಂಡರು. ಇದನ್ನು ಚೀನಾದ ಯುನಿಟ್ರೀ ರೊಬೊಟಿಕ್ಸ್ 1,600 ಡಾಲರ್ ಆರಂಭಿಕ ಬೆಲೆಗೆ ಮಾರಾಟ ಮಾಡಿತು. ಸಂಶೋಧನೆ ಮತ್ತು ಶಿಕ್ಷಣದಲ್ಲಿ ಇದನ್ನು ವ್ಯಾಪಕವಾಗಿ ಬಳಸಲ್ಪಡುತ್ತದೆ. 

66
ಸ್ಪಷ್ಟನೆ ನೀಡಿದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ
Image Credit : X

ಸ್ಪಷ್ಟನೆ ನೀಡಿದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ

ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿತು, ಅದು ರೋಬೋಟ್ ನಾಯಿಯನ್ನು ತಯಾರಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ ಎಂದು ಹೇಳಿದೆ. ಗ್ಯಾಲ್ಗೋಟಿಯಾಸ್ ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ, ಅಥವಾ ನಾವು ಹಾಗೆ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ ಎಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕೃತಕ ಬುದ್ಧಿಮತ್ತೆ
ದೆಹಲಿ

Latest Videos
Recommended Stories
Recommended image1
5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್
Recommended image2
ಧಾರಾವಾಹಿ ನಟಿಗೆ ಕಿರುಕುಳ ಕೊಟ್ಟ ಯ್ಯೂಟೂಬರ್‌ಗಳಿಗೆ ಕಂಟಕ; ಸಿಎಂಗೆ ದೂರು ಕೊಟ್ಟ ಬೆನ್ನಲ್ಲೇ ಕಠಿಣ ಕ್ರಮ!
Recommended image3
ಹನುಮನ ಪಾದಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ ಬಲ್ಲಾಳದೇವ; 'ಬಾಹುಬಲಿ' ತಮ್ಮ ಆಂಜನೇಯನ ಪಾದ ಸೇರಿದ್ದೇಕೆ?
Related Stories
Recommended image1
ಜಿಪ್‌ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ
Recommended image2
ಮುಗುಳ್ನಕ್ಕೂ ತಲೆಯಲ್ಲಾಡಿಸುವ ರಾಮಲಲ್ಲಾ: ಮೈ ರೋಮಾಂಚನಗೊಳಿಸುತ್ತಿದೆ ಎಐ ಸೃಷ್ಟಿಸಿದ ವೀಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved