- Home
- News
- India News
- Ahmedabad Plane Crash: ಪತಿಗೋಸ್ಕರ ಹೋಗ್ತಿದ್ದ ನವ ವಧು; ಒಂದಾಗಿ ಬಾಳಲು ರೆಡಿಯಾಗಿದ್ದ ಕುಟುಂಬ! ಛೇ..
Ahmedabad Plane Crash: ಪತಿಗೋಸ್ಕರ ಹೋಗ್ತಿದ್ದ ನವ ವಧು; ಒಂದಾಗಿ ಬಾಳಲು ರೆಡಿಯಾಗಿದ್ದ ಕುಟುಂಬ! ಛೇ..
ಇಂದು ಅಹ್ಮದಾಬಾದ್ ವಿಮಾನ ದುರಂತದಲ್ಲಿ ಕುಟುಂಬದಿಂದ ದೂರವಾದ ಕಣ್ಣೀರಿನ ವಿದಾಯ, ಪತಿ & ಮೂವರು ಮಕ್ಕಳೊಂದಿಗಿನ ಕೊನೆಯ ಸಂತೋಷದ ಸೆಲ್ಫಿ , ಲಂಡನ್‌ನಲ್ಲಿ ಹೊಸ ಜೀವನ ಆರಂಭಿಸಲು ತೆರಳಿದ ವೈದ್ಯೆ, ಯುವ ವಧುವಿನ ಖುಷಿ ಎಲ್ಲವೂ ಸಜೀವ ದಹನವಾಗಿದೆ.

ಯಾವ ದೇಶದವರು ಎಷ್ಟಿದ್ದರು?
ಇಂದು ಅಹ್ಮದಾಬಾದ್‌ನಲ್ಲಿ ನಡೆದ ದುರಂತದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್‌ನಲ್ಲಿ ಯಾವುದೇ ಸ್ಟಾಪ್ ಇರಲಿಲ್ಲ. ಅಷ್ಟೇ ಅಲ್ಲದೆ 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಿಂತಲೂ ಹೆಚ್ಚು ತೀವ್ರ ದಹನಶೀಲ ವಾಯುಯಾನ ಇಂಧನ ಇತ್ತು ಎನ್ನಲಾಗಿದೆ. ಈ ವಿಮಾನದಲ್ಲಿ 242 ಜನರಿದ್ದರು. ಪ್ರಯಾಣಿಕರಲ್ಲಿ 169 ಭಾರತೀಯ ನಾಗರಿಕರು, 53 ಬ್ರಿಟಿಷ್ ನಾಗರಿಕರು, ಓರ್ವ ಕೆನಡಾದ ನಾಗರಿಕ, ಏಳು ಪೋರ್ಚುಗೀಸ್ ನಾಗರಿಕರು ಕೂಡ ಇದ್ದರು.
ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ
ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಈ ವಿಮಾನದಲ್ಲಿದ್ದರು. 1206 ನಂಬರ್ ಎಂದರೆ ಅವರಿಗೆ ತುಂಬ ಇಷ್ಟ. ಅವರ ಬೈಕ್, ಕಾರ್ ನಂಬರ್ ಕೂಡ ಇದೇ ರೀತಿ ಆಗಿತ್ತು. ಅದರಂತೆ ಇಂದಿನ ವಿಮಾನದ ನಂಬರ್ ಕೂಡ 12/06.
ಹಾಲಿಡೇಗೆ ಹೋಗಿದ್ದ ಇಬ್ಬರು ಮಕ್ಕಳು
ಈ ವಿಮಾನ ದುರಂತದಲ್ಲಿ ಉದಯಪುರದ ಮಾರ್ಬಲ್ ವ್ಯಾಪಾರಿ ಸಂಜೀವ್ ಮೋದಿ ಅವರು ತನ್ನ ಇಬ್ಬರು ಮಕ್ಕಳಾದ ಶಗುನ್, ಶುಭ್‌ರನ್ನು ಕಳೆದುಕೊಂಡಿದ್ದಾರೆ. ಹಾಲಿಡೇ ಎಂದು ಇವರಿಬ್ಬರು ಲಂಡನ್‌ಗೆ ತೆರಳಿದ್ದರು.
ಅಡುಗೆ ಮಾಡಲು ಹೋಗುತ್ತಿದ್ದ ಆ ಇಬ್ಬರು...!
ರಾಜಸ್ಥಾನದ 11 ಜನರು ಆ ವಿಮಾನದಲ್ಲಿದ್ದರು. ಇಂಗ್ಲೆಂಡ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡಲು ಹೋಗುತ್ತಿದ್ದ ಇಬ್ಬರು ಪುರುಷರು, ಮಾರ್ಬಲ್ ವ್ಯಾಪಾರಿಯ ಮಗ, ಮಗಳು ಕೂಡ ಇದ್ದರು. ರೋಹಿದ್ಯಾ ಗ್ರಾಮದವರಾದ ವೀರಚಂದ್, ಪ್ರಕಾಶ್ ಮೆನಾರಿಯಾ ಅವರೇ ಕೆಲಸ ಮಾಡುವವರಾಗಿದ್ದರು. ಅಹಮದಾಬಾದ್‌ನ ಉದ್ಯಮಿಯೋರ್ವರು ಲಂಡನ್‌ನಲ್ಲಿದ್ದರು. ವೀರಚಂದ್ ಈ ಹಿಂದೆ ಕೇಟರಿಂಗ್ ಉದ್ಯಮ ಮಾಡುತ್ತಿದ್ರೆ, ಪ್ರಕಾಶ್ ಅವರು ಪಾಕಶಾಸ್ತ್ರಜ್ಞರಾಗಿದ್ದರು.
ಪತಿಯನ್ನು ನೋಡಲು ಹೋಗ್ತಿದ್ದ ಆ ನವವಧು
ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ದುರಂತದಲ್ಲಿ ಯುವ ವಧು ಕೂಡ ಇದ್ದರು. ಕಳೆದ ಕೆಲವು ದಿನಗಳ ಹಿಂದೆ, ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಅರಬಾ ಎಂಬ ಹಳ್ಳಿಯ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ತನ್ನ ತವರಿಗೆ ಕಣ್ಣೀರಿನಿಂದಲೇ ವಿದಾಯ ಹೇಳಿದ್ದರು. ಲಂಡನ್‌ನಲ್ಲಿರುವ ತನ್ನ ಪತಿಯನ್ನು ಭೇಟಿ ಮಾಡಲು ಮೊದಲ ಬಾರಿಗೆ ಅವರು ವಿಮಾನ ಏರಿದ್ದರು. ಲಂಡನ್‌ನಲ್ಲಿ ಓದುತ್ತಿದ್ದ ಮನ್‌ಫೂಲ್ ಸಿಂಗ್‌ರನ್ನು ಖುಷ್ಬೂ ಮದುವೆಯಾಗಿದ್ದರು. ಮದುವೆಯಾದ ಬಳಿಕ ಮೊದಲ ಬಾರಿಗೆ ಲಂಡನ್‌ನಲ್ಲಿ ಸತಿ-ಪತಿ ಸಮಾಗಮ ಆಗಬೇಕಿತ್ತು. ವಿಮಾನ ನಿಲ್ದಾಣದ ಹೊರಗಡೆ ಖುಷ್ಬೂ ಅವರು ಸಂಬಂಧಿ ಜೊತೆಗೆ ಫೋಟೋ ತಗೊಂಡಿದ್ದರು.
ಕುಟುಂಬದ ಜೊತೆ ಬದುಕಲು ಕಾಯುತ್ತಿದ್ದ ಪತ್ನಿ, ಪತಿ, ಮಕ್ಕಳು
ಡಾ. ಕೋಮಿ ವ್ಯಾಸ್, ಅವರ ಪತಿ ಡಾ. ಪ್ರತೀಕ್ ಜೋಶಿ, ಅವರ ಮೂವರು ಮಕ್ಕಳು, ಅವಳಿ ಹುಡುಗರು, ಓರ್ವ ಹುಡುಗಿ ಕೂಡ ಅಲ್ಲಿದ್ದರು. ವಿಮಾನದಲ್ಲಿ ಈ ಸುಂದರ ಫ್ಯಾಮಿಲಿಯ ಫೋಟೋ ತೆಗೆಯಲಾಗಿತ್ತು. ಕೋಮಿ ಅವರು ಉದಯಪುರದ ಪೆಸಿಫಿಕ್ ಆಸ್ಪತ್ರೆಯ ವೈದ್ಯೆಯಾಗಿದ್ದರು. ಇತ್ತೀಚೆಗೆ ಕೋಮಿ ಅವರು ತನ್ನ ಕೆಲಸಕ್ಕೆ ಗುಡ್‌ಬೈ ಹೇಳಿ ಲಂಡನ್‌ಗೆ ಹೋಗಿ ಇಡೀ ಕುಟುಂಬದ ಜೊತೆಗೆ ಇರೋಕೆ ರೆಡಿಯಾಗಿದ್ದರು. ಲಂಡನ್‌ನಲ್ಲಿ ಮನೆ ಮಾಡುವ ಪ್ಲ್ಯಾನ್ ಇತ್ತು. ಕೋಮಿ ಅವರು ಹಂಚಿಕೊಂಡ ಕೊನೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಈಗ ನೆನಪಾಗಿ ಉಳಿದಿದೆ ಅಷ್ಟೇ.
ಓರ್ವ ಮಾತ್ರ ಬದುಕುಳಿದರು..!
ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ AI-171 ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯ್ತು. ನಗರ ಪೊಲೀಸ್ ಅಧಿಕಾರಿಯೊಬ್ಬರು ಯಾರೂ ಕೂಡ ಬದುಕುಳಿದಿಲ್ಲ ಎಂದು ಹೇಳಿದ್ದರು. ಆದರೆ ಸಂಜೆ ವೇಳೆಗೆ ಪೊಲೀಸರು ಒಬ್ಬರು ಬದುಕಿದ್ದಾರೆ ಎಂದರು. 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಸ್ವಲ್ಪ ಕಡಿಮೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರ ಸಹೋದರನ ಹುಡುಕಾಟ ನಡೆಯುತ್ತಿದೆ.
ಬೆಳಗ್ಗೆಯಷ್ಟೇ ಮಗನನ್ನು ಏರ್‌ಪೋರ್ಟ್‌ಗೆ ಬಿಟ್ಟಿದ್ದ ತಂದೆ
ಬಿಕಾನೆರ್‌ನ ಶ್ರೀ ದುಂಗಾಗಢ್‌ನವರಾದ ಅಭಿನವ್ ಪರಿಹಾರ್ ಕೂಡ ಸಾವನ್ನಪ್ಪಿದ್ದಾರೆ. ಇವರ ಫ್ಯಾಮಿಲಿಯು ಅಹಮದಾಬಾದ್‌ನಲ್ಲಿ ವಾಸಿಸುತ್ತಿದೆ. ಬೆಳಗ್ಗೆಯಷ್ಟೇ ಅಭಿನವ್‌ರನ್ನು ತಂದೆ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು.