ಅಹಮದಾಬಾದ್ ವಿಮಾನ ಪತನದ ಸ್ಥಳದಲ್ಲಿ 800 ಗ್ರಾಂ ಚಿನ್ನ ಪತ್ತೆ ಮಾಡಿದ ವ್ಯಕ್ತಿ
ಏರ್ ಇಂಡಿಯಾ ವಿಮಾನ ಪತನದಲ್ಲಿ ರಾಜು ಪಟೇಲ್ ತಂಡ ತ್ವರಿತವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಗಾಯಾಳುಗಳಿಗೆ ನೆರವಾದರು. ಪ್ರಯಾಣಿಕರ ವಸ್ತುಗಳನ್ನು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದರು.
14

Image Credit : Asianet News
ಜೂನ್ 12 ರಂದು ಏರ್ ಇಂಡಿಯಾ ವಿಮಾನ AI-171 ಪತನದ ಕೆಲವೇ ನಿಮಿಷಗಳಲ್ಲಿ, 56 ವರ್ಷದ ರಾಜು ಪಟೇಲ್ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಐದು ನಿಮಿಷಗಳಲ್ಲಿ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು.
24
Image Credit : Getty
"ಆರಂಭದಲ್ಲಿ ಬೆಂಕಿ ತುಂಬಾ ಜೋರಾಗಿತ್ತು, 20 ನಿಮಿಷಗಳ ಕಾಲ ಹತ್ತಿರ ಹೋಗಲು ಆಗಲಿಲ್ಲ" ಎಂದು ಪಟೇಲ್ ಹೇಳಿದರು. ಆಂಬ್ಯುಲೆನ್ಸ್ ಬಂದ ಮೇಲೆ ಗಾಯಾಳುಗಳಿಗೆ ನೆರವಾದರು.
34
Image Credit : Getty
ಪಟೇಲ್ ತಂಡ ಪ್ರಯಾಣಿಕರ ವಸ್ತುಗಳನ್ನು ಮರಳಿ ಪಡೆಯುವಲ್ಲಿ ನಿರತರಾದರು. 800 ಗ್ರಾಂ ಚಿನ್ನ, ₹80,000 ನಗದು, ಪಾಸ್ಪೋರ್ಟ್ ಮತ್ತು ಭಗವದ್ಗೀತೆ ಪುಸ್ತಕ ಸಿಕ್ಕವು. ಇವೆಲ್ಲವನ್ನು ಪೊಲೀಸರಿಗೆ ಒಪ್ಪಿಸಿದರು.
44
Image Credit : ANI
"ನೆರವು ನೀಡಲು ಸಾಧ್ಯವಾದ್ದಕ್ಕೆ ನನಗೆ ಸಂತೋಷ. ನಮ್ಮಿಂದಾದಷ್ಟು ಮಾಡಿದ್ದೀವಿ" ಎಂದರು. 2008ರ ಅಹಮದಾಬಾದ್ ಬಾಂಬ್ ಸ್ಫೋಟ ಸೇರಿದಂತೆ ಹಲವು ಸಂದರ್ಭಗಳಲ್ಲಿ ನೆರವು ನೀಡಿದ್ದಾರೆ. "ಆಗ ನಾನು ಆಸ್ಪತ್ರೆಯಿಂದ 100 ಮೀಟರ್ ದೂರದಲ್ಲಿದ್ದೆ. ಆದರೆ ಈ ದುರಂತ ಮರೆಯಲಾಗದು" ಎಂದು ಹೇಳಿದ್ದಾರೆ.
Latest Videos