ಚಿತ್ರ ಸಂಪುಟ: ಹತ್ತು ಮುಳುಗಿದ ಹೊತ್ತು; 10 ರಿಂದ 19 ಹೀಗಿತ್ತು!

First Published 1, Jan 2020, 10:57 AM

ಟೀನೇಜ್ ಮುಗಿಸಿದೆ 2000 ನೇ ಶತಮಾನ. ಇನ್ನು 2020 ರ ಪ್ರೌಢ ದಶಮಾನ ಶುರುವಾಗಿದೆ.  2019 ಇತಿಹಾಸ ಸೇರಿದೆ. ಹೊಸ ವರ್ಷದ ಸಂಭ್ರಮ ಈಗ ಶುರುವಾಗಿದೆ. ಕಳೆದ 10 ವರ್ಷಗಳಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ. 

ವಿಕಿಲೀಕ್ಸ್‌ನಿಂದ ಸ್ಫೋಟಕ ಮಾಹಿತಿ - ವಿಶ್ವವೇ ಒಮ್ಮೆ ಕಣ್ಣೆತ್ತಿ ನೋಡುವಂತೆ ಮಾಡಿದ ಪ್ರಹಸನ ಇದು. ಜೂಲಿಯನ್ ಅಸಾಂಜ್ ಅವರು ವಿಕಿಲೀಕ್ಸ್ ಹೆಸರಿನಲ್ಲಿ ಅಮೆರಿಕದ ಮಹತ್ವದ ರಹಸ್ಯ ಮಾಹಿತಿಗಳನ್ನು 2011 ರ ನವೆಂಬರ್ 28 ರಂದು ಬಹಿರಂಗಗೊಳಿಸಿದರು.

ವಿಶ್ವದ ಹುಟ್ಟಿನ ಗುಟ್ಟು ಅರಿಯಲು ವಿಶ್ವದ ವಿಜ್ಞಾನಿಗಳು ಒಂದೆಡೆ ಕಲೆತು ‘ಹಿಗ್ಸ್ ಬೋಸನ್’ ಎಂಬ ಪ್ರಯೋಗ ನಡೆಸಿದರು. ಭಾರತೀಯ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದರು.

2016 ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಾವ ಪದಕ ಗೆಲ್ಲದಿದ್ದರೂ ಜಗತ್ತೇ ಮಾತನಾಡುವಂತೆ ಮಾಡಿದ್ದು ದೀಪಾ ಕರ್ಮಾಕರ್.

2010 ರ ಮೇ 22 ರಂದು ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯಲ್ಲಿ 185  ಮಂದಿ ಪ್ರಯಾಣಿಕರು ಸಜೀವ ದಹನವಾದರು.

ಬೆಂಗಳೂರಿನ ಪ್ರತಿಷ್ಠಿತ ಚಿನ್ನಸ್ವಾಮಿ ಸ್ಟೇಡಿಯಂನ ಕಾಂಪೌಂಡ್ ಬಳಿ 2010 ರ ಏಪ್ರಿಲ್ 17 ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಟೇಡಿಯಂನ ಎರಡು ಕಡೆ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಪ್ರಾಣಹಾನಿಯಾಗಿರಲಿಲ್ಲ.

2001 ರ ಸಂಸತ್ ಭವನದ ಮೇಲಿನ ದಾಳಿ ಪ್ರಕರಣದ ರೂವಾರಿ ಅಫ್ಜಲ್ ಗುರುವನ್ನು 2013 ರ ಫೆ.8 ರಂದು ರಹಸ್ಯವಾಗಿ ನೇಣಿಗೇರಿಸಲಾಯಿತು.

ರಾಜ್ಯದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರಿಗೆ 2011 ರ ಸೆ. 19 ರಂದು ಜ್ಞಾನಪೀಠ ಪುರಸ್ಕಾರ ಘೋಷಣೆ ಆಯಿತು. ಇದರೊಂದಿಗೆ ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ 8 ನೇ ಜ್ಞಾನಪೀಠ ಪ್ರಶಸ್ತಿ ಸಿಕ್ಕಂತಾಯಿತು

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನ. 25 ರಂದು ನಡೆಯುತ್ತಿದ್ದ ಶಫೀಲ್ಡ್ ಫೀಲ್ಡ್ ಕ್ರಿಕೆಟ್ ಪಂದ್ಯದ ವೇಳೆ ಎದುರಾಳಿ ತಂಡದ ಶಾನ್ ಅಬೋಟ್ ಎಸೆದ ಬೌನ್ಸರ್ ತಲೆಗೆ ಬಡಿದು, ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಪ್ರತಿಭಾನ್ವಿತ ಕ್ರಿಕೆಟಿಗ ಫಿಲಿಪ್ ಹ್ಯೂಸ್ 2014 ರ ನ.27 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

2008  ರಲ್ಲಿ ಮುಂಬೈ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನ ಮೂಲದ ಲಷ್ಕರ್ ಉಗ್ರ ಅಜ್ಮಲ್ ಕಸಬ್‌ಗೆ 2012  ರ ನ. 21 ರಂದು ಪುಣೆಯ ಯೆರವಾಡ ಜೈಲಿನಲ್ಲಿ ರಹಸ್ಯವಾಗಿ ಗಲ್ಲು ಶಿಕ್ಷೆ ವಿಧಿಸಲಾಯಿತು.

2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಪ್ರಬಲ ಅಲೆಯ ಪರಿಣಾಮ 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 282 ಸ್ಥಾನ ಗೆದ್ದು ಮೊದಲ ಬಾರಿಗೆ ಏಕಾಂಗಿಯಾಗಿ ಬಹುಮತ ಗಳಿಸಿತು.

2012 ರ ಡಿ.16 ರಂದು ದೆಹಲಿಯಲ್ಲಿ 23 ವರ್ಷದ ಯುವತಿ ಮೇಲೆ ಅತ್ಯಂತ ಅಮಾನುಷ ರೀತಿ ಸಾಮೂಹಿಕ ಅತ್ಯಾಚಾರ ನಡೆಯಿತು. ಆಕೆ ಬದುಕುಳಿಯಲಿಲ್ಲ. ಈ ಪ್ರಕರಣ ಅತ್ಯಾಚಾರ ವಿರುದ್ಧ ದೇಶವಾಸಿಗಳು ಸಿಡಿದೇಳುವಂತೆ ಮಾಡಿತು. ಕಾನೂನಿಗೆ ತಿದ್ದುಪಡಿ ಮಾಡುವಂತಾಯಿತು. ಇದು ‘ನಿರ್ಭಯಾ ಅತ್ಯಾಚಾರ’ ಪ್ರಕರಣವೆಂದೇ ಜನಮಾನಸದಲ್ಲಿ ಉಳಿಯಿತು.

ಉತ್ತರಾಖಂಡದಲ್ಲಿ ಮೇಘಸ್ಫೋಟ ಉಂಟಾಗಿ 2013 ರ ಜೂ.16 ರಿಂದ 18 ರವರೆಗೆ ಪ್ರವಾಹ, ಭೂ ಕುಸಿತ ಉಂಟಾಯಿತು. ಪುರಾಣ ಪ್ರಸಿದ್ಧ ಕೇದಾರನಾಥ, ಬದರೀನಾಥ ಸೇರಿ ಹಲವೆಡೆ ಹಿಂದೆಂದೂ ಕಂಡರಿಯದ ಜಲ ಪ್ರಳಯ ಉಂಟಾಯಿತು. 5700 ಮಂದಿ ಮೃತಪಟ್ಟರು. ಕೇದಾರ ದೇಗುಲಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಇದು ಅಚ್ಚರಿಗೆ ಕಾರಣವಾಯಿತು.

ಭಾರತೀಯ ಬಾಹ್ಯಾಕಾಶ ಸಂಸ್ಥೆ 2013 ರ ನವೆಂಬರ್‌ನಲ್ಲಿ ಉಡಾವಣೆ ಮಾಡಿದ್ದ ಮಂಗಳಯಾನ ನೌಕೆ 2014 ರ ಸೆ. 24 ರಂದು ಸುಸೂತ್ರವಾಗಿ ಮಂಗಳ ಗ್ರಹದ ಕಕ್ಷೆ ಪ್ರವೇಶಿಸಿತು. ಈ ಮೂಲಕ ಮೊದಲ ಯತ್ನದಲ್ಲೇ ಯಶಸ್ವಿ ಮಂಗಳಯಾನ ಕೈಗೊಂಡ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

ನರ ವ್ಯವಸ್ಥೆಗೆ ಹಾನಿ ಮಾಡುವ ಮೂಲಕ ಮನುಷ್ಯನ ಸಾವಿಗೆ ಕಾರಣವಾಗಬಲ್ಲ ಎಎಲ್‌ಎಸ್ ರೋಗದ ಕುರಿತಾಗಿ ಅರಿವು ಮೂಡಿಸುವ ಸದುದ್ದೇಶದಿಂದ ಅಮೆರಿಕದಲ್ಲಿ 2014 ರಲ್ಲಿ ಐಸ್ ಬಕೆಟ್ ಚಾಲೆಂಜ್ ಆರಂಭವಾಗಿ ಜನಪ್ರಿಯವಾಯಿತು. ಮೈಮೇಲೆ ಕೊರೆಯುವ ಐಸ್ ನೀರನ್ನು ಸುರಿದುಕೊಳ್ಳುವುದೇ ಈ ಚಾಲೆಂಜ್ ಆಗಿತ್ತು.

ಪಾಕಿಸ್ತಾನದ ಸ್ವಾತ್ ಕಣಿವೆಯ ಹೆಣ್ಣುಮಗಳು ಮಲಾಲಾ. ಈಕೆ ಶಾಲೆಗೆ ಹೋಗುತ್ತಾಳೆ ಎಂಬ ಕಾರಣಕ್ಕೆ ತಾಲಿಬಾನ್ ಉಗ್ರರು 2012 ರ ಅ.9 ರಂದು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಈಕೆ ಬದುಕಿದಳು.

ಪಾಕಿಸ್ತಾನದ ಸ್ವಾತ್ ಕಣಿವೆಯ ಹೆಣ್ಣುಮಗಳು ಮಲಾಲಾ. ಈಕೆ ಶಾಲೆಗೆ ಹೋಗುತ್ತಾಳೆ ಎಂಬ ಕಾರಣಕ್ಕೆ ತಾಲಿಬಾನ್ ಉಗ್ರರು 2012 ರ ಅ.9 ರಂದು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಈಕೆ ಬದುಕಿದಳು.

2001 ರ ಸಂಸತ್ ಭವನದ ಮೇಲಿನ ದಾಳಿ ಪ್ರಕರಣದ ರೂವಾರಿ ಅಫ್ಜಲ್ ಗುರುವನ್ನು 2013 ರ ಫೆ.8 ರಂದು ರಹಸ್ಯವಾಗಿ ನೇಣಿಗೇರಿಸಲಾಯಿತು.

2001 ರ ಸಂಸತ್ ಭವನದ ಮೇಲಿನ ದಾಳಿ ಪ್ರಕರಣದ ರೂವಾರಿ ಅಫ್ಜಲ್ ಗುರುವನ್ನು 2013 ರ ಫೆ.8 ರಂದು ರಹಸ್ಯವಾಗಿ ನೇಣಿಗೇರಿಸಲಾಯಿತು.

ಕ್ರಿಕೆಟ್ ಪ್ರಪಂಚದಲ್ಲಿ ದೇವರು ಎಂದೇ ಹೆಸರು ಗಳಿಸಿರುವ ಸಚಿನ್ ತೆಂಡುಲ್ಕರ್ ಎಲ್ಲ ಮಾದರಿಯ ಕ್ರಿಕೆಟ್‌ಗೆ 2013 ರ ನ. 16 ರಂದು ನಿವೃತ್ತಿ ಘೋಷಿಸಿದರು. ಮುಂಬೈನಲ್ಲಿ ನಡೆದ ಪಂದ್ಯ ಮುಗಿದ ತಕ್ಷಣ ನಿವೃತ್ತಿ ಘೋಷಿಸಿ ಕ್ರಿಕೆಟ್ ಲೋಕಕ್ಕೆ ಅಚ್ಚರಿ, ಅಘಾತ ನೀಡಿದರು.

loader